ಕರಾವಳಿಸುಳ್ಯ

ಸುಳ್ಯದಲ್ಲಿ ಹೆಚ್ಚುತ್ತಿದೆ ಕಳ್ಳರ ಕಾಟ , ಗುತ್ತಿಗಾರಿನಲ್ಲಿರುವ ತರಕಾರಿ ಅಂಗಡಿಗೆ ನುಗ್ಗಿ ಕಳವು

ನ್ಯೂಸ್ ನಾಟೌಟ್ : ಸುಳ್ಯದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು ಜನ ಆತಂಕದಲ್ಲಿ ಬದುಕುವಂತಾಗಿದೆ.ಅಮೂಲ್ಯ ವಸ್ತುಗಳು ಮನೆಯೊಳಗಿದ್ದರೆ ಅದನ್ನು ಕಾಯುವ ಪರಿಸ್ಥಿತಿ ಎದುರಾಗಿದೆ. ಇದೀಗ ಸುಳ್ಯ ತಾಲೂಕಿನ ಗುತ್ತಿಗಾರು ಪೇಟೆಯಲ್ಲಿ ಇಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಗುತ್ತಿಗಾರು ಬಸ್ ಸ್ಟ್ಯಾಂಡ್ ಮುಂಭಾಗದಲ್ಲಿರುವ ಚಿನ್ನಪ್ಪ ಪುಲ್ಲಡ್ಕ ಎಂಬುವವರ ತರಕಾರಿ ಅಂಗಡಿಯಿಂದ ಕಳವಾಗಿರುವ ಬಗ್ಗೆ ವರದಿಯಾಗಿದ್ದು,ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ದೂರಿನಲ್ಲೇನಿದೆ?

’ನನಗೆ ಒಂದೂವರೆ ತಿಂಗಳ ಹಿಂದೆ ಬೈಕ್ ಅಪಘಾತವಾಗಿ ಅಂಗಡಿ ಬಂದ್ ಮಾಡಲಾಗಿದ್ದು, ದಿನಾಂಕ:25-೦7-2023 ರಂದು ಸಂಜೆ ಸುಮಾರು ೬.೩೦ಕ್ಕೆ ನನ್ನ ತರಕಾರಿ ಅಂಗಡಿಗೆ ಹೋಗಿ ನೋಡಿದಾಗ ಅಂಗಡಿಯ ಹಿಂದಿನ ಕಂಗಿನ ಸಲಾಕೆಯನ್ನು ಒಡೆದು ಯಾರೋ ಕಳ್ಳರು ಒಳ ನುಗ್ಗಿದ್ದಾರೆ. ಒಂದು ಅಳತೆ ಸ್ಕೇಲ್, ರೂ.5೦೦/- ಹಣ, ಅಂಗಡಿ ಲೈಸೆನ್ಸ್, ದಾಖಲೆ ಪತ್ರಗಳು, ಬಿಸ್ಕೇಟ್ ಇತ್ಯಾದಿಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಅಂದಾಜು ಮೌಲ್ಯ 7೦೦೦/- ರೂ. ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

30 ವರ್ಷ ಆಗದ ಕಾರ್ಕಳದ ಅಭಿವೃದ್ದಿ ಈಗ ಆಗಿದೆ, ಈ ಬಾರಿ ಸುನೀಲ್ ಕುಮಾರ್ ಬಂದರೆ ಸ್ವರ್ಣ ಕಾರ್ಕಳದ ಕನಸು ನನಸಾಗಲಿದೆ ಎಂದ ಬಿಜೆಪಿ ಮೋರ್ಚಾ ಉಪಾಧ್ಯಕ್ಷ ಸರ್ವಜ್ಞ ತಂತ್ರಿ

ಸುಳ್ಯ ತಾಲೂಕು ತಹಶೀಲ್ದಾರ್ ಕು. ಅನಿತಾಲಕ್ಷ್ಮೀ ವರ್ಗಾವಣೆ

Kapil Dev Kidnap: ವಿಶ್ವಕಪ್​ ವಿಜೇತ ಭಾರತ ಕ್ರಿಕೆಟ್ ತಂಡದ ನಾಯಕ ಕಪಿಲ್ ದೇವ್​ ಕಿಡ್ನಾಪ್​..! ವಿಡಿಯೊ ವೈರಲ್​