ಕರಾವಳಿಕೊಡಗು

ಮಡಿಕೇರಿ: ಚಲಿಸುತ್ತಿದ್ದ ವಾಹನದಲ್ಲೇ ಹೃದಯಾಘಾತ, ಪಿಕಪ್‌ನಲ್ಲೇ ಸಾವನ್ನಪ್ಪಿದ ಯುವಕ

ನ್ಯೂಸ್ ನಾಟೌಟ್ : ಪಿಕಪ್ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದ ಯುವಕನೋರ್ವ ಪಿಕಪ್ ವಾಹನದಲ್ಲೇ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವ ಘಟನೆ ಮಡಿಕೇರಿಯಿಂದ ವರದಿಯಾಗಿದೆ.೨೮ ವರ್ಷ ಪ್ರಾಯದ ರವಿಕುಮಾರ್ ಮೃತ ದುರ್ದೈವಿ ಎಂದು ತಿಳಿದು ಬಂದಿದೆ.

ಯುವಕನಿಗೆ ಚಲಿಸುತ್ತಿದ್ದ ವಾಹನದಲ್ಲೇ ಹೃದಯಾಘಾತವಾಗಿದೆ. ಮಡಿಕೇರಿ ಸಮೀಪದ ವಿರಾಜಪೇಟೆಯ ಬಿಟ್ಟಂಗಾಲ ಬಳಿ ದುರ್ಘಟನೆ ಸಂಭವಿಸಿದೆ. ಈತ ವಿರಾಜಪೇಟೆ ಹೊರವಲಯದ ಬಿಟ್ಟಾಂಗಲ ಬಳಿಯ ಪೆಗ್ಗರಿಕಾಡು ನಿವಾಸಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ರವಿಕುಮಾರ್ ಪಿಕಪ್​ ವಾಹನ ಚಲಾಯಿಸಿಕೊಂಡು ಗೋಣಿಕೊಪ್ಪದಿಂದ ವೀರಾಜಪೇಟೆ ಕಡೆ ಬರುತ್ತಿದ್ದನು ಎನ್ನಲಾಗಿದ್ದು, ಈ ವೇಳೆ ಪಿಕ್ ಅಪ್ ವಾಹನದಲ್ಲಿ ತೆರಳುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ವೀರಾಜಪೇಟೆ ಕಡೆ ಬರುತ್ತಿದ್ದ ಸಂದರ್ಭ ಹೃದಯಾಘಾತವಾಗಿ ರವಿಕುಮಾರ್ ತನ್ನ ವಾಹನದಲ್ಲೇ ​​ಮೃತಪಟ್ಟಿದ್ದಾನೆ.

ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಹದಿಹರೆಯದವರೇ ಬಲಿಯಾಗ್ತ ಇರೋದು ಖೇದಕರ ಸಂಗತಿ.ನಿನ್ನೆಯಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ, ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆದು ಮನೆಯಲ್ಲಿದ್ದ ನರ್ಸಿಂಗ್ ವಿದ್ಯಾರ್ಥಿನಿಯೋರ್ವಳು ಲೋ ಬಿಪಿ ಕಾರಣದಿಂದ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ವರದಿಯಾಗಿದೆ.ಹೀಗೆ ಇಂತಹ ಹಲವು ಪ್ರಕರಣಗಳು ವರದಿಯಾಗುತ್ತಿದ್ದು,ಆಘಾತಕಾರಿಯಾಗಿದೆ.

Related posts

ಉಪ್ಪಿನಂಗಡಿ:ತಡರಾತ್ರಿ ಹೊತ್ತಿ ಉರಿದ ಬೇಕರಿ ಅಂಗಡಿ..! ಬೆಳ್ತಂಗಡಿ ಮತ್ತು ಪುತ್ತೂರಿನಿಂದ ಬಂದ ಅಗ್ನಿಶಾಮಕ ವಾಹನಗಳು..!

ಬೆಳ್ಳಾರೆ: ವ್ಯಕ್ತಿಗೆ ಬೆತ್ತಲೆ ಮಾಡಿ ಥಳಿಸಿದ್ರಾ..? ಆರೋಪ ನಿರಾಕರಿಸಿದ ಪೊಲೀಸರು, ಠಾಣೆಗೆ ಎಸ್.ಪಿ.ಭೇಟಿ

ಪರಶುರಾಮನ ಕಂಚಿನ ಪ್ರತಿಮೆಯ ಅಪಪ್ರಚಾರದ ಹಿಂದಿದೆ ಕಾಂಗ್ರೆಸ್ ಷಡ್ಯಂತ್ರ..! ಶಾಸಕ ಸುನಿಲ್ ಕುಮಾರ್ ಹೇಳಿದ್ದೇನು..?