ಕರಾವಳಿಕ್ರೈಂ

ವಿಟ್ಲ: ಮನೆಯೊಳಗೆ ನುಗ್ಗಿ 1 ಲಕ್ಷ ರೂ. ಮೌಲ್ಯದ ವಾಚ್, ಡಿ.ವಿ.ಆರ್ ಕಳ್ಳತನ..! ಆರು ತಿಂಗಳ ಹಿಂದೆ ಗಲ್ಫ್ ಗೆ ಹೋಗಿದ್ದ ಮನೆ ಮಾಲಿಕ

ನ್ಯೂಸ್‌ ನಾಟೌಟ್‌: ಮನೆಗೆ ನುಗ್ಗಿ ಡಿ.ವಿ.ಆರ್ ಕಳವು ಮಾಡಿದ ಘಟನೆ ವಿಟ್ಲ ಪಡ್ನೂರು ಗ್ರಾಮದ ಪರ್ತಿಪ್ಪಾಡಿಯಲ್ಲಿರುವ ಮನೆಯೊಂದರಲ್ಲಿ ನಡೆದಿದೆ. ಮನೆ ಮಾಲಿಕ ಎಂ.ಕೆ.ಖಲೀಲ್ ಕುಟುಂಬ ಗಲ್ಫ್ ನಲ್ಲಿದ್ದು ಆರು ತಿಂಗಳ ಹಿಂದಷ್ಟೇ ಬಂದು ಹೋಗಿದ್ದರು. ರವಿವಾರ(ಮೇ.೨೬) ಬೆಳಗ್ಗೆ ಪಕ್ಕದ ಮನೆಯವರು ನೋಡಿದಾಗ ಮುಂಭಾಗದ ಬಾಗಿಲು ತೆರೆದಿರುವುದನ್ನು ಗಮನಿಸಿ ಸಂಶಯಗೊಂಡಿದ್ದರು.

ಮನೆಗೆ ಹೋಗಿ ನೋಡಿದಾಗ ಅಂಗಳದಲ್ಲಿದ್ದ ಸಿ.ಸಿ.ಕ್ಯಾಮರಾದ ದೃಷ್ಟಿ ಬದಲಾಯಿಸಿ ಮುಂಭಾಗದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ನಾಲ್ಕು ಕಪಾಟುಗಳನ್ನು ಒಡೆದು ಸೊತ್ತುಗಳಿಗಾಗಿ ಸಾಕಷ್ಟು ಜಾಲಾಡಿದ್ದಾರೆ. ಕಪಾಟಿನಲ್ಲಿದ್ದ ಒಂದು ಲಕ್ಷ ರೂ. ಮೌಲ್ಯದ Rado ವಾಚ್, ಡಿ.ವಿ.ಆರ್ ಹೊತ್ತೊಯ್ದಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.

Click 👇

https://newsnotout.com/2024/05/kannada-news-festival-of-ajja-in-uttara-kannada
https://newsnotout.com/2024/05/rajkot-fire-incident-and-couple-nomore

Related posts

ಸುಳ್ಯದ ದಿಗ್ಗಜ ಕೈ ನಾಯಕರಲ್ಲೇ ಭಿನ್ನಾಭಿಪ್ರಾಯ, ಕೋರ್‌ ಕಮಿಟಿ ಸಭೆ ಠುಸ್ ..?

ರಾಷ್ಟ್ರಪಕ್ಷಿಯ ಮಾಂಸ ಭಕ್ಷಸಿದ ಆ ಮೂವರು ಯಾರು? ಹುಲಿ ಉಗುರಿನ ಬೆನ್ನಲ್ಲೇ ಏನಿದು ವಿಚಿತ್ರ ಪ್ರಕರಣ?

Coaching centre: ಅನಧಿಕೃತ ಕೋಚಿಂಗ್‌ ಸೆಂಟರ್‌ಗಳ ಮೇಲೆ ಅಧಿಕಾರಿಗಳ ದಾಳಿ..! ರಾಜ್ಯದಾದ್ಯಂತ ಕ್ರಮ ಕೈಗೊಳ್ಳುವ ಸಾಧ್ಯತೆ..!