ದೇಶ-ಪ್ರಪಂಚ

ಮದ್ಯದ ನಶೆಯಲ್ಲಿ ತೇಲಾಡಿದ್ದ ಮದುಮಗ ,ವಧುವಿಗೆ ಹಾರ ಹಾಕೋ ಬದಲು ಬೇರೋಬ್ಬಳಿಗೆ ಹಾರ ಹಾಕಿದ..!ಮುಂದೇನಾಯ್ತು ಗೊತ್ತಾ?ವಿಡಿಯೋ ವೀಕ್ಷಿಸಿ..

ನ್ಯೂಸ್ ನಾಟೌಟ್ : ಮದುವೆ ಮನೆಗಳಲ್ಲಿ ಏನಾದರೊಂದು ಕಾಮಿಡಿ ಘಟನೆಗಳು ನಡೆಯುತ್ತಲೇ ಇರುತ್ತವೆ.ಮೊನ್ನೆಯಷ್ಟೇ ವಧುವೊಬ್ಬಳು ಕುಡಿದು ಟೈಟಾಗಿದ್ದ ಯುವಕನ ಕೆನ್ನೆಗೆ ಬಾರಿಸಿದ್ದಳು.ಇದೀಗ ಮತ್ತೊಂದು ಘಟನೆ ವರದಿಯಾಗಿದೆ.ಈ ಬಾರಿ ವರದ ಕುಡಿದು ತೂರಾಡಿದ್ದು ವಧುವಿಗೆ ಹಾರ ಹಾಕೋ ಬದಲು ಮತ್ತೊಬ್ಬ ಯುವತಿಗೆ ಹಾರ ಹಾಕಿರುವ ಘಟನೆ ನಡೆದಿದೆ.

ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದೆ.ಎರಡೇ ದಿನದಲ್ಲಿ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ.ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ವರನಿಗೆ ಕಪಾಳಮೋಕ್ಷ ಮಾಡುತ್ತಿರುವುದನ್ನು ಕಾಣಬಹುದು. ಬದಿಯಲ್ಲೇ ವಧು ನಿಂತಿರುವುದನ್ನು ಕಾಣಬಹುದು. ಮದ್ಯದ ನಶೆಯಲ್ಲಿ ವರ ತೂರಾಡುತ್ತಿದ್ದು,ವಧುವಿನ ಬದಲು ಬೇರೊಬ್ಬಳಿಗೆ ಹಾರ ಹಾಕಿದ ಪರಿಣಾಮ ವರನಿಗೆ ಬೈದು ಕಪಾಳಮೋಕ್ಷ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕೆಲ ಹೊತ್ತಿನ ಬಳಿಕ ವರ “ನನಗೆ ನನ್ನ ಸ್ನೇಹಿತರು ಪೆಪ್ಸಿ ಎಂದು ಮದ್ಯ ನೀಡಿದ್ದರು. ಆದ್ದರಿಂದ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತಿದ್ದೇನೆ” ಎಂದು ಹೇಳುತ್ತಿರುವುದನ್ನು ಕಾಣಬಹುದು.

ಈ ವಿಡಿಯೋವನ್ನು ಡಿಸೆಂಬರ್​​​ 25ರಂದು @HasnaZaruriHai ಎಂಬ ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋ ಹಂಚಿಕೊಂಡ ಕೇವಲ ಎರಡೇ ದಿನಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ. ಜೊತೆಗೆ ‘ಸ್ನೇಹಿತರು ನೀಡುವ ಪೆಪ್ಸಿ ಆರೋಗ್ಯಕ್ಕೆ ಅಪಾಯಕಾರಿ’ ಎಂದು ವಿಡಿಯೋಗೆ ಕ್ಯಾಪ್ಷನ್​​ ಬರೆಯಲಾಗಿದೆ.

Related posts

‘ಪರೇಡ್’ನಲ್ಲಿ ದೇಶದ ಗಮನ ಸೆಳೆದ ಕರ್ನಾಟಕದ ಸ್ತಬ್ದಚಿತ್ರ,14 ವರ್ಷಗಳಿಂದ ಪಥಸಂಚಲನದಲ್ಲಿ ಪಾಲ್ಗೊಂಡ ದೇಶದ ಏಕೈಕ ರಾಜ್ಯ

ಅಯೋಧ್ಯೆ ರಾಮಮಂದಿರಕ್ಕೆ 1,11,111 ಕೆಜಿ ಲಡ್ಡು ತಯಾರಿ, ಕಳೆಗಟ್ಟಿದ ರಾಮನವಮಿ ಸಂಭ್ರಮ

ಶಾಲಾ ಬಾಲಕಿಗೆ ತಿಂಡಿ-ಜ್ಯೂಸ್ ಕೊಡಿಸಿ ಕಾಡಿಗೆ ಕರೆದೊಯ್ದು ಕಿರಾತಕ! ಮೂರು ದಿನಗಳ ಬಳಿಕ ಶವ ಪತ್ತೆ!