ದೇಶ-ಪ್ರಪಂಚ

ಪತ್ನಿಗೆ surprise ಗಿಫ್ಟ್‌ ಕೊಡಲು ಹೋಗಿ ವಿವಾದಕ್ಕೆ ಸಿಲುಕಿದ ಟಿಎಂಸಿ ಮುಖಂಡ..!, ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಯಾಕೆ..?

ನ್ಯೂಸ್‌ ನಾಟೌಟ್‌: ತಮ್ಮ ಮದುವೆಯ ಪ್ರಥಮ ವಿವಾಹ ವಾರ್ಷಿಕೋತ್ಸವವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವ ಉದ್ದೇಶದಿಂದ ಪತ್ನಿಗೆ ಅನಿರೀಕ್ಷಿತ (surprise )ವಾದ ಉಡುಗೊರೆಗಳನ್ನು ನೀಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ರಾಜಕಾರಣಿ ಪತ್ನಿಗೆ ಎಕೆ-47 ರೈಫಲ್ ಅನ್ನು ಉಡುಗೊರೆಯಾಗಿ ನೀಡಿ ತಗ್ಲಾಕೊಂಡಿದ್ದಾರೆ.

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಾಜಿ ನಾಯಕ ರಿಯಾಜುಲ್ ಹಕ್ ಅವರು ಪತ್ನಿ ಸಬಿನಾ ಯಾಸ್ಮಿನ್‌ಗೆ ಎಕೆ-47 ರೈಫಲ್ ಅನ್ನು ಉಡುಗೊರೆಯಾಗಿ ನೀಡಿ ವಿವಾದಕ್ಕೆ ಸಿಲುಕಿದ್ದಾರೆ. ಅಲ್ಲದೆ ಪತ್ನಿಗೆ ಉಡುಗೊರೆ ನೀಡಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇವರ ಪೋಸ್ಟ್‌ಗೆ ಬಿಜೆಪಿ ಮತ್ತು ಸಿಪಿಎಂ ನಾಯಕರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇದು ತಾಲಿಬಾನ್ ಆಡಳಿತವನ್ನು ಉತ್ತೇಜಿಸುತ್ತಿದ್ದಾರೆಂದು ಟೀಕೆ ವ್ಯಕ್ತವಾಗಿತ್ತು. ವಿರೋಧ ವ್ಯಕ್ತವಾದ ನಂತರ ರಿಯಾಜುಲ್ ಪೋಸ್ಟ್​​​ನ್ನು ತೆಗೆದುಹಾಕಿದ್ದಾರೆ.

ತನ್ನ ನಡೆಯನ್ನು ಸಮರ್ಥಿಸಿದ ರಿಯಾಜುಲ್, ತನ್ನ ವಿರುದ್ಧದ ಆರೋಪ ಸುಳ್ಳು. ತನ್ನ ಪತ್ನಿ ಆಟಿಕೆ ಗನ್‌ ಹಿಡಿದು ನಿಂತ ಫೋಟೋವನ್ನು ಹಂಚಿಕೊಂಡಿದ್ದೇನೆ. ಅದು ನಕಲಿ ಗನ್‌ ಎಂದಿದ್ದಾರೆ. ಆದರೆ ಬಿಜೆಪಿ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಬಿರ್‌ಭೂಮ್‌ನ ಬಿಜೆಪಿ ಜಿಲ್ಲಾಧ್ಯಕ್ಷ ಧ್ರುಬೋ ಸಹಾ ಪ್ರತಿಕ್ರಿಯಿಸಿ ರಿಯಾಜುಲ್‌ಗೆ ಬಂದೂಕು ಎಲ್ಲಿಂದ ಸಿಕ್ಕಿತು ಎಂಬುವುದರ ಬಗ್ಗೆ ತನಿಖೆಯಾಗಬೇಕು. ಮಾಜಿ ಟಿಎಂಸಿ ನಾಯಕ ಮತ್ತು ರಾಜ್ಯ ಉಪಸಭಾಪತಿಯ ಆಪ್ತರಾದ ಇವರ ಈ ನಡೆ ಜನತೆಗೆ ಯಾವ ಸಂದೇಶ ನೀಡುತ್ತದೆ? ಇದು ಮುಂದಿನ ಪೀಳಿಗೆಯನ್ನು ಜಿಹಾದಿಗಳಾಗಲು ತಳ್ಳಲು ತಾಲಿಬಾನ್ ಆಡಳಿತದ ಪ್ರಚಾರವೇ? ಎಂದು ಪ್ರಶ್ನಿಸಿದ್ದಾರೆ.

ಆಡಳಿತ ಪಕ್ಷವು ಸಾರ್ವಜನಿಕ ವೇದಿಕೆಗಳಲ್ಲಿ ಆಯುಧಗಳನ್ನು ಪ್ರದರ್ಶಿಸುವ ಇಂಥ ಪರಿಪಾಠಕ್ಕೆ ತಕ್ಷಣ ಕಡಿವಾಣ ಹಾಕಬೇಕು. ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಬಿರ್ಭಮ್ ಸಿಪಿಐಎಂ ನಾಯಕ ಸೋಂಜಿಬ್ ಮುಲ್ಲಿಕ್ ಹೇಳಿದ್ದಾರೆ. ರಿಯಾಜುಲ್ ತೃಣಮೂಲದ ಅಲ್ಪಸಂಖ್ಯಾತರ ಸೆಲ್‌ನ ರಾಮ್‌ಪುರಹತ್-1 ಬ್ಲಾಕ್‌ನ ಅಧ್ಯಕ್ಷರಾಗಿದ್ದರು ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

Related posts

ಅಬ್ಬಬ್ಬಾ..!ಕೊಹ್ಲಿ ಕುಡಿಯುವ ನೀರಿಗೆ ಬರೋಬ್ಬರಿ ೮ ಲಕ್ಷ ಖರ್ಚು ಮಾಡ್ತಾರಂತೆ..!!ಹಾಗಾದರೆ ಅವರು ಕುಡಿಯೋ ನೀರು ಮಾಮೂಲಿ ನೀರಿಗಿಂತ ಎಷ್ಟು ಡಿಫರೆಂಟ್‌? ಅದೆಂಥಾ ನೀರು?

ಹಿಂದೂ ಸಂತರು ಗೋ ಮಾಂಸ ತಿನ್ನುತ್ತಾರೆ ಎಂದ ಮುಸ್ಲಿಂ ಮುಖಂಡ..! ಭಾರತದಿಂದ ಪಾಕಿಸ್ಥಾನಗೆ ಹೋಗಿ ವಿವಾದಾತ್ಮಕ ಹೇಳಿಕೆ ನೀಡಿದ ಝಾಕಿರ್‌ ನಾಯ್ಕ..!

ಅವನು 259 ಯುವತಿಯರಿಗೆ ಮೋಸ ಮಾಡಿದ್ದು ಹೇಗೆ..? ಎರಡನೇ ಮದುವೆ ಆಗೋರೇ ಇವನ ಟಾರ್ಗೆಟ್..? ಇಲ್ಲಿದೆ ವಿಚಿತ್ರ ಸ್ಟೋರಿ