ಕ್ರೈಂ

ಅಮ್ಮ, ಅಪ್ರಾಪ್ತ ಮಗಳು ಸ್ನಾನ ಮಾಡುವಾಗ ಮೊಬೈಲ್ ನಲ್ಲಿ ಶೂಟಿಂಗ್ ಮಾಡಿದ ಕಾಮುಕ..!, ರಂಶೀದ್ ಗೆ 15 ವರ್ಷ ಜೈಲು, 15 ಸಾವಿರ ರೂ. ದಂಡ ಜಡಿದ ನ್ಯಾಯಾಲಯ

ನ್ಯೂಸ್ ನಾಟೌಟ್: ಬಾಲಕಿ ಮತ್ತು ವಿವಾಹಿತ ಮಹಿಳೆ ಬಚ್ಚಲು ಮನೆಯಲ್ಲಿ ಸ್ನಾನ ಮಾಡುತ್ತಿದ್ದುದನ್ನು ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ ಕಾಮುಕನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್ ಸಿ -1 (ಪೋಕ್ಸೋ) ಐದು ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು 15 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಅಪರಾಧಿ ರಂಶೀದ್ ತೋಟ ಬೆಂಗ್ರೆ ನಿವಾಸಿ ರಂಶೀದ್ ಬಾಲಕಿ ಹಾಗೂ ವಿವಾಹಿತ ಮಹಿಳೆ ಮನೆಯಲ್ಲಿ ಬಾತ್‌ರೂಂನಲ್ಲಿ ಸ್ನಾನ ಮಾಡುತ್ತಿದ್ದುದನ್ನು 2024ರ ಜುಲೈ 5 ಮತ್ತು 7ರಂದು ರಾತ್ರಿ 8-9 ಗಂಟೆಯ ನಡುವೆ ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದ. ಜು. 16ರಂದು ಇನ್ನೊಂದು ಮನೆಯ ಟೆರೇಸ್‌ ಮೇಲೆ ವೀಡಿಯೋ ಮಾಡುವ ಉದ್ದೇಶದಿಂದ ಹೋಗಿದ್ದ, ಇದನ್ನು ಹತ್ತಿರದ ಮನೆಯವರು ಗಮನಿಸಿದ್ದಾರೆ. ಆತನನ್ನು ಯಾರೆಂದು ಕೂಗಿದಾಗ ಆತ ಅಲ್ಲಿಂದ ಹಾರಿ ಓಡಿ ಹೋಗಿದ್ದ. ಈ ವೇಳೆ ಆತನ ಮೊಬೈಲ್‌ ಕೆಳಗೆ ಬಿದ್ದಿತ್ತು. ಇದನ್ನು ಲಾಕ್ ತೆರೆದು ನೋಡಿದಾಗ ಬಾತ್‌ರೂಂನಲ್ಲಿ ಸ್ನಾನ ಮಾಡುತ್ತಿದ್ದ ವೀಡಿಯೋ ಇತ್ತು. ಈ ಬಗ್ಗೆ ಜು. 17ರಂದು ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದ ಭಾಗಶಃ ತನಿಖೆಯನ್ನು ಪಣಂಬೂರು ಠಾಣೆಯ ಪಿಎಸ್ ಐ ರಾಘವೇಂದ್ರ ಅವರು ಮಾಡಿದ್ದು, ಪಿಎಸ್ ಐ ಶ್ರೀಕಲಾ ಅವರು ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್ ಸಿ -1 (ಪೋಕ್ಸೋ)ಯ ನ್ಯಾಯಾಧೀಶ ವಿನಯ್ ದೇವರಾಜ್‌ ಅವರು, ರಂಶೀದ್ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದ ಸಂತ್ರಸ್ತರಿಗೆ 1 ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆ. ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕಿ ಸಹನಾ ದೇವಿ ಬೋಳೂರು ವಾದಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾದ 5 ತಿಂಗಳಲ್ಲಿಯೇ ತೀರ್ಪು ಪ್ರಕಟವಾಗಿದೆ.

ಸಂತ್ರಸ್ತ ಬಾಲಕಿಯ ತಾಯಿ ಪ್ರಕರಣದಲ್ಲಿ ತನ್ನ ಮಗಳಿಗೆ ನ್ಯಾಯವೊದಗಿಸುವ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿ ಹೋರಾಟ ನಡೆಸಿ ಜಯಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯ ಮೊಬೈಲನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪ್ರಯೋಗಾಲಯದ ವರದಿಯಲ್ಲಿ ಮೊಬೈಲ್‌ನಲ್ಲಿ ಆತನೇ ವಿಡಿಯೋ ಮಾಡಿರುವುದು, ವಿಡಿಯೋದಲ್ಲಿರುವ ಸಂತ್ರಸ್ತೆಯ ಚಿತ್ರಗಳು ಹೊಂದಿಕೆಯಾಗುತ್ತದೆ ಎಂದು ಉಲ್ಲೇಖಿಸಲಾಗಿದೆ.

Related posts

ಮೊಹಮ್ಮದ್‌ ಸುಹೇಬ್‌ಗೆ ಮಸೀದಿಗಳ ಮೇಲೇಕೆ ಅಷ್ಟೊಂದು ಕೋಪ..? ಈತನಿಂದ ಬರೋಬ್ಬರಿ 10 ಮಸೀದಿಗಳಲ್ಲಿ ಕಳ್ಳತನ!

61 ರ ಮುದುಕನನ್ನು ಕೊಡಲಿಯಿಂದ ಕೊಚ್ಚಿ ಕೊಂದ ಬಾಲಕಿಯ ತಂದೆ..! ಅಪ್ರಾಪ್ತೆಯನ್ನು ಗರ್ಬಿಣಿಯಾಗಿಸಿದಾತನಿಗೆ 7 ಜನ ಹೆಣ್ಣು ಮಕ್ಕಳು..!

ಗೋಳಿತೊಟ್ಟು: ನೈಲನ್ ಹಗ್ಗದಿಂದ ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಯುವಕ, ತಂದೆಯ ಸಾವಿಗೆ ಮನನೊಂದು ಕೃತ್ಯ ಎಸಗಿದನೇ..?