ಕ್ರೈಂವೈರಲ್ ನ್ಯೂಸ್

ಕಾವಿಧಾರಿಗಳ ವೇಷದಲ್ಲಿ ಬಂದವರು ಮಹಿಳೆಯ ಪ್ರಜ್ಞೆ ತಪ್ಪಿಸಿ ದರೋಡೆ..! ಜನರಿಂದ ಅಮಾಯಕ ಬುಡುಬುಡುಕೆ ಕಾವಿಧಾರಿ ಮೇಲೆ ಹಲ್ಲೆ..!

ನ್ಯೂಸ್ ನಾಟೌಟ್: ಸಾಧು ಸಂತರಂತೆ ಕಾವಿ ಧರಿಸಿ ಮನೆಯೊಂದಕ್ಕೆ ಬಂದು ಮಹಿಳೆಯ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ಚಿಕ್ಕಮಗಳೂರಿನ ತರೀಕೆರೆಯಲ್ಲಿ ನಡೆದಿದೆ. ನಾಲ್ವರು ಕಾವಿಧಾರಿಗಳು ಮಹಿಳೆಯ ಮನೆಗೆ ಬಂದಿದ್ದಾರೆ. ಬಳಿಕ ಪೂಜೆ ಮಾಡುವುದಾಗಿ ನಂಬಿಸಿ ಮಹಿಳೆಯ ಎಚ್ಚರ ತಪ್ಪಿಸಿ, ಮಹಿಳೆ ಧರಿಸಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಮಹಿಳೆಗೆ ಎಚ್ಚರವಾದ ಮೇಲೆ ಕಳ್ಳತನವಾಗಿರುವುದು ಗೊತ್ತಾಗಿದೆ. ಈ ವೇಳೆ ಮಹಿಳೆ ನೆರೆಹೊರೆಯವರಿಗೆ ನಡೆದ ಘಟನೆ ತಿಳಿಸಿದ್ದಾರೆ. ಕಳ್ಳರನ್ನು ಹುಡುಕಿ ಹೋದ ಜನ, ರಸ್ತೆಯಲ್ಲಿ ಹೋಗುತ್ತಿದ್ದ ಅಮಾಯಕ ಬುಡುಬುಡುಕೆ ಕಾವಿಧಾರಿ ಒಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಬಳಿಕ ಆತ ತಪ್ಪಿತಸ್ಥನಲ್ಲ ಎಂಬುದು ತಿಳಿದು ಬಂದಿದೆ. ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Related posts

ಟೇಕಾಫ್‌ ಆಗುವ ವೇಳೆ ವಿಮಾನ ಪತನ..! 18 ಮಂದಿಯ ದುರಂತ ಸಾವು..!

ಕುಂದಾಪುರ: ಅಪ್ರಾಪ್ತ ಯುವತಿಗೆ ವಿವಾಹ ಮಾಡಿಸಿದ್ದಕ್ಕೆ ಆಕೆಯ ತಂದೆ ಮತ್ತು ವರ ಅರೆಸ್ಟ್..! ಆಕೆಯ ತಾಯಿಯಿಂದ ಮದುವೆಗೆ ವಿರೋಧ

ರಾಕಿ ಬಾಯ್ ರಾವಣನಾಗಿ ಅಬ್ಬರಿಸ್ತಾರಾ..? ನೆಗೆಟಿವ್ ಶೇಡ್ ಇರುವ ಪಾತ್ರಕ್ಕೆ ಯಶ್ ಒಪ್ಪಿಕೊಂಡದ್ದೇಕೆ? ಇಲ್ಲಿದೆ ಬಿಗ್ ಅಪ್ಡೇಟ್