ಕರಾವಳಿಕ್ರೀಡೆ/ಸಿನಿಮಾ

ನಾಳೆ ನರಿಂಗಾನ ಲವ ಕುಶ ಜೋಡು ಕರೆ ಕಂಬಳ : ಶಾಸಕ ಯು.ಟಿ.ಖಾದರ್

ನ್ಯೂಸ್‌ ನಾಟೌಟ್‌: ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಮೋರ್ಲ-ಬೋಳದಲ್ಲಿ ಲವ ಕುಶ ಹೆಸರಿನಲ್ಲಿ ನರಿಂಗಾನ ಕಂಬಳ ಮಾ. 25ರಂದು ಹೊನಲು ಬೆಳಕಿನಲ್ಲಿ ನಡೆಯಲಿದೆ ಎಂದು ಶಾಸಕ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಾ.25ರಂದು ಬೆಳಗ್ಗೆ 10.30ಕ್ಕೆ ಶ್ರೀ ಕ್ಷೇತ್ರ ಶಾಂತಿಪಳಿಕೆಯ ಪ್ರಧಾನ ತಂತ್ರಿ ವರ್ಕಾಡಿ ರಾಜೇಶ್‌ ತಾಳಿತ್ತಾಯ ದೀಪ ಬೆಳಗಿಸಲಿದ್ದಾರೆ. ಕಂಬಳದ ಕರೆಯನ್ನು ಶ್ರೀ ಕ್ಷೇತ್ರ ಕಣಂತೂರಿನ ಆಡಳಿತ ಮೊಕ್ತೇಸರ ತಿಮ್ಮಪ್ಪ ಕೊಂಡೆ ಯಾನೆ ಮಂಜು ಭಂಡಾರಿ ಉದ್ಘಾಟಿಸಲಿದ್ದಾರೆ. ಉಳ್ಳಾಲ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ ಕಂಬಳ ಆಯೋಜಿಸಲಾಗುತ್ತಿದೆ. ಕ್ಷೇತ್ರದ ಶಾಸಕನ ನೆಲೆಯಲ್ಲಿ ನಡೆಯಲಿರುವ ಈ ಕಂಬಳ ಪಕ್ಷ, ಧರ್ಮ, ಜಾತಿ, ಬಡವ ಬಲ್ಲಿದ, ಮೇಲು ಕೀಳೆಂಬ ಭಾವನೆಯೇ ಸೃಷ್ಟಿಯಾಗಲು ಅವಕಾಶ ಕೊಡದ ಕಂಬಳ ಎಂದರು.

ಕಂಬಳ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್‌ ಕಾಜವ ಮಾತನಾಡಿ, ಕಂಬಳದಲ್ಲಿ ಕಾನೂನು ಉಲ್ಲಂಘನೆ ಆಗದಂತೆ “ಪೇಟಾದ ನಿಯಮ ಪ್ರಕಾರ”ವೇ ಕಂಬಳ ನಡೆಸುವ ಸಲುವಾಗಿ ದಕ್ಷರನ್ನೊಳಗೊಂಡ ಕಂಬಳ ಪ್ರೇಮಿಗಳೇ ಇರುವ ಕಂಬಳ ಸಮಿತಿ ಹಾಗೂ ಇತರ ಉಪ ಸಮಿತಿ ರಚಿಸಲಾಗಿದೆ ಎಂದರು.

ತಲಪಾಡಿ ಕಂಬಳ, ಪೈವಳಿಕೆ ಕಂಬಳ ಈಗ ನಡೆಯುತ್ತಿಲ್ಲವಾದ್ದರಿಂದ ಕಾಸರಗೋಡಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೋಣಗಳ ಮಾಲೀಕರು ತಮ್ಮ ಕೋಣಗಳನ್ನು ಸ್ಪರ್ಧೆಗೆ ತರಲಿದ್ದಾರೆ. ದ.ಕ, ಉಡುಪಿ ಜಿಲ್ಲೆಗಳಿಂದ ಕೋಣಗಳು ಭಾರೀ ಸಂಖ್ಯೆಯಲ್ಲಿ ಆಗಮಿಸಲಿದೆ. ಫಲಿತಾಂಶ ನಿಖರತೆಗೆ ಆಧುನಿಕ ತಂತ್ರಜ್ಞಾನ ಬಳಸಲಾಗುವುದು ಎಂದು ತಿಳಿಸಿದರು.

ಮಹಿಳಾ ವಿಭಾಗ ಅಧ್ಯಕ್ಷೆ ಮಮತಾ ಡಿ.ಎಸ್‌. ಗಟ್ಟಿ, ಪ್ರಧಾನ ಸಂಚಾಲಕ ಗಿರೀಶ್‌ ಆಳ್ವ ಮೋರ್ಲ ಕೋಶಾಧಿಕಾರಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಮಾಧ್ಯಮ ಸಂಚಾಲಕ ಸತೀಶ್ ಕುಮಾರ್ ಪುಂಡಿಕಾಯಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Related posts

ಮಾ.24ರಂದು ಸುಬ್ರಹ್ಮಣ್ಯಕ್ಕೆ ಸಿಎಂ ಬೊಮ್ಮಾಯಿ ಭೇಟಿ

ಮಾತ್ರೆ, ಪೇಸ್ಟ್‌ ರೂಪದಲ್ಲಿ ದುಬೈನಿಂದ ಮಂಗಳೂರಿಗೆ ಚಿನ್ನ ತಂದು ಏರ್‌ಪೋರ್ಟ್ ನಲ್ಲಿ ಸಿಕ್ಕಿ ಬಿದ್ದ ಖದೀಮ..!

ನೀವು ಸರ್ಕಾರಿ ಉದ್ಯೋಗ ಹುಡುಕುತ್ತಿದ್ದೀರಾ..? ಕೈತುಂಬಾ ವೇತನದ VAO ಪರೀಕ್ಷೆ ಎದುರಿಸುವ ಕನಸಿದ್ದರೆ ವಿದ್ಯಾಮಾತಾ ಅಕಾಡೆಮಿ ಸೇರಿಕೊಳ್ಳಿ, ಇಂದೇ ಅರ್ಜಿ ಸಲ್ಲಿಸಲು ವಿವರ ಇಲ್ಲಿದೆ ನೋಡಿ