ಕ್ರೈಂ

ಇಚ್ಚೆಯಂತೆ ಹೊಲಿಯದ ರವಿಕೆ: ಮನನೊಂದು ಮಹಿಳೆ ಆತ್ಮಹತ್ಯೆ

448
Spread the love

ಹೈದರಾಬಾದ್: ಜಗತ್ತಿನಲ್ಲಿ ಚಿತ್ರವಿಚಿತ್ರ ಘಟನೆಗಳು ನಡೆಯುತ್ತದೆ ಅನ್ನುವುದಕ್ಕೆ ಇಲ್ಲೊಂದು ಘಟನೆ ಜ್ವಲಂತ ಸಾಕ್ಷಿಯಾಗಿದೆ.

ಇಲ್ಲೊಬ್ಬಳು ಮಹಿಳೆ ಪತಿ ತನ್ನ ಇಚ್ಚೆಯಂತೆ ರವಿಕೆ ಹೊಲಿದು ಕೊಟ್ಟಿಲ್ಲ ಎಂದು ಬೇಸರಗೊಂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಶ್ರೀನಿವಾಸ್ ಎಂಬವರ ಪತ್ನಿ ವಿಜಯಲಕ್ಷ್ಮಿ (೩೬) ಆತ್ಮಹತ್ಯೆ ಮಾಡಿಕೊಂಡವಳು. ದಂಪತಿ ಹೈದರಾಬಾದ್‌ನ ಅಂಬರ್ ಪೇಟೆಯಲ್ಲಿ ವಾಸವಾಗಿದ್ದರು. ಶ್ರೀನಿವಾಸ್ ಟೈಲರ್ ಆಗಿದ್ದು, ಸೀರೆ ವ್ಯಾಪಾರ ಕೂಡ ಮಾಡುತ್ತಿದ್ದರು. ತಮ್ಮ ಪತ್ನಿ ವಿಜಯಲಕ್ಷ್ಮಿಗೆ ರವಿಕೆ ಹೊಲಿದುಕೊಟ್ಟಿದ್ದಾರೆ. ಆದರೆ, ಆಕೆಗೆ ರವಿಕೆ ಇಷ್ಟವಾಗಿರಲಿಲ್ಲ. ಇಬ್ಬರ ನಡುವೆ ಜಗಳವಾಗಿದೆ. ಬಳಿಕ ವಿಜಯಲಕ್ಷ್ಮಿ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಮಧ್ಯಾಹ್ನ ಮಕ್ಕಳು ಶಾಲೆಯಿಂದ ಮನೆಗೆ ಬಂದು ಬಾಗಿಲು ತಟ್ಟಿದರೂ ಪ್ರತಿಕ್ರಿಯಿಸಿಲ್ಲ. ಪತಿ ಶ್ರೀನಿವಾಸ್ ಬಾಗಿಲು ಬಡಿದು ನೋಡಿದಾಗ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

See also  ಗೂನಡ್ಕ: ರಸ್ತೆ ಬದಿಯಲ್ಲಿ ದನದ ಮೃತದೇಹ..! ರಾತ್ರಿ ವಾಹನ ಡಿಕ್ಕಿಯಾಗಿರೊ ಶಂಕೆ!
  Ad Widget   Ad Widget   Ad Widget   Ad Widget   Ad Widget   Ad Widget