ಕ್ರೈಂ

ಪತ್ನಿ ಜೊತೆ ಮಲಗಿ ಎಂದು ಸಾಮಾಜಿಕ ಜಾಲತಾಣದಲ್ಲಿ ಆಫರ್ ಕೊಟ್ಟ ಪತಿರಾಯ

351
Spread the love

ಬೆಂಗಳೂರು: ವಿದೇಶಗಲ್ಲಿ ಭಾರಿ ವಿವಾದ ಸೃಷ್ಟಿ ಮಾಡಿದ್ದ ವೈಫ್ ಸ್ವಾಪಿಂಗ್ (wife-swapping) ಅಥವಾ ಪತ್ನಿಯರ ವಿನಿಮಯ ನೀಚ ಪದ್ದತಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ ವರದಿಯಾಗಿದ್ದು, ಪತ್ನಿ ಜೊತೆ ಮಲಗಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿದ್ದ ಪಾಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಿದೇಶಗಳಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಪತ್ನಿಯರನ್ನು ಅದಲು ಬದಲು ಮಾಡಿಕೊಳ್ಳುವ ನೀಚ ಪದ್ದತಿ ಇದೀಗ ಭಾರತಕ್ಕೂ ಕಾಲಿಟ್ಟಿದ್ದು, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೇ ತನ್ನ ಪತ್ನಿಯನ್ನು ಬೇರೊಬ್ಬರೊಂದಿಗೆ ಹಂಚಿಕೊಳ್ಳಲು ಯತ್ನಿಸಿದ್ದ ಪಾಪಿ ಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಮೂಲದ ಬೆಂಗಳೂರು ನಿವಾಸಿ ವಿನಯ್ ಕುಮಾರ್ ಬಂಧಿತ ಆರೋಪಿ. ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿನಯ್ ಕುಮಾರ್ ವೈಫ್ ಸ್ವಾಫಿಂಗ್ ದಂಧೆ ನಡೆಸುತ್ತಿದ್ದನು ಎಂದು ಹೇಳಲಾಗಿದೆ.

ಲೈಂಗಿಕ ವಿಡಿಯೋ ವೀಕ್ಷಣೆಯ ಗೀಳು ಹತ್ತಿಸಿಕೊಂಡಿದ್ದ ವಿನಯ್ ಮದುವೆ ಬಳಿಕ ತನ್ನ ಪತ್ನಿಯೊಂದಿಗೆ ಸೇರಿ ವಿಡಿಯೋ ಮಾಡಿ ತನ್ನದೇ ವಿಡಿಯೋವನ್ನು ನೋಡುತ್ತಿದ್ದ. ಬಳಿಕ ಈತನಿಗೆ ಸಾಥ್ ಕೊಡುತ್ತಿದ್ದ ಪತ್ನಿ ಕೂಡ ಈತನೊಂದಿಗೆ ಸೇರಿ ವಿಡಿಯೋ ವೀಕ್ಷಣೆ ಮಾಡುತ್ತಿದ್ದರು.  ಬಳಿಕ ವಿನಯ್ ತನ್ನ ಪತ್ನಿಯೊಂದಿಗೆ ಬೇರೊಬ್ಬರ ವಿಡಿಯೋಗಳನ್ನು ಮಾಡುತ್ತಿದ್ದ. ಇದಕ್ಕೆ ಆತನ ಪತ್ನಿಯ ಒಪ್ಪಿಗೆ ಕೂಡ ಇತ್ತು. ಇದಕ್ಕಾಗಿ ಜನರನ್ನು ಸಂಪರ್ಕಿಸಲು ಮಹಿಳೆಯ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮ ಖಾತೆ ತೆರೆದಿದ್ದ ವಿನಯ್ ತನ್ನ ಫೋನ್‌ನಲ್ಲಿ ವಿಡಿಯೋ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದ. ತನ್ನನ್ನು ಸಂಪರ್ಕಿಸಿದವರೊಂದಿಗೆ ಸೇರಿ ತನ್ನದೇ ಪತ್ನಿಯ ವಿಡಿಯೋ ಮಾಡಿ ಅದನ್ನು ಅಪ್ಲೋಡ್ ಮಾಡುತ್ತಿದ್ದ. ಈ ಮೂಲಕ ಗಂಡ- ಹೆಂಡತಿ ಹೈಟೆಕ್ ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿದ್ದರು. 

ಈ ಪೋಸ್ಟ್ ವ್ಯಾಪಕ ವೈರಲ್ ಆಗಿ ಟ್ವಿಟರ್ ಖಾತೆದಾರರೊಬ್ಬರು ಈ ಬಗ್ಗೆ ಆನ್ ಲೈನ್ ನಲ್ಲಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಆಧರಿಸಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬಂಧಿತನಿಂದ ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್ ಮತ್ತು ಕ್ಯಾಮೆರಾಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

See also  ಸಿದ್ದರಾಮಯ್ಯ ಕೇಸ್ ಸಂಬಂಧ ಜಮೀರ್ ಅಹ್ಮದ್ ಖಾನ್ ಗೂ ಸಂಕಷ್ಟ..! ಸಚಿವನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರ ಸೂಚನೆ
  Ad Widget   Ad Widget   Ad Widget   Ad Widget   Ad Widget   Ad Widget