Uncategorized

ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯ ಘೋಷಣೆ

ನವದೆಹಲಿ: ರಾಜಸ್ಥಾನದ ರಾಮಗಡ ವಿಸ್ಧಾರ್ ಅಭಯಾರಣ್ಯವನ್ನು ಭಾರತದ ೫೨ನೇ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವನ್ನಾಗಿ ಘೋಷಣೆ ಮಾಡಲಾಗಿದೆ.

ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಈ ಘೋಷಣೆ ಮಾಡಿದ್ದಾರೆ. ರಾಜಸ್ಥಾನದಲ್ಲಿನ ರಣತಂಬೂರ್, ಸಾರಿಸ್ಕಾ ಹಾಗೂ ಮುಕುಂಧರಾ ಹುಲಿ ಸಂರಕ್ಷಿತಾರಣ್ಯದ ನಂತರ ರಾಮಗಡ ವಿಸ್ಧಾರ್ ಹುಲಿ ಸಂರಕ್ಷಿತಾರಣ್ಯ ನಾಲ್ಕನೇಯದಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರಕಾರ ವನ್ಯಜೀವಿಗಳನ್ನು, ಪರಿಸರವನ್ನು ಹಾಗೂ ವನ್ಯಸಂಪತ್ತನ್ನು ಉಳಿಸಲು ಕಟಿಬದ್ಧವಾಗಿದ್ದು, ಈ ನಿಟ್ಟಿನಲ್ಲಿ ರಾಮಗಡ ವಿಸ್ಧಾರ್ ಹುಲಿ ಸಂರಕ್ಷಿತಾರಣ್ಯ ಮಹತ್ವದ ಪಾತ್ರವಹಿಸಲಿದೆ ಎಂದಿದ್ದಾರೆ. ರಾಮಗಡ ವಿಸ್ಧಾರ್ ಹುಲಿ ಅಭಯಾರಣ್ಯವನ್ನು ಹುಲಿ ಸಂರಕ್ಷಿತಾರಣ್ಯವನ್ನಾಗಿ ಮಾಡಲು ಕೇಂದ್ರ ಸರಕಾರಕ್ಕೆ ರಾಷ್ಟ್ರಿಯ ಹುಲಿ ಸಂರಕ್ಷಣಾ ಪ್ರಾಧಿಕಾರ ಕಳೆದ ವರ್ಷ ಜುಲೈ ೫ ರಂದು ತಾತ್ವಿಕ ಒಪ್ಪಿಗೆ ಸೂಚಿಸಿತ್ತು. ಈ ನಿರ್ಧಾರದಿಂದ ಭೀಮ್ಲಾತ್ ಹಾಗೂ ರಾಮಗಡ ವಿಭಾಗದಲ್ಲಿ ಪರಿಸರ ಪ್ರವಾಸೋಧ್ಯಮ ಉತ್ತೇಜನಗೊಳ್ಳಲಿದೆ ಎಂದು ಭೂಪೇಂದ್ರ ಯಾದವ್ ತಿಳಿಸಿದ್ದಾರೆ. ೨೦೧೯ ರ ಹುಲಿ ಗಣತಿ ವರದಿ ಪ್ರಕಾರ ಭಾರತದಲ್ಲಿ ೨,೯೬೭ ಹುಲಿಗಳು ಇರುವುದು ಕಂಡು ಬಂದಿದೆ.

Related posts

ಸುಬ್ರಹ್ಮಣ್ಯ : ರಥ ಬೀದಿಯಲ್ಲಿ ಬೀದಿ ನಾಯಿಗಳದ್ದೇ ದರ್ಬಾರು..!

ಜಪಾನ್‌ನಲ್ಲಿ ಪ್ರಬಲ ಭೂಕಂಪ: 7.1 ತೀವ್ರತೆ ದಾಖಲು..! ಸುನಾಮಿ ಅಪ್ಪಳಿಸುವ ಎಚ್ಚರಿಕೆ..!

ಆಧಾರ್ ಕಾರ್ಡ್ ಗೆ ಪಾನ್ ಲಿಂಕ್ ಮಾಡದಿದ್ದರೆ 2023ರ ನಂತರ ಪಾನ್ ಕಾರ್ಡ್ ರದ್ದು