ದೇಶ-ಪ್ರಪಂಚ

Puneeth Rajkumar:ತಮಿಳುನಾಡಲ್ಲಿ ಅಪ್ಪುವಿಗೆ ಹೀಗೊಬ್ಬ ಅಭಿಮಾನಿ ,ಪುನೀತ್ ರಾಜ್ ಕುಮಾರ್ ಗಾಗಿ ಸೈಕಲ್ ನಲ್ಲೇ ದೇಶ ಪರ್ಯಟನೆ!

ನ್ಯೂಸ್ ನಾಟೌಟ್ : ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ (Puneeth Rajkumar) ಅಭಿಮಾನಿಗಳ ಪಾಲಿನ ದೇವರು.ಅಪ್ಪು ಎಂದೇ ಖ್ಯಾತರಾಗಿರುವ ಇವರು ನಮ್ಮೆಲ್ಲರನ್ನು ಅಗಲಿ 2 ವರ್ಷವಾದರೂ ಅಭಿಮಾನಿಗಳು ಮಾತ್ರ ಒಂದಲ್ಲಾ ಒಂದು ರೀತಿಯಲ್ಲಿ ಅವರನ್ನು ಸ್ಮರಿಸುತ್ತಲೇ ಇದ್ದಾರೆ.ಇವರ ಹೆಸರಲ್ಲಿ ಹೋಟೆಲ್ , ಶಾಪ್ ಗಳನ್ನು ತೆರೆದವರಿದ್ದಾರೆ. ಇದೀಗ ಇಲ್ಲೊರ್ವ ಯುವಕ ಅಪ್ಪು ಸಲುವಾಗಿ ಸೈಕಲ್ ನಲ್ಲೇ ದೇಶ ಪರ್ಯಟನೆ ಮಾಡುತ್ತಿದ್ದಾನೆ. ಅದು ಕೂಡ ತಮಿಳುನಾಡಿನ ಯುವಕ ವಿಶೇಷ.

ಮುತ್ತುಸಲ್ವನ್ (Tamilian Muthusalvan) ಎಂಬ ಯುವಕ ಸೈಕಲ್‌ ಮೂಲಕ ದೇಶ ಸುತ್ತುತ್ತಿರುವ ಯುವಕ.ಸೈಕಲ್ ಪ್ರಯಾಣ ಇಷ್ಟ ಪಡುತ್ತಿದ್ದ ಈತ ಸೈಕಲ್ ಮೂಲಕವೇ ದೇಶವನ್ನು ಸುತ್ತುವ ಸಂಕಲ್ಪ ಮಾಡಿದ್ದಾನೆ. ಅಲ್ಪ ಸ್ವಲ್ಪ ಕನ್ನಡ ಮಾತಾಡುವ ಈತ ಕೇವಲ ಮೂರೇ ವರ್ಷದಲ್ಲಿ ದೇಶವನ್ನು ಸಂಪೂರ್ಣವಾಗಿ ಸುತ್ತುವ ಗುರಿ ಹೊಂದಿದ್ದಾನೆ.

ಪುನೀತ್ ಅಭಿಮಾನಿಗಳು ಕೂಡ ಈತನ ಈ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.ಕೆಲವರು ಈತನ ಸನ್ಮಾನವನ್ನು ಮಾಡಿದ್ದಾರೆ. ಈಗಾಗಲೇ 1954 ಕಿಲೋ ಮೀಟರ್ ಸಂಚಾರವನ್ನು ಪೂರ್ಣಗೊಳಿಸಿದ ಈತ ಶನಿವಾರ (ಜುಲೈ 15) ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣಕ್ಕೆ ಭೇಟಿ ನೀಡಿದ್ದಾನೆ.ಶ್ರೀನಿವಾಸಪುರ ತಾಲೂಕಿನ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ (Puneeth Rajkumar Fans Association) ವತಿಯಿಂದ ಅಪ್ಪು ಅಭಿಮಾನಿಯಾಗಿರುವ ಮುತ್ತುಸಲ್ವನ್‌ಗೆ ಸನ್ಮಾನಿಸಿ ಗೌರವಿಸಲಾಗಿದೆ. ಅಲ್ಲದೆ,ಈತನಿಗೆ ಪ್ರೋತ್ಸಾಹ ನೀಡಬೇಕೆನ್ನುವ ನೆಲೆಯಲ್ಲಿ ಅಲ್ಪ ಪ್ರೋತ್ಸಾಹ ಧನವನ್ನೂ ಕೂಡ ನೀಡಿದ್ದಾರೆ.

