ಸುಳ್ಯ

ತೆಕ್ಕಿಲ್ ಫುಟ್‌ಬಾಲ್‌ ಲೀಗ್: ಯುನೈಟೆಡ್ ಗೂನಡ್ಕ ಚಾಂಪಿಯನ್, ಅರಂತೋಡು ರನ್ನರ್ಸ್ಅಪ್

ಗೂನಡ್ಕ: ತೆಕ್ಕಿಲ್ ಪ್ರತಿಷ್ಠಾನ ಅರಂತೋಡು ಸ್ಥಾಪಕಾಧ್ಯಕ್ಷ ಟಿ ಎಂ ಶಾಹೀದ್ ತೆಕ್ಕಿಲ್ 50ನೇ ಹುಟ್ಟಹಬ್ಬದ ಪ್ರಯುಕ್ತ ತೆಕ್ಕಿಲ್ ಸೋಕರ್ ಕ್ಲಬ್ ಹಮ್ಮಿಕೊಂಡ ತೆಕ್ಕಿಲ್ ಲೀಗ್ ಪುಟ್ಬಾಲ್ ಪಂದ್ಯಾಟದಲ್ಲಿ ಬಿ ಯುನೈಟೆಡ್ ಗೂನಡ್ಕ ತಂಡ ಚಾಂಪಿಯನ್ ಆಗಿದೆ. ರನ್ನರ್ಸ್ಅಪ್ ಪ್ರಶಸ್ತಿಗೆ ಅರಂತೋಡು ತಂಡ ಸಮಾಧಾನ ಪಟ್ಟುಕೊಂಡಿತು. ,ಪ್ರಥಮ ಬಹುಮಾನ ರೂ. 5000 ಮತ್ತು ಶಾಶ್ವತ ಫಲಕ ,ದ್ವಿತೀಯ ಬಹುಮಾನ ರೂ. 3000 ಮತ್ತು ಶಾಶ್ವತ ಫಲಕವನ್ನು ನಿಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಟಿ ಎಂ ಶಾಹೀದ್ ತೆಕ್ಕಿಲ್, ಯುವಕರು ಸಮಾಜದಲ್ಲಿ ಮುಂದೆ ಬಂದು ಇಂತಹ ಕಾರ್ಯಕ್ರಮ ಮಾಡುವುದರೊಂದಿಗೆ ಶಾಂತಿ ಸೌಹಾರ್ದತೆ ವಾತಾವರಣ ನಿರ್ಮಿಸಬೇಕು ಎಂದು ತಿಳಿಸಿದರು. ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ ಕೆ ಹಮೀದ್ ಗೂನಡ್ಕ,ಸುಳ್ಯ ತಾಲೂಕು NSUI ಅಧ್ಯಕ್ಷರಾದ ಕೀರ್ತನ್ ಕೊಡೆಪಾಲ,ಗ್ರಾಮ ಪಂಚಾಯತ್ ಸದಸ್ಯರಾದ ಅಬುಶಾಲಿ ಪಿ ಕೆ, ಎಸ್ ಕೆ ಹನೀಫ, ಉಮ್ಮರ್ ಹಾಜಿ ಗೂನಡ್ಕ, ಅಬ್ದುಲ್ಲ ಸಿ ಎಂ,ಅಯ್ಯುಬ್ ಗೂನಡ್ಕ, ಉಬೈಸ್ ಗೂನಡ್ಕ, ಅಶ್ರಫ್ ತೆಕ್ಕಿಲ್,ಮಹಮ್ಮದ್ ಪೆಲ್ತಡ್ಕ ಉಪಸ್ಥಿತರಿದ್ದರು.

Related posts

ಸುಳ್ಯ:ಗಂಭೀರ ಗಾಯಗೊಂಡಿದ್ದ ಅಟೋ ಚಾಲಕ ನಿಧನ, 6 ದಿನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದ ವ್ಯಕ್ತಿ

ಕೆ.ವಿ.ಜಿ. ‘ಸುಳ್ಯ ಹಬ್ಬ’ ಕಚೇರಿಯಲ್ಲಿ ಕೆ.ವಿ.ಜಿಯವರ 11ನೇ ಪುಣ್ಯಸ್ಮರಣೆ, ಗಣ್ಯರಿಂದ ನುಡಿನಮನ

ಸುಳ್ಯದ ಬಾಡಿಗೆ ಮನೆಯಲ್ಲಿ ಪತ್ತೆಯಾದ 14 ಇಂಚಿನ ಬಣ್ಣದ ಚಿಟ್ಟೆ..! ಇಲ್ಲಿದೆ ನೋಡಿ ಕಲ್ಲು ಮುಟ್ಲಿನ ಕಲರ್ ಫುಲ್ ಚಿಟ್ಟೆ ಫೋಟೋ