ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಡುವ ಕೊಲೆಸ್ಟ್ರಾಲ್, ಬಿಪಿ, ಮಧುಮೇಹಗಳಿಗೆ ನಾವು ಸೇವಿಸುವ ಆಹಾರಗಳೇ ಪ್ರಮುಖ ಕಾರಣ. ಹೀಗಾಗಿ ಯೋಗ ಗುರು ಬಾಬಾ ರಾಮ್ ಅವರು ಗೋಧಿ ಹಾಗೂ ಅಕ್ಕಿಯನ್ನು ಸೇವಿಸದಂತೆ ಸಲಹೆ ನೀಡಿದ್ದಾರೆ.
ಯೋಗ ಗುರು ಸ್ವಾಮಿ ರಾಮದೇವ್ ಕೂಡ ಸಾತ್ವಿಕ ಆಹಾರವನ್ನು ಸೇವಿಸುತ್ತಾರೆ. 59 ನೇ ವಯಸ್ಸಿನಲ್ಲಿಯೂ ಅವರು ಸಂಪೂರ್ಣವಾಗಿ ಫಿಟ್ ಆಗುವುದಕ್ಕೆ ಅವರು ಆಹಾರ ಕ್ರಮಗಳೇ ಪ್ರಾಮುಖ್ಯವಹಿಸಿವೆ.ಬಾಬಾ ರಾಮ್ ದೇವ್ ಇತ್ತೀಚಿನ ಪಾಡ್‌ಕ್ಯಾಸ್ಟ್‌ನಲ್ಲಿ, ‘ಗೋಧಿ ಮತ್ತು ಅಕ್ಕಿ ತಿನ್ನುವವನು ಬೇಗನೆ ಪ್ರಾಣ ಬಿಡುತ್ತಾನೆ’ ಎಂದಿದ್ದಾರೆ. ಶಿವಂ ಮಲಿಕ್ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಅವರು ಇದಕ್ಕೆ ಕಾರಣಗಳನ್ನು ವಿವರಿಸಿದ್ದಾರೆ.
ಯಾಕೆ ಅಪಾಯ?
ಗೋಧಿ ಮತ್ತು ಅಕ್ಕಿ ಎರಡೂ ಧಾನ್ಯಗಳ ವಿಧಗಳಾಗಿವೆ. ಇವುಗಳನ್ನು ಭಾರತದಲ್ಲಿ ಅತಿ ಹೆಚ್ಚು ಸೇವಿಸಲಾಗುತ್ತದೆ. ಆದರೆ ಇವುಗಳನ್ನು ತಿನ್ನುವುದರಿಂದ ಬೊಜ್ಜು, ಬಿಪಿ ಮತ್ತು ಸಕ್ಕರೆ ಸಮಸ್ಯೆಗಳು ಉಂಟಾಗುತ್ತವೆ ಮತ್ತು ನಂತರ ನಾವು ವಿಷಾದಿಸುತ್ತೇವೆ ಎಂದು ಯೋಗ ಗುರುಗಳು ಹೇಳುತ್ತಾರೆ.