ಕ್ರೀಡೆ/ಸಿನಿಮಾಕ್ರೈಂ

ʼದಿ ಕೇರಳ ಸ್ಟೋರಿʼ ನಟಿಯ ಮೊಬೈಲ್‌ ನಂಬರ್‌ ಲೀಕ್‌..! ಮುಸ್ಲಿಂ ವಿರುದ್ಧದ ಸಿನಿಮಾ ಬಂದರೆ ರಿಜೆಕ್ಟ್‌ ಮಾಡಿ ಎಂದ ಹ್ಯಾಕರ್!

ನ್ಯೂಸ್ ನಾಟೌಟ್ : ʼದಿ ಕೇರಳ ಸ್ಟೋರಿʼ ನಟಿ ಅದಾ ಶರ್ಮಾ ಸಿನಿಮಾ ರಿಲೀಸ್‌ ಆದಾಗಿನಿಂದ ಚರ್ಚೆಯಲ್ಲಿದ್ದಾರೆ. ಸಿನಿಮಾದ ವಿವಾದದ ಹೊರತಾಗಿಯೂ ಸಿನಿಮಾ ರಿಲೀಸ್‌ ಆದಾಗಿನಿಂದ ಸಿನಿಮಾ ತಂಡಕ್ಕೆ ಕೆಲವರಿಂದ ಬೆದರಿಕೆಗಳು ಬಂದಿರುವುದು ವರದಿಯಾಗಿತ್ತು. ಇದೀಗ ನಟಿ ಅದಾ ಶರ್ಮಾ ಅವರ ವೈಯಕ್ತಿಕ ಫೋನ್‌ ನಂಬರ್‌ ನ್ನು ಹ್ಯಾಕರ್‌ ವೊಬ್ಬ ಲೀಕ್‌ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

‘jhamunda_bolte’ ಎಂಬ ಬಳಕೆದಾರ ಇನ್ಸ್ಟಾಗ್ರಾಮ್‌ ನಲ್ಲಿ ನಟಿಯ ಫೋನ್‌ ನಂಬರ್‌ ಲೀಕ್‌ ಮಾಡಿದ್ದಾನೆ. ಕೆಲವರು ನಟಿಯ ನಂಬರ್‌ ಪಡೆದು ನಟಿಗೆ ನಾನಾ ರೀತಿಯಲ್ಲಿ ಮೆಸೇಜ್‌ ಗಳನ್ನು ಮಾಡಿ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.

ಇನ್ನೊಮ್ಮೆ ಮುಸ್ಲಿಂಮರ ವಿರುದ್ಧದ ಸಿನಿಮಾ ಬಂದರೆ ರಿಜೆಕ್ಟ್‌ ಮಾಡಿ ಎಂದು ಹ್ಯಾಕರ್ ಮತ್ತೊಂದು ಪೋಸ್ಟ್‌ ಮಾಡಿದ್ದಾನೆ. ಹೊಸ ನಂಬರ್‌ ಬಳಸಿದರೆ ಅದನ್ನು ಕೂಡ ಲೀಕ್‌ ಮಾಡುತ್ತೇನೆ ಎಂದು ಬೆದರಿಕೆಯನ್ನು ಹಾಕಿದ್ದಾನೆ ಎನ್ನಲಾಗಿದೆ.

https://www.instagram.com/p/CslCiTHpUfz/?utm_source=ig_embed&ig_rid=97823bf9-f674-4fc1-9a13-8bef7f0a29b4

ನಟಿಯ ಅಭಿಮಾನಿಗಳು ಅಕೌಂಟ್‌ ಬಗ್ಗೆ ಕೂಡಲೇ ರಿಪೋರ್ಟ್‌ ಮಾಡಿದ ಬಳಿಕ ಆತನ ಅಕೌಂಟ್‌ ಸ್ಥಗಿತಗೊಂಡಿದೆ. ಕೆಲವೇ ಕ್ಷಣವಿದ್ದ ನಟಿಯ ನಂಬರ್‌ ಪೋಸ್ಟ್‌ ವೈರಲ್‌ ಆಗಿದೆ.

Related posts

ಬಂಟ್ವಾಳ: ಕಾರುಗಳ ನಡುವೆ ಅಪಘಾತ..! ಟ್ರಾಫಿಕ್ ಜಾಮ್

ಕೊಯನಾಡು: ಬರೆಗೆ ಗುದ್ದಿ ಕಾರು ಪಲ್ಟಿ..! ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ಪತ್ನಿ ಜೊತೆ ಮಲಗಿ ಎಂದು ಸಾಮಾಜಿಕ ಜಾಲತಾಣದಲ್ಲಿ ಆಫರ್ ಕೊಟ್ಟ ಪತಿರಾಯ