ಕರಾವಳಿ

ಭೀಕರ ರಸ್ತೆ ಅಪಘಾತ,ಓರ್ವ ಸ್ಥಳದಲ್ಲೇ ಮೃತ್ಯು:ಬೈಕ್-ಬಿಜೆಪಿ ರ‍್ಯಾಲಿಯ ಪ್ರಚಾರದ ವಾಹನದ ನಡುವೆ ಡಿಕ್ಕಿ

ನ್ಯೂಸ್ ನಾಟೌಟ್ :ಉಪ್ಪಿನಂಗಡಿ ಹಾಗೂ ಬಂಟ್ವಾಳ ಸಮೀಪದಲ್ಲಿನ ಕಲ್ಲಡ್ಕದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.ಕಲ್ಲಡ್ಕದ ನರಹರಿ ಬಳಿ ಈ ಅಪಘಾತ ಸಂಭವಿಸಿದ್ದು,ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಏನಿದು ಘಟನೆ?

ಬೈಕ್ ಮತ್ತು ಬಿಜೆಪಿ ರ‍್ಯಾಲಿಯ ಪ್ರಚಾರದ ವಾಹನದ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯಾದ ರಭಸಕ್ಕೆ ಸ್ಥಳದಲ್ಲೇ ಬೈಕ್ ಸವಾರ ಮೃತಪಟ್ಟಿದ್ದಾನೆ. ಮೃತ ಬೈಕ್ ಸವಾರನನ್ನು ಗುರುವಾಯನಕೆರೆ ಮೂಲದ ತರಕಾರಿ ನಾರಾಯಣ ಎಂಬವರ ಪುತ್ರ 35 ವರ್ಷದ ವಿಜಿತ್ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಈ ವೇಳೆ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು.ಕೆಲಕಾಲ ರಸ್ತೆ ಸಂಚಾರಕ್ಕೂ ಅಡಚಣೆಯಾಗಿತ್ತು.

Related posts

ಇಸ್ರೇಲ್ ಮೇಲೆ ಉಗ್ರರ ಭೀಕರ ದಾಳಿ, ಜೀವ ಉಳಿಸಿಕೊಳ್ಳಲು ಬಂಕರ್ ನೊಳಗೆ ಅಡಗಿ ಕುಳಿತಿರುವ ಮಂಗಳೂರಿನ ಪ್ರವೀಣ್..!

ಕೊಡಗು: ಬಿಜೆಪಿ ಕಾರ್ಯಕರ್ತನ ಸಾವು ಪ್ರಕರಣ..! ಯದುವೀರ್ ಸೇರಿ ಹಲವು ಬಿಜೆಪಿ ಮುಖಂಡರಿಂದ ಪ್ರತಿಭಟನೆ..! ನಿಷೇಧಾಜ್ಞೆ ಜಾರಿ

ಬೆಂಗಳೂರು: ಬಿಸಿಲಿನ ತಾಪಕ್ಕೆ ರೈಲ್ವೇ ಹಳಿಯ ರಬ್ಬರ್‌ಗೆ ಬೆಂಕಿ, 20 ನಿಮಿಷ ಮೆಟ್ರೋ ಸಂಚಾರ ಬಂದ್