ಕೊಡಗು

Madikeri: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಕೆಎಸ್‌ಆರ್‌ಟಿಸಿ ಡಿಪೋ ಸಿಬ್ಬಂದಿ ,ಆಸ್ಪತ್ರೆಯಲ್ಲಿ ಚಿಕಿತ್ಸೆ

ನ್ಯೂಸ್ ನಾಟೌಟ್ :  ಕೆಎಸ್‌ಆರ್‌ಟಿಸಿ ಡಿಪೋದ ಸಿಬ್ಬಂದಿಯೊಬ್ಬರು ವಿಷ ಸೇವಿಸಿದ ಘಟನೆ ಮಡಿಕೇರಿಯಿಂದ ವರದಿಯಾಗಿದೆ.

ಡಿಪೋದಲ್ಲಿ ಕಿರಿಯ ಸಹಾಯಕ ರಾಗಿ ಸೇವೆ ಸಲ್ಲಿಸುತ್ತಿದ್ದ ಹೆಬ್ಟಾಲೆ ಗ್ರಾಮದ ನಿವಾಸಿ ಅಭಿಷೇಕ್‌ ವಿಷ ಸೇವಿಸಿದ್ದ ವ್ಯಕ್ತಿ.ಸದ್ಯ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಅಧಿಕಾರಿಯ ಕಿರುಕುಳದಿಂದ ಬೇಸತ್ತು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಆರೋಪಿಸಲಾಗಿದೆ.ಸದ್ಯ ಅಭಿಷೇಕ್‌ ಅವರು ಚಿಕಿತ್ಸೆಯಲ್ಲಿದ್ದು,ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕವಷ್ಟೇ ಇವರ ಹೇಳಿಕೆ ಮೂಲಕ ನಿಖರ ಮಾಹಿತಿ ಲಭಿಸಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related posts

ಪುತ್ತೂರು: ನನ್ನ ಕ್ಷೇತ್ರದಲ್ಲಿ ಅನ್ಯಾಯ ಆದವರಿಗೆ ನ್ಯಾಯ ಕೊಡಿಸುವ ಶಕ್ತಿ ನನಗಿದೆ,ಬೆಳ್ತಂಗಡಿ ಶಾಸಕರು ಇಲ್ಲಿಗೆ ಬಂದು ಮಾತನಾಡುವ ಅಗತ್ಯವಿಲ್ಲ-ಶಾಸಕ ಅಶೋಕ್ ರೈ

ಕೋಲದಲ್ಲಿ ಸ್ಪೀಕರ್‌ ಖಾದರ್ ಭಾಗಿ-ಮುಂದುವರಿದ ಪರ-ವಿರೋಧದ ಚರ್ಚೆ;ನನ್ನ ಹರಕೆಯ ಕೋಲ ಸೇವೆಯಲ್ಲಿ ಪಾಲ್ಗೊಂಡಿದ್ದರು-ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಸ್ಪಷ್ಟನೆ

ಚೆಂಬು ಗ್ರಾಮದಲ್ಲಿ ಭೂಕಂಪನ ಮಾಪನ ಅಳವಡಿಕೆ