ಕ್ರೀಡೆ/ಸಿನಿಮಾ

ರಾಕಿಂಗ್‌ ಸ್ಟಾರ್‌ ಯಶ್ ಬರ್ತ್‌ಡೇಗೆ ಬ್ಯಾನರ್‌ ಕಟ್ಟಿದ ಪ್ರಕರಣ ;ಯಶ್ ನೋಡಲು ಬಂದ ಮತ್ತೋರ್ವ ಅಭಿಮಾನಿಯ ಕೊನೆಯುಸಿರು..!ಏನಿದು ಘಟನೆ?

ನ್ಯೂಸ್ ನಾಟೌಟ್ :ನಿನ್ನೆಯಷ್ಟೇ ರಾಕಿಂಗ್ ಸ್ಟಾರ್‌ ಯಶ್ ಅವರ ಹುಟ್ಟಿದ ಹಬ್ಬ.ಈ ಹಿನ್ನಲೆಯಲ್ಲಿ ಅವರ ಹುಟ್ಟುಹಬ್ಬಕ್ಕೆ ಶುಭಕೋರುವ ಬ್ಯಾನರ್ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಮೂವರು ಅಭಿಮಾನಿಗಳು ದಾರುಣ ಅಂತ್ಯವಾಗಿರುವ ಘಟನೆ ವರದಿಯಾಗಿತ್ತು.ಇದೀಗ ಈ ಘಟನೆಯ ಬೆನ್ನಲ್ಲೇ ಮತ್ತೋರ್ವ ಯಶ್ ಅಭಿಮಾನಿಯೊಬ್ಬ ಕೊನೆಯುಸಿರೆಳೆದ ಘಟನೆ ಸಂಭವಿಸಿದೆ.

ನಿಖಿಲ್​​ ಕೊನೆಯುಸಿರೆಳೆದ ಯುವಕ.ಗದಗ ತಾಲೂಕಿನ ಬಿಂಕದಕಟ್ಟಿ ನಿವಾಸಿ. ಈತ ಯಶ್​ ನೋಡಲು ಬೈಕ್​ನಲ್ಲಿ ಹಿಂಬಾಲಿಸಿಕೊಂಡು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಈತ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಎಂದು ತಿಳಿದು ಬಂದಿದೆ.

ಗದಗ ಜಿಲ್ಲೆ ಸೊರಣಗಿ ಗ್ರಾಮದಲ್ಲಿ ಯಶ್ ಹುಟ್ಟುಹಬ್ಬದ ಅಂಗವಾಗಿ ತಡರಾತ್ರಿ ಕಟೌಟ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶದಿಂದ ಮುರಳಿ, ನವೀನ್, ಹನುಮಂತ ಎಂಬ ಮೂವರು ದುರಂತ ಅಂತ್ಯ ಕಂಡಿದ್ದರು. ಇನ್ನುಳಿದ ಮೂವರು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಈ ವಿಚಾರ ತಿಳಿದ ಯಶ್​​ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು.

ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಯಶ್ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಯಶ್​ ಅವರ ಮತ್ತೊರ್ವ ಅಭಿಮಾನಿ ನಿಖಿಲ್, ಯಶ್​ ಅವರು ಕಾರ್​ನಲ್ಲಿ ಬರುತ್ತಿರುವುದನ್ನು ನೋಡಿ ಹಿಂಬಾಲಿಸಿದ್ದಾನೆ. ಈ ವೇಳೆ ಪೊಲೀಸ್​ ಭದ್ರತಾ ವಾಹನಕ್ಕೆ ನಿಖಿಲ್ ಸ್ಕೂಟಿ ಡಿಕ್ಕಿ ಹೊಡೆದಿದೆ. ಈ ಅಪಘಾತ ಗದಗ ನಗರದ ತೇಜಾನಗರದಲ್ಲಿ ನಡೆದಿದೆ.ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ನಿಖಿಲ್‌ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಸದ್ಯ ಆಸ್ಪತ್ರೆ ಬಳಿ‌ ನಿಖಿಲ್ ಕುಟುಂಬಸ್ಥರ‌ ಆಕ್ರಂದನ ಮುಗಿಲು ಮುಟ್ಟಿದೆ.

Related posts

ಬ್ಯಾಂಕ್ ನೌಕರನ ಹೆಸರಲ್ಲಿ ಪುತ್ತೂರಿನ ವ್ಯಕ್ತಿಗೆ ಭಾರಿ ವಂಚನೆ, ಅಪ್ಪಿ ತಪ್ಪಿ ಅಪರಿಚಿತರಿಗೆ ನೀವು ಓಟಿಪಿ ಕೊಟ್ರೆ ನಿಮಗೂ ಹೀಗೆಯೇ ಆಗುತ್ತೆ..!

ನಟ ಶಿವರಾಜ್ ಕುಮಾರ್ ಕುಟುಂಬ ಸಮೇತ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ

ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅಧಿಕೃತ ವಿದಾಯ ಘೋಷಿಸಿದ ನಟ ಕಿಚ್ಚ ಸುದೀಪ್, ಏನಿದೆ ವಿದಾಯ ಮಾತಿನಲ್ಲಿ..?