ದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ತೈವಾನ್ ನಲ್ಲಿ ಇಪ್ಪತ್ತಕ್ಕೂ ಹೆಚ್ಚು ಭಾರಿ ಸರಣಿ ಭೂಕಂಪ..! ರಾತ್ರಿಯಿಡೀ ಮನೆಯಿಂದ ಹೊರಗೆ ಕಾಲಕಳೆದ ಜನ..! ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್: ತೈವಾನ್‌ ನ ಪೂರ್ವ ಕೌಂಟಿ ಹುವಾಲಿಯನ್‌ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಳೆದ ರಾತ್ರಿ (ಎ.23) ಸರಣಿ ಭೂಕಂಪ ಸಂಭವಿಸಿದ ವರದಿಯಾಗಿದೆ. ಅತ್ಯಂತ ಶಕ್ತಿಶಾಲಿ ಭೂಕಂಪ ಇದಾಗಿದೆ ಎಂದು ಹೇಳಲಾಗಿದೆ. ತೈವಾನ್ ರಾಜಧಾನಿಯಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರ ