ಕೊಡಗು

ಮಡಿಕೇರಿ:ಸಚಿವರ ಆಪ್ತ ಸಹಾಯಕರ ಸೋಗಿನಲ್ಲಿ ವಂಚನೆ:20 ಸಾವಿರ ರೂ. ಹಣದ ಅವಶ್ಯಕತೆಯಿದೆಯೆಂದು ಪಂಗನಾಮ..! ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?

ನ್ಯೂಸ್ ನಾಟೌಟ್ :ಸರ್ಕಾರಿ ಅಧಿಕಾರಿಯೊಬ್ಬರಿಂದ ಹಣ ಪಡೆದು ವಂಚಿಸಿದ್ದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.ಇವರು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಅವರ ಆಪ್ತ ಸಹಾಯಕರು ಎಂದು ಹೇಳಿಕೊಂಡು ಸರ್ಕಾರಿ ಅಧಿಕಾರಿಯೊಬ್ಬರಿಂದ ಹಣ ಪಡೆದು ವಂಚಿಸಿದ್ದರು ಎಂದು ಹೇಳಲಾಗಿತ್ತು.

ರಘುನಾಥ (34) ಮತ್ತು ಶಿವಮೂರ್ತಿ (35) ಬಂಧಿತರು.ಮೂಲತಃ ಮೈಸೂರಿನವರಾದ ಇವರಿಬ್ಬರು ಕುಶಾಲನಗರ ತಾಲೂಕಿನ ಕಂದಾಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಚ್.ಎನ್‌. ಸಂತೋಷ್ ಎಂಬುವರ ಮೊಬೈಲ್ ಗೆ ನ.19 ರಂದು ರಾತ್ರಿ 9 ಗಂಟೆ ಸಮಯದಲ್ಲಿ ಕರೆ ಮಾಡಿರುವುದಾಗಿ ವರದಿಯಾಗಿತ್ತು.ಹೀಗೆ ಕರೆ ಮಾಡಿದಾಗ ‘ತಾವು ಸಚಿವರ ಆಪ್ತ ಸಹಾಯಕರು,ತಮಗೆ ತುರ್ತಾಗಿ 20 ಸಾವಿರ ರೂ. ಹಣದ ಅವಶ್ಯಕತೆಯಿದೆ. ಗೂಗಲ್ ಪೇ ಮೂಲಕ ಕಳುಹಿಸಿಕೊಡಿ ,ಹಣವನ್ನು ಆದಷ್ಟು ಬೇಗ ಹಿಂತಿರುಗಿಸುತ್ತೇವೆ ಎಂದು ಬೇಡಿಕೆಯಿಟ್ಟಿದ್ದಾರೆ.ಅವರ ಮಾತನ್ನು ನಂಬಿದ ಕಂದಾಯ ನಿರೀಕ್ಷಕ ಸಂತೋಷ್ ಎಂಬವರು ಕೂಡಲೇ 20 ಸಾವಿರವನ್ನು ಗೂಗಲ್ ಪೇ ಮೂಲಕ ಕಳುಹಿಸಿದ್ದರು. ಮರುದಿನ ಹಣದ ವಿಚಾರವಾಗಿ ಸಂತೋಷ್ ಅವರು ಸಚಿವರ ಕಚೇರಿಯಲ್ಲಿ ಪ್ರಸ್ತಾಪಿಸಿದಾಗ ಹಣ ಪಡೆದವರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದರು. ಬಳಿಕ, ತಾವು ವಂಚನೆಗೊಳಗಾಗಿರುವುದನ್ನು ಅರಿತ ಅಧಿಕಾರಿ ಸಂತೋಷ್, ಪೊಲೀಸರಿಗೆ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಆರೋಪಿಗಳನ್ನು ಇದೀಗ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Related posts

ಗೋಳಿತ್ತೊಟ್ಟು:ಬೈಕ್-ಕಾರು ಡಿಕ್ಕಿ, ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ (ಕೆಎಸ್ಆರ್‌ಟಿಸಿ ಚಾಲಕ) ಮೃತ್ಯು

ಕಾಫಿ ತೋಟದೊಳಗೆ ಎರಡು ಗೋವುಗಳ ಕಳೇಬರ ಪತ್ತೆ ,ಪ್ರಕರಣ ದಾಖಲಿಸಿಕೊಂಡ ಪೊಲೀಸರು

ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ, ಭಾಗಮಂಡಲ ತಲಕಾವೇರಿ, ನಾಪೋಕ್ಲು ತಲಕಾವೇರಿ ರಸ್ತೆ ಬಂದ್