ಕ್ರೈಂದೇಶ-ಪ್ರಪಂಚ

ಹುಡುಗಿ ಮೇಲಲ್ಲ, ಹುಡುಗನ ಮೇಲೆ ಪ್ರೇಯಸಿಯಿಂದ ಆ್ಯಸಿಡ್ ದಾಳಿ..! ‘ಕ್ರೈಮ್‌ ಶೋ’ ವೊಂದು ಆಕೆಯ ಕೃತ್ಯಕ್ಕೆ ಪ್ರೇರಣೆ..!

ನ್ಯೂಸ್ ನಾಟೌಟ್ :  ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನ ಮೇಲೆ ಆ್ಯಸಿಡ್ ಎರಚಿರುವ ಘಟನೆ ಛತ್ತೀಸ್‌ಗಢದ ಛೋಟೆ ಅಮಬಲ್ ಗ್ರಾಮದಲ್ಲಿ ಎ.19 ರಂದು ಈ ಘಟನೆ ನಡೆದಿರುವುದು ವರದಿಯಾಗಿದೆ.

ದಮೃಧರ್ ಬಾಘೇಲ್ (25) ಎಂಬಾತ 19 ವರ್ಷದ ಯುವತಿ ಜೊತೆ ವಿವಾಹವಾಗಲಿದ್ದರು. ಈ ವಿಚಾರವನ್ನು ತಿಳಿದ ದಮೃಧರ್ ಅವರ ಮಾಜಿ ಪ್ರಿಯತಮೆ ಈ ಕೃತ್ಯವನ್ನು ಎಸಗಿದ್ದಾಳೆ.

ಕಳೆದ ಕೆಲ ಸಮಯದಿಂದ 23 ವರ್ಷದ ಯುವತಿ  ದಮೃಧರ್ ನನ್ನು ಪ್ರೀತಿಸುತ್ತಿದ್ದಳು. ಆದರೆ ಇದ್ದಕ್ಕಿದ್ದಂತೆ ಪ್ರಿಯಕರ ದಮೃಧರ್ ಯುವತಿಗೆ ಕೈಕೊಟ್ಟಿದ್ದಾನೆ. ಇದರಿಂದ ಸಹಜವಾಗಿ ಯುವತಿ ನೊಂದಿದ್ದಾಳೆ. ಇದಾದ ಕೆಲ ಸಮಯದ ಬಳಿಕ ಪ್ರಿಯಕರ ಕಾಲ್ , ಮೆಸೇಜ್‌ ಎಲ್ಲವನ್ನೂ ಮಾಡುವುದನ್ನು ಬಿಟ್ಟಿದ್ದಾನೆ. ಬೇರೊಂದು ಯುವತಿ ಜೊತೆ ವಿವಾಹವಾಗಲು ನಿಶ್ಚಯಿಸಿದ್ದಾನೆ ಎಂದು ಆಕೆಗೆ ವಿಷಯ ತಿಳಿದಿದೆ.

ಕೃತ್ಯಕ್ಕೆ ಸಹಾಯವಾದ ಕ್ರೈಮ್‌ ಶೋ:  ಯುವಕ ಕೈ ಕೊಟ್ಟರು, ಆತ ತನ್ನಗಾಗಿ ಬರುತ್ತಾನೆಂದು ತನ್ನ ಪ್ರೀತಿಯನ್ನು ನಂಬಿಕೊಂಡಿದ್ದ ಯುವತಿಗೆ ನಿರಾಶೆಯಾಗಿದ್ದು, ಆತನಿಗೆ ಬುದ್ಧಿ ಕಲಿಸಬೇಕೆಂದು ನಿರ್ಧಾರ ಮಾಡಿದ್ದಾಳೆ. ಟವಿಯಲ್ಲಿ ʼಕ್ರೈಂ ಪ್ಯಾಟ್ರೋಲ್ʼ ಎನ್ನುವ ಕ್ರೈಮ್‌ ಶೋವನ್ನು ನೋಡಿದ ಪ್ರಿಯತಮೆ, ಅಲ್ಲಿ ಆ್ಯಸಿಡ್ ಎರಚುವ ಕೃತ್ಯವೊಂದನ್ನು ನೋಡಿ ಹಾಗೆಯೇ ಮಾಡಲು ಹೊರಟಿದ್ದಾಳೆ.

ತನ್ನ ಪ್ರಿಯಕರನ ಮದುವೆಯ ಸಮಾರಂಭದ ವೇಳೆ ಯಾರಿಗೂ ಗುರುತು ಬಾರದಂತೆ, ಪುರುಷರ ವೇಷ ಧರಿಸಿಕೊಂಡು ಕೈಯಲ್ಲಿ ಆ್ಯಸಿಡ್ ಬಾಟಲಿಯನ್ನು ಹಿಡಿದುಕೊಂಡು ಮದುವೆಗೆ ಬಂದಿದ್ದಾಳೆ. ಇದೇ ವೇಳೆ ವಿದ್ಯುತ್‌ ಕಡಿತಗೊಂಡಿದ್ದು, ಯುವತಿ ಯುವಕನ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾಳೆ.

ಕೃತ್ಯದ ಪರಿಣಾಮ ವರ, ವಧು ಸೇರಿದಂತೆ 10 ಮಂದಿ ಅತಿಥಿಗಳು ಗಾಯಗೊಂಡಿದ್ದಾರೆ.  ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು 12 ಸಿಸಿಟಿವಿಗಳನ್ನು ಪರಿಶೀಲಿಸಿದ್ದಾರೆ. ಆರೋಪಿ ಯುವಕನ ಪ್ರಿಯತಮೆ ಎನ್ನುವುದು ತಿಳಿದು ಬಂದಿದೆ. ಮಾಜಿ ಪ್ರಿಯಕರ ಬೇರೆ ಮದುವೆ ಆದ ಕಾರಣ ಈ ಕೃತ್ಯ ಎಸೆಗಿದ್ದಾಳೆ ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ.

ತಾನು ಕೆಲಸ ಮಾಡುತ್ತಿದ್ದ ಮೆಣಸಿನಕಾಯಿ ಕಂಪೆನಿಯಿಂದ ಯುವತಿ ಆ್ಯಸಿಡ್ ನ್ನು ಕದ್ದು ಅದನ್ನೇ ಕೃತ್ಯಕ್ಕೆ ಬಳಸಿದ್ದಾರೆ. ಸದ್ಯ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

Related posts

ಸುಳ್ಯ: ಪೇರಾಲಿನ ಯುವಕ ನೇಣು ಬಿಗಿದು ಆತ್ಮಹತ್ಯೆ, ಯುವಕನ ಈ ನಿರ್ಧಾರಕ್ಕೆ ಕಾರಣವೇನು ಗೊತ್ತಾ..?

‘ನಾನು ರಾಮಭಕ್ತ,20 ವರ್ಷಗಳಿಂದ ರಾಮಕೋಟಿ ಬರೆಯುತ್ತಿದ್ದೇನೆ ಎಂದ ಕಾಂಗ್ರೆಸ್‌ ಮುಖಂಡ ..!,ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್ ಗೈರು ನಿರ್ಧಾರ ಬೆನ್ನಲ್ಲೇ ಸಚಿವರು ಹೇಳಿದ್ದೇನು?

80 ವರ್ಷದ ಅಜ್ಜಿಯನ್ನು ಪ್ರೀತಿಸಿ ಮದುವೆಯಾದ್ದೇಕೆ 57ರ ವ್ಯಕ್ತಿ..? ಇದಕ್ಕೆ ಆಕೆಯ ಮಕ್ಕಳು ಮಾಡಿದ ಆರೋಪವೇನು..? ಏನಿದು ವಿಚಿತ್ರ ಲವ್ ಸ್ಟೋರಿ?