ಕರಾವಳಿ

ತುಳುನಾಡಿನ ದೈವ ಕೋಲ ಪ್ರದರ್ಶನಕ್ಕಿಟ್ಟ ವಸ್ತುವಲ್ಲ, ಸದನದಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್‌ ಆಕ್ರೋಶ

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಜನರ ಬದುಕಿನಲ್ಲಿ ದೈವರಾದನೆ ಅನ್ನುವುದು ಹಾಸುಹೊಕ್ಕಾಗಿದೆ. ಹೆಚ್ಚಿನ ಕುಟುಂಬಗಳು ದೈವಗಳ ಮೇಲಿನ ನಂಬಿಕೆಯ ಆಧಾರದಲ್ಲಿಯೇ ಜೀವಿಸುತ್ತಿವೆ. ಇಂತಹ ಸಂದರ್ಭದಲ್ಲಿ ದೈವರಾದನೆಯನ್ನು ಶಾಲಾ ಮಕ್ಕಳ ಪ್ರತಿಭಾ ಕಾರಂಜಿಯಲ್ಲಿ ಸೇರಿಸಿ ಪ್ರದರ್ಶನ ಕಲೆಯಾಗಿ ಅಳವಡಿಸುವ ನಿಯಮವನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಒತ್ತಾಯಿಸಿದ್ದಾರೆ.

ಸದನದಲ್ಲಿ ಈ ಬಗ್ಗೆ ಸುನಿಲ್ ಕುಮಾರ್‌ ವಿಶೇಷವಾದ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿದರು. ಸರ್ಕಾರ ಈ ಬಗ್ಗೆ ಗಂಭೀರವಾದ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಚರ್ಚಿಸಿ ನಿರ್ಧಾರಕ್ಕೆ ಬರಲಾಗುತ್ತದೆ ಎಂದು ತಿಳಿಸಿದರು.

Related posts

ಖ್ಯಾತ ನಟ ಕಿಚ್ಚ ಸುದೀಪ್ ರಾಜಕೀಯ ಪ್ರವೇಶಕ್ಕೆ ಕ್ಷಣಗಣನೆ? ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಸ್‌ಎಸ್‌ಎಲ್‌ಸಿ ರಂಗ?

ಸುಳ್ಯ: 7,000 ರೂ. ಮೌಲ್ಯದ ಸಿಗರೇಟ್, 10,000 ರೂ. ನಗದು ದೋಚಿ ಕತ್ತಲಲ್ಲಿ ಕಳ್ಳರು ಪರಾರಿ..! ರಾಷ್ಟ್ರೀಯ ಹೆದ್ದಾರಿ ಬದಿಯ ಅಂಗಡಿಗಳಿಗೆ ನುಗ್ಗಿ ಕಳ್ಳರ ಕೈ ಚಳಕ..!

ಸುಳ್ಯ: ಕೆ.ವಿ.ಜಿ. ಪಾಲಿಟೆಕ್ನಿಕ್ ನಲ್ಲಿ ವಾರ್ಷಿಕ ಕ್ರೀಡಾಕೂಟ,ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಅವಶ್ಯಕ: ಎನ್.ಎ.ರಾಮಚಂದ್ರ