Uncategorized

ಕಳ್ಳ ಚಾಪೆ ಕೆಳಗೆ ನುಗ್ಗಿದ.. ಪೊಲೀಸ್ರು ರಂಗೋಲಿ ಕೆಳಗೇ ತೂರಿದ್ರು..!, 20 ಲಕ್ಷ ರೂ. ಕದ್ದು ಸೆಗಣಿಯೊಳಗಿಟ್ಟು ಸಿಕ್ಕಿಬಿದ್ದ ಥ್ರಿಲ್ಲಿಂಗ್ ಸ್ಟೋರಿ..!

ನ್ಯೂಸ್ ನಾಟೌಟ್: ಕಳ್ಳ ಚಾಪೆ ಕೆಳಗೆ ನುಸುಳಿದರೆ ಪೊಲೀಸರು ಮನಸ್ಸು ಮಾಡಿದರೆ ರಂಗೋಲಿ ಕೆಳಗೇ ನುಸುಳುತ್ತಾರೆ ಅನ್ನುವುದು ಸತ್ಯವಾಗುವುದಿದೆ. ಕಳ್ಳನನ್ನು ಒಂದಲ್ಲ ಒಂದು ರೀತಿಯಲ್ಲಿ ಹಿಡಿದು ಬಲೆಗೆ ಬೀಳಿಸುತ್ತಾರೆ ಅನ್ನುವುದು ನಿಜವಾಗಿದೆ. ವ್ಯಕ್ತಿಯೊಬ್ಬ 20 ಲಕ್ಷ ರೂ. ಕಳವು ಮಾಡಿದ್ದ ಬೇರೆಲ್ಲಾದರೂ ಇಟ್ಟರೆ ಸಿಕ್ಕಿಬೀಳಬಹುದು ಎನ್ನುವ ಭಯದಲ್ಲಿ ಹಸುವಿನ ಸಗಣಿಯೊಳಗೆ ಮುಚ್ಚಿಟ್ಟಿದ್ದ, ಸೆಗಣಿಯೊಳಗಿದ್ದರೂ ಪೊಲೀಸರು ಕಣ್ಣಿಂದ ತಪ್ಪಿಸಿಕೊಳ್ಳೋಕೆ ಸಾಧ್ಯವಾಗಲಿಲ್ಲ ಅನ್ನುವುದು ವಿಶೇಷ.

ಏನಿದು ಘಟನೆ..?
ಒಡಿಶಾದ ಬಾಲಾಸೋರ್​ನಲ್ಲಿ ಘಟನೆ ನಡೆದಿದೆ. ಕಮರ್ದ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಬಡಮಂಡರುಣಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೈದರಾಬಾದ್ ಮತ್ತು ಒಡಿಶಾದ ಪೊಲೀಸ್ ಅಧಿಕಾರಿಗಳ ತಂಡ ಗ್ರಾಮಕ್ಕೆ ತಲುಪಿ ಆರೋಪಿ ಗೋಪಾಲ್ ಬೆಹೆರಾ ಅವರ ಅತ್ತೆಯ ಮನೆಯ ಮೇಲೆ ದಾಳಿ ನಡೆಸಿದರು.
ಆರೋಪಿ ಗೋಪಾಲ್ ಸದ್ಯ ತಪ್ಪಿಸಿಕೊಂಡಿದ್ದು, ಹೈದರಾಬಾದ್‌ನ ಕೃಷಿ ಆಧಾರಿತ ಕಂಪನಿಯ ಮಾಲೀಕನಿಂದ 20 ಲಕ್ಷಕ್ಕೂ ಹೆಚ್ಚು ಕಳ್ಳತನ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ.
ಆರೋಪಿ ಕದ್ದ ಹಣವನ್ನು ಮಾವನ ಕೈಗೆ ಕೊಟ್ಟಿದ್ದ ಗೋಪಾಲ್ ತನ್ನ ಸೋದರ ಮಾವ ರವೀಂದ್ರ ಬೆಹೆರಾ ಮೂಲಕ ಕದ್ದ ಹಣವನ್ನು ತನ್ನ ಗ್ರಾಮಕ್ಕೆ ವರ್ಗಾಯಿಸಲು ಯೋಜಿಸಿದ್ದ. ಕಮರ್ದಾ ಪೊಲೀಸರೊಂದಿಗೆ ರವೀಂದ್ರ ಅವರ ನಿವಾಸದಲ್ಲಿ ಶೋಧ ನಡೆಸಿದರು, ಹಸುವಿನ ಸಗಣಿಯಲ್ಲಿ ಬಚ್ಚಿಟ್ಟಿದ್ದ ಹಣವನ್ನು ಕೊನೆಗೂ ಪತ್ತೆ ಹಚ್ಚಿದ್ದಾರೆ. ಹಸುವಿನ ಸಗಣಿಯ ರಾಶಿಯಲ್ಲಿ ಭಾರಿ ಮೊತ್ತದ ಹಣ ಪತ್ತೆಯಾಗಿದ್ದನ್ನು ಕಂಡು ಸ್ವತಃ ಪೊಲೀಸರೇ ಶಾಕ್ ಆಗಿದ್ದರು.

Related posts

ಶಿಕ್ಷಕರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ , 750 ಅತಿಥಿ ಶಿಕ್ಷಕರ ನೇಮಕಕ್ಕೆ ರಾಜ್ಯ ಸರ್ಕಾರ ಅನುಮತಿ

ಒಂದು ದಿನ ಜೈಲಿಗೆ ಹೋಗಬೇಕಾ? ರೂ.500 ಕೊಟ್ಟರೆ ಸಾಕು ನಮ್ಮ ರಾಜ್ಯದಲ್ಲೇ ಇದೆ ಅವಕಾಶ..!

ಬಸ್‌ ನಲ್ಲಿ ಹೊರಟ ಅಜ್ಜಿ – ಮೊಮ್ಮಗಳಿಗೆ ಫ್ರೀ ಟಿಕೆಟ್‌; ಅವರ ಪಕ್ಷಿಗಳಿಗೆ 444 ರೂ.ನ ಟಿಕೆಟ್‌..!