ಮುತ್ತುಸಲ್ವನ್ ಸೈಕಲ್ ಯಾತ್ರೆಯನ್ನು ಆರಂಭಿಸಿರುವ ಬಗ್ಗೆ ಪುನೀತ್ ಧರ್ಮಪತ್ನಿ ಅಶ್ವಿನಿ ಪುನೀತ್‌ ರಾಜಕುಮಾರ್‌ ಮಾಹಿತಿ ಪಡೆದಿದ್ದರಂತೆ!.ಒಂದು ದಿನ ಅವರೇ ನನ್ನನ್ನು ಕರೆಸಿದ್ದರು.ಸೈಕಲ್ ಯಾತ್ರೆ ಬಗ್ಗೆ ಮಾಹಿತಿ ಪಡೆದಿದ್ದರು ಎನ್ನುವ ಈತನಿಗೆ ತಮ್ಮ ಪಿಆರ್‌ಕೆ ಪ್ರೊಡಕ್ಷನ್ಸ್‌ನ ಗಂಧದ ಗುಡಿ ಚಿತ್ರದ ಟೀ ಶರ್ಟ್ ಹಾಗೂ ಪುನೀತ್ ಬಳಕೆ ಮಾಡಿದ್ದ ಜೇಮ್ಸ್ ಚಿತ್ರದ ಕನ್ನಡಕವನ್ನು ನೀಡಿ ಶುಭ ಹಾರೈಸಿದ್ದರು ಎಂದು ಆತ ಅನುಭವ ಹಂಚಿಕೊಂಡಿದ್ದಾನೆ.

ಸುಮಾರು ರಾಜ್ಯಗಳನ್ನು ಸುತ್ತಿ ಬಂದಿದ್ದೇನೆ. ಎಲ್ಲ ರಾಜ್ಯಗಳಲ್ಲಿಯೂ ರಾಜಕುಮಾರ್ ಕುಟುಂಬದ (Rajkumar family) ಅಭಿಮಾನಿಗಳಿದ್ದಾರೆ.ಅವರ ಗುಣ ನಡತೆಯನ್ನು ಗುಣಗಾನ ಮಾಡುತ್ತಾರೆ. ಹೀಗಾಗಿ ಈ ದೇಶ ಪರ್ಯಟನೆಗೆ ನಿ್ಮಮೆಲ್ಲರ ಸಹಕಾರ ಅತ್ಯಗತ್ಯ.ದಯವಿಟ್ಟು ಪ್ರೋತ್ಸಾಹ ನೀಡಿ ಎನ್ನುವ ಈತ ಉತ್ತಮ ರೀತಿಯಲ್ಲಿ ನನಗೆ ಶುಭ ಹಾರೈಸಿ ಎಂದಿದ್ದಾನೆ.ಅಶ್ವಿನಿ ಪುನೀತ್ ಅವರಿಗೂ ನನ್ನ ಈ ಕೆಲಸದಿಂದ ತುಂಬಾ ಖುಷಿಯಾಗಿದೆ.ಅವರು ನನಗೆ ಶುಭಾರ್ಶೀವಾದ ಮಾಡಿದ್ದಾರೆ. ಇದು ನನಗೆ ಮತ್ತಷ್ಟು ಖುಷಿ ತಂದಿದೆ ಎಂದಿದ್ದಾನೆ. ಈಗ ಕೋಲಾರಕ್ಕೆ ಬಂದಿದ್ದೇನೆ. ಇಲ್ಲೂ ಸಹ ನನ್ನನ್ನು ಖುಷಿಯಿಂದ ನೋಡಿಕೊಂಡಿದ್ದಾರೆ ಎಂದಿದ್ದಾನೆ.

Related posts

ಸೇನಾ ಹೆಲಿಕಾಪ್ಟರ್‌ ಪತನ..! ಕಳೆದ ಎರಡು ತಿಂಗಳಲ್ಲಿ ಮೂರನೇ ಬಾರಿ ದುರ್ಘಟನೆ!

ಶ್ರೀರಾಮನ ಚಿತ್ರವಿರುವ ಪೇಪರ್​ ತಟ್ಟೆಯಲ್ಲಿ ಬಿರಿಯಾನಿ ಮಾರಾಟ..! ಅಂಗಡಿ ಮಾಲೀಕ ಅರೆಸ್ಟ್, ಇಲ್ಲಿದೆ ವೈರಲ್ ವಿಡಿಯೋ

ಗಣರಾಜ್ಯೋತ್ಸವಕ್ಕೆ ಫ್ರಾನ್ಸ್ ಅಧ್ಯಕ್ಷರನ್ನು ಭಾರತದ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದೇಕೆ? ಭಾರತ ಪ್ರಾನ್ಸ್ ನಡುವಿನ ಒಪ್ಪಂದಗಳೇನು..?