ಕರಾವಳಿಕೊಡಗು

ಕಾಫಿ ತೋಟದೊಳಗೆ ಎರಡು ಗೋವುಗಳ ಕಳೇಬರ ಪತ್ತೆ ,ಪ್ರಕರಣ ದಾಖಲಿಸಿಕೊಂಡ ಪೊಲೀಸರು

165
Spread the love

ನ್ಯೂಸ್ ನಾಟೌಟ್ : ಎರಡು ಗೋವುಗಳನ್ನು ಹತ್ಯೆ ಮಾಡಿ ಕಳೇಬರವನ್ನು ಕಾಫಿ ತೋಟದಲ್ಲಿ ಹೂತಿಟ್ಟಿದ್ದ ಆರೋಪದಡಿ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸ್ಥಳ ಮಹಜರು ನಡೆಸಿದ ಆನಂತರ ಪ್ರಕರಣ ದಾಖಲಿಸಿಕೊಂಡರು.

ಸುಂಟಿಕೊಪ್ಪ ಬಳಿಯ ಗರಗಂದೂರು ಸಮೀಪದ ಹಾರಂಗಿ ಹಿನ್ನೀರು ಸಮೀಪ ಲತೀಫ್ ಅವರ ಕಾಫಿ ತೋಟದಲ್ಲಿ ಎರಡು ದಿನಗಳ ಹಿಂದೆ ಗೋವುಗಳನ್ನು ಹತ್ಯೆ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ. ಹಿಂದೂ ಜಾಗರಣ ವೇದಿಕೆ ನೀಡಿದ ದೂರಿನ ಹಿನ್ನೆಲೆ ಸ್ಥಳಕ್ಕೆ ಬಂದ ಪೊಲೀಸರು ಮಣ್ಣಿನಡಿ ಇದ್ದ ಗೋವಿನ ಕಳೇಬರದ ತ್ಯಾಜ್ಯಗಳನ್ನು ಹೊರ ತೆಗೆದರು. ಸ್ಥಳ ಮಹಜರು ನಡೆಸಿದ ಆನಂತರ ಪ್ರಕರಣ ದಾಖಲಿಸಿಕೊಂಡರು.ಸುಂಟಿಕೊಪ್ಪ ಪೋಲೀಸ್ ಠಾಣಾ ಅಪರಾಧ ವಿಭಾಗದ ಠಾಣಾಧಿಕಾರಿ ಸ್ವಾಮಿ, ಸಿಬ್ಬಂದಿಗಳಾದ ಸತೀಶ್, ಜಗದೀಶ್, ಶ್ರೀಕಾಂತ್, ಬಿರದಾರ ಹಾಗೂ ಜೈಶಂಕರ್ ಸ್ಥಳಪರಿಶೀಲನೆ ನಡೆಸಿದರು.

See also  ಬಿಜೆಪಿ ಮುಖಂಡನ ಬರ್ಬರ ಹತ್ಯೆ
  Ad Widget   Ad Widget   Ad Widget   Ad Widget   Ad Widget   Ad Widget