Uncategorized

ಇನ್‌ಸ್ಟಾಗ್ರಾಮ್‌ ರೀಲ್ಸ್‌ ಯುವಕನ ಆತ್ಮಹತ್ಯೆಗೆ ಕಾರಣವಾಯಿತೇ? ಏನಿದು ದ್ವೇಷದ ಕಾಮೆಂಟ್‌? 16 ವರ್ಷದ ಕಲಾವಿದನ ಈ ನಿರ್ಧಾರಕ್ಕೆ ಕಾರಣವೇನು?

ನ್ಯೂಸ್ ನಾಟೌಟ್ : ಕೆಲವರು ಜೀವನ ಕಟ್ಟಿಕೊಳ್ಳಲು ಏನೇನೋ ಕಸರತ್ತುಗಳನ್ನು ಮಾಡುತ್ತಾರೆ.ಇತ್ತೀಚಿನ ಯುವಜನತೆಗೆ ಯೂಟ್ಯೂಬ್ ಚಾನೆಲ್, ರೀಲ್ಸ್ ಉತ್ತಮ ವೇದಿಕೆ ಒದಗಿಸಿಕೊಟ್ಟಿದೆ.ಹೀಗೆ ಇಲ್ಲೊಬ್ಬ ಯುವಕ ರೀಲ್ಸ್‌ ಗೆ ಬಂದಿರುವ ಕಾಮೆಂಟ್‌ ಓದಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.ಟೀಕೆಗಳನ್ನು ಪಾಸಿಟಿವ್ ಆಗಿ ತೆಕೊಳ್ಳೋ ಬದಲು ಅದನ್ನೇ ಗಂಭೀರವಾಗಿ ತೆಗೆದುಕೊಂಡು ಆತ್ಮಹತ್ಯೆಗೆ ಶರಣಾದ ದುರಂತ ಘಟನೆಯಿದು.

ಮಧ್ಯಪ್ರದೇಶದ ಉಜ್ಜಯಿನಿಯ 16 ವರ್ಷದ ಕ್ವೀರ್ ಕಲಾವಿದರೊಬ್ಬರು ಇನ್‌ಸ್ಟಾಗ್ರಾಮ್ ರೀಲ್‌ ಗೆ ಬಂದ ಸಾವಿರಾರು ದ್ವೇಷದ ಕಾಮೆಂಟ್‌ಗಳನ್ನು ಕಂಡು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕ್ವೀರ್ ಸಮುದಾಯದ ಕಲಾವಿದ ಪ್ರಾಂಶು ಎಂಬವರು ಉಜ್ಜಯಿನಿಯ ಮೇಕಪ್ ಕಲಾವಿದ ಕೂಡಾ ಆಗಿದ್ದರು. ಅವರು ಮೇಕಪ್ ಮತ್ತು ಸೌಂದರ್ಯದ ವಿಷಯವನ್ನು ರೀಲ್ ಗಳ ಮುಖಾಂತರ ಪೋಸ್ಟ್ ಮಾಡುತ್ತಿದ್ದರು ಎಂದು ಹೇಳಲಾಗಿದೆ.ಆದರೆ ವಿಡಿಯೋ ಒಂದರ ಕೆಳಗೆ ಸಾವಿರಾರು ಮಂದಿ ಟೀಕೆಗಳನ್ನು ಮಾಡಿದ್ದು, ಇದರಿಂದ ಬೇಸರ ಉಂಟಾಗಿ ಪ್ರಾಂಶು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Related posts

ಸಂಪಾಜೆ: ವಿದ್ಯೆ ಕಲಿಸಿದ ಸರಕಾರಿ ಕನ್ನಡ ಶಾಲೆಯನ್ನು ಮರೆಯದ ಹಳೆ ವಿದ್ಯಾರ್ಥಿಗಳು

ನಿಖಿಲ್‌ ಸೋಲಿನಿಂದ ಬೇಸರಗೊಂಡು ವಿಷ ಸೇವಿಸಿದ ಅಭಿಮಾನಿ..! 15 ವರ್ಷಗಳಿಂದ ಜೆಡಿಎಸ್‌ ಕಾರ್ಯಕರ್ತನಾಗಿರುವ ಮಂಜುನಾಥ್‌ ಆತ್ಮಹತ್ಯೆಗೆ ಯತ್ನ..!

ಅಪರ್ಣಾ ನಾಯರ್ ದುರಂತ ಅಂತ್ಯಕ್ಕೂ ಮುನ್ನ ಮದ್ಯ ಸೇವಿಸಿದ್ದಳು,ಅಪರ್ಣಾ ಪತಿ ಸಂಜಿತ್ ಪೊಲೀಸ್ ಠಾಣೆಯಲ್ಲಿ ಹೇಳಿದ್ದೇನು? ಘಟನೆಗೂ ಮುನ್ನ ಬಾಟಲಿಯಿಂದ ತಲೆಗೆ ಹೊಡೆದಿದ್ಯಾರು?