ದೇಶ-ಪ್ರಪಂಚದೇಶ-ವಿದೇಶವಿಡಿಯೋವೈರಲ್ ನ್ಯೂಸ್

ತೊಡೆಯಿಂದ ಕಲ್ಲಂಗಡಿ ಹಣ್ಣುಗಳನ್ನು ಪುಡಿ ಮಾಡಿ ಗಿನ್ನಿಸ್ ದಾಖಲೆ ಬರೆದ ಟರ್ಕಿ ಮಹಿಳೆ..! ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್ : ಕೆಲವರು ಗಿನ್ನಿಸ್ ದಾಖಲೆ ಮಾಡಬೇಕೆಂದು ಹೊಸ, ಹೊಸ ಹುಚ್ಚು ಪ್ರಯತ್ನಕ್ಕೆ ಮುಂದಾಗುತ್ತಾರೆ. ಇಲ್ಲೊಬ್ಬಳು ಮಹಿಳೆ ತನ್ನ ತೊಡೆಯಿಂದಲೇ ಕಲ್ಲಂಗಡಿ ಹಣ್ಣುಗಳನ್ನು ಪುಡಿ ಮಾಡಿ ಅಚ್ಚರಿ ಮೂಡಿಸಿದ್ದಾಳೆ.

ಟರ್ಕಿ ಮೂಲದ ಮಹಿಳೆ ಕೇವಲ ಒಂದೇ ನಿಮಿಷದಲ್ಲಿ ಅತಿ ಹೆಚ್ಚು ಕಲ್ಲಂಗಡಿಗಳನ್ನು ತನ್ನ ತೊಡೆಯಿಂದ ಪುಡಿಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದಾಳೆ. ಈ ಮಹಿಳೆಯ ಹೆಸರು ಗೊಜ್ಡೆ ಡೋಗನ್. ಕಳೆದ ವರ್ಷ ಫೆ.5 ರಂದು ಇಟಲಿಯ ಮಿಲನ್‌ ನಲ್ಲಿ ಲೊ ಶೋ ಡೀ ದಾಖಲೆಗಾಗಿ ನಿಗದಿಪಡಿಸಿದ ಸಮಯದೊಳಗೆ ಗೊಜ್ಡೆ ಡೋಗನ್ ಐದು ಕಲ್ಲಂಗಡಿಗಳನ್ನು ಪುಡಿಮಾಡಿ ಸೈ ಎನಿಸಿಕೊಂಡಿದ್ದಳು. ಆದರೆ, ಅದರ ಅಧಿಕೃತ ಗಿನ್ನಿಸ್ ದಾಖಲೆಯನ್ನು Guinness World Records ಎಂಬ ಹೆಸರಿನ ಸಾಮಾಜಿಕ ಜಾಲತಾಣದಲ್ಲಿ ಜ.17ರಂದು ಘೋಷಿಸಿ, ಹಂಚಿಕೊಳ್ಳಲಾಗಿದೆ.

ಆದರೆ ಇತ್ತೀಚೆಗಷ್ಟೇ ಈ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ನ ಅಧಿಕೃತ ಇನ್‌ ಸ್ಟಾಗ್ರಾಮ್ ಖಾತೆಯಲ್ಲಿ ಈ ಮಹಿಳೆಯ ಸಾಧನೆಯ ವಿಡಿಯೋವೊಂದು ಹಂಚಿಕೊಳ್ಳಲಾಗಿದೆ. ಈ ವಿಡಿಯೋದೊಂದಿಗೆ, ಒಂದು ನಿಮಿಷದಲ್ಲಿ ತನ್ನ ತೊಡೆಗಳಿಂದ ಕಲ್ಲಂಗಡಿಗಳನ್ನು ಪುಡಿಮಾಡಿದರು ಎಂದು ಶೀರ್ಷಿಕೆ ನೀಡಲಾಗಿದೆ.

ಗಿನ್ನಿಸ್ ದಾಖಲೆ ನಿರ್ಮಿಸಿದ ಗೊಜ್ಡೆ ಡೋಗನ್ ಅವರು ಇದರ ಒಂದೆರಡು ವೀಡಿಯೊಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಈಗ ನನ್ನ ಹೆಸರು ಬುಕ್ ಆಫ್ ರೆಕಾರ್ಡ್ಸ್‌ನಲ್ಲಿದೆ. ಕೇವಲ ಕಾಲುಗಳನ್ನು ಬಳಸಿ ಒಂದು ನಿಮಿಷದಲ್ಲಿ 5 ಕಲ್ಲಂಗಡಿಗಳನ್ನು ಮುರಿದ ದಾಖಲೆಯನ್ನು ನಾನು ಹೊಂದಿದ್ದೇನೆ. ಒಂದು ನಿಮಿಷದಲ್ಲಿ ಇದನ್ನು ಮಾಡುವುದು ಸುಲಭವಲ್ಲ ಎಂದು ತಮ್ಮ ಗೆಲುವಿನ ಬಗ್ಗೆ ಖುಷಿಯಿಂದ ಪ್ರತಿಕ್ರಿಯಿಸಿದ್ದಾಳೆ.

Click

https://newsnotout.com/2025/01/maruti-suzuki-kannada-news-electric-car-auto-mobile/
https://newsnotout.com/2025/01/kannada-news-teatment-to-dog-kannada-news-viral-news/
https://newsnotout.com/2025/01/atm-scam-kananda-news-ban-depositer-viral-news/
https://newsnotout.com/2025/01/bengaluru-kannada-news-air-show-in-yalahanka-jan-to-feb/
https://newsnotout.com/2025/01/kolkatta-doctor-case-kannada-news-sanjay-roy-court-issue/

Related posts

ಕೇದಾರನಾಥದ ಮಾರ್ಗದಲ್ಲಿ ಭಾರೀ ಭೂಕುಸಿತ..! ಮೃತರ ಸಂಖ್ಯೆ 5ಕ್ಕೆ ಏರಿಕೆ, ಭಕ್ತರಿಗೆ ತೆರಳದಂತೆ ಎಚ್ಚರಿಕೆ..!

ಮಂತ್ರಾಲಯದ ಗುರುರಾಯರ ದರ್ಶನ ಪಡೆದು ಬಳ್ಳಾರಿಗೆ ತೆರಳಿದ ದರ್ಶನ್‌ ಪತ್ನಿ, ರಾತ್ರಿಯೇ ಬಂದು ಮಂತ್ರಾಲಯದಲ್ಲಿ ತಂಗಿದ್ದ ವಿಜಯಲಕ್ಷ್ಮಿ..!

ಪೂರ್ವ ಲಡಾಖ್ ನಲ್ಲಿ ಸೇನೆ ಬಲಪಡಿಸುತ್ತಿರುವ ಚೀನಾ