ಸುಳ್ಯ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಿವೃತ್ತ ಶಿಕ್ಷಕರಿಗೆ ಗೌರವ, ಶಿಕ್ಷಕರ ದಿನಾಚರಣೆ ಪ್ರಯುಕ್ತ ವಿಶೇಷ ಕಾರ್ಯಕ್ರಮ

ನ್ಯೂಸ್‌ ನಾಟೌಟ್‌: ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶಿಕ್ಷಕ ದಿನಾಚರಣೆಯ ಅಂಗವಾಗಿ ಶಿಕ್ಷಕ ಸಾಹಿತಿಗಳನ್ನು ಗುರುವಾರ ಗೌರವಿಸಲಾಯಿತು. ಸಾಹಿತ್ಯ ರಂಗದಲ್ಲಿ ಹೆಸರು ಮಾಡಿರುವ ನಿವೃತ್ತ ಶಿಕ್ಷಕರನ್ನು ಗುರುತಿಸಿ ಅವರನ್ನು ಗೌರವಿಸುವ ಪರಂಪರೆಯನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಳೆದ ವರ್ಷದಿಂದ ಆರಂಭಿಸಿದೆ.

Yellow Background

ಗುರುವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಹಿರಿಯ ನಿವೃತ್ತ ಶಿಕ್ಷಕರಾದ ಜಯಮ್ಮ ಚೆಟ್ಟಿಮಾಡ ಹಾಗೂ ಶೀಲಾವತಿ ಕೊಳಂಬೆ ಅವರನ್ನು ಅವರ ನಿವಾಸಕ್ಕೆ ತೆರಳಿ ಸಾಹಿತ್ಯ ಪರಿಷತ್ತಿನ ಪರವಾಗಿ ಗೌರವಿಸಲಾಯಿತು. ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲು, ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ, ಚಂದ್ರಮತಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಸಂಜೀವ ಕುದ್ಪಾಜೆ, ಕೇಶವ.ಸಿ‌.ಎ, ಸಂಕೀರ್ಣ ಚೊಕ್ಕಾಡಿ, ಲತಾ ಶ್ರೀ ಸುಪ್ರೀತ್ ಮೋಂಟಡ್ಕ , ಪಂಜ ಹೋಬಳಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ, ಕಾರ್ಯದರ್ಶಿ ರೂಪವಾಣಿ ಕೆರೆಮೂಲೆ ಉಪಸ್ಥಿತರಿದ್ದರು.

Related posts

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ, ವಿಶೇಷ ಜಾಗೃತಿ ಕಾರ್ಯಕ್ರಮ

ಸಂಪಾಜೆ:ಅಲ್ಪಕಾಲದ ಅಸೌಖ್ಯದಿಂದ ಚಾಲಕ ನಿಧನ

ಸುಳ್ಯ:NMPUCನಲ್ಲಿ ಟ್ಯಾಲೆಂಟ್ಸ್ ಡೇ ಸಂಭ್ರಮ,ಹಾಡು,ನೃತ್ಯ,ಪ್ರಹಸನದ ಮೂಲಕ ಗಮನ ಸೆಳೆದ ವಿದ್ಯಾರ್ಥಿಗಳು