ನ್ಯೂಸ್ ನಾಟೌಟ್ : ಸುಳ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಮುಜುಗರ ಆದಂತಹ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ಬೆಳವಣಿಗೆ ನಡೆದಿದೆ. ವೆಂಕಟ್ ವಳಲಂಬೆಯನ್ನು ಸುಳ್ಯ ಬಿಜೆಪಿ ಮಂಡಲ ಸಮಿತಿಗೆ ಹೊಸ ಅಧ್ಯಕ್ಷರಾಗಿ ನೇಮಿಸಿರುವ ಬೆನ್ನಲ್ಲೇ ಸುಳ್ಯದ ಕಮಲ ಪಾಳಯದಲ್ಲಿ ಭಿನ್ನಮತದ ಬಿರುಗಾಳಿ ಎದ್ದು ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಪಕ್ಷದ ಕಚೇರಿಗೆ ಬೀಗ ಹಾಕಿ ಕೆಲವು ಕಾರ್ಯಕರ್ತರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು. ಸುಳ್ಯದ ಬಿಜೆಪಿಯೊಳಗಿನ ದೊಡ್ಡ ಬಂಡಾಯದ ಗುಂಪಿನ ದರ್ಶನ ಸಾರ್ವಜನಿಕವಾಗಿ ಆದ ಬಳಿಕ ಇದೀಗ ತೆರೆಯೋ ಬಾಗಿಲು ಅನ್ನುವ ಸ್ಥಿತಿಯಲ್ಲಿ ಇಂದು ಬೆಳ್ ಬೆಳಗ್ಗೆ ಬಿಜೆಪಿ ಕಚೇರಿ ಬಾಗಿಲು ತೆರೆದುಕೊಂಡಿದೆ.
ನರೇಂದ್ರ ಮೋದಿ ಸಹಿತ ಹಲವಾರು ನಾಯಕರು ಬಿಜೆಪಿಯನ್ನು ಕಟ್ಟಿ ಬೆಳೆಸಲು ಶ್ರಮ ಪಟ್ಟಿದ್ದಾರೆ. ಅಟಲ್ ಜಿ , ಎಲ್ ಕೆ. ಅಡ್ವಾಣಿಯಂತವರು ತಮ್ಮ ಜೀವಮಾನವನ್ನೇ ಅಡವಿಟ್ಟು ಶ್ರಮಿಸಿದ್ದಾರೆ.ಅಂತಹ ಇತಿಹಾಸವುಳ್ಳ ನೂರಾರು ಕಾರ್ಯಕರ್ತರ ಬೆವರಿಗೆ ಶ್ರಮವಿರುವ ಪಕ್ಷದ ಕಚೇರಿಗೆ ಬಾಗಿಲು ಜಡಿದು ಅವಮಾನ ಮಾಡಬಾರದಿತ್ತು ಅನ್ನುವುದರ ಬಗ್ಗೆ ನ್ಯೂಸ್ ನಾಟೌಟ್ ವರದಿ ಮಾಡಿತ್ತು. ಈ ವರದಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ತನಕ ಮುಟ್ಟಿತ್ತು ಎಂದು ಪಕ್ಷದ ಮೂಲಗಳು ತಿಳಿಸಿವೆ. ಮಾತ್ರವಲ್ಲ ಕೆಲವೇ ಕೆಲವು ಗಂಟೆಗಳಲ್ಲಿ ಮುಚ್ಚಿರುವ ಪಕ್ಷದ ಬಾಗಿಲನ್ನು ಮತ್ತೆ ತೆರೆಯುವಂತೆ ಬಿಜೆಪಿ ಜಿಲ್ಲಾಧ್ಯಕ್ಷರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇಂದು ಸುಳ್ಯಕ್ಕೆ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಆಗಮಿಸುತ್ತಿದ್ದು, ಅವರ ಆಗಮನದ ಹಿನ್ನೆಲೆಯಲ್ಲಿ ಪ್ರಕರಣ ಒಂದಷ್ಟು ಕುತೂಹಲ ಪಡೆದುಕೊಂಡಿದೆ. ನಿನ್ನೆ ಪ್ರಕಟವಾದ ವರದಿಯನ್ನೂ ಓದಿ..ಲಿಂಕ್ ಇಲ್ಲಿದೆ👇