ಕ್ರೈಂ

ಪಂಜ ಮೂಲದ ಪತ್ರಕರ್ತ ವಾಗೀಶ್ ಕುಮಾರ್ ಬೆಂಗಳೂರಿನಲ್ಲಿ ನಿಧನ

706

ಬೆಂಗಳೂರು: ಪಂಜ ಸಮೀಪದ ಗಟ್ಟಿಗಾರಿನವರಾಗಿದ್ದ ವಾಗೀಶ್ ಕುಮಾರ್‌ರವರು ಕನ್ನಡ ಪತ್ರಿಕೋದ್ಯಮದಲ್ಲಿ ಎರಡು ದಶಕಗಳಿಗೂ ಹೆಚ್ಚುಕಾಲ ತಮ್ಮದೇ ಆದ ಛಾಪು ಮೂಡಿಸಿದ್ದರು.

ಈಟಿವಿ ಕನ್ನಡದ ಮೂಲಕ ವೃತ್ತಿ ಆರಂಭಿಸಿದ ವಾಗೀಶ್ ಕುಮಾರ್, ಬಳಿಕ ಟಿವಿ 9, ಕಸ್ತೂರಿ ಟಿವಿ, ಸಮಯ ಟಿವಿಗಳಲ್ಲಿ ಕೆಲಸ ನಿರ್ವಹಿಸಿದ್ದರು. ಆನಂತರ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ, ಲವಲವಿಕೆ ಸಪ್ಲಿಮೆಂಟರಿಗಳಲ್ಲೂ ಕೆಲಸ ಮಾಡಿದ್ದರು. ಕಳೆದ ಕೆಲ ಸಮಯದಿಂದ ಆರೋಗ್ಯ ಕೈಕೊಟ್ಟ ಕಾರಣ ಹಾಸಿಗೆ ಹಿಡಿದಿದ್ದರು. ಚಿಕಿತ್ಸೆ ಫಲಿಸದೆ ಇಂದು ಇಹಲೋಕ ತ್ಯಜಿಸಿದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತರು ಪತ್ನಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

See also  ಸುಬ್ರಹ್ಮಣ್ಯ: ಕುಮಾರಧಾರಾ ನದಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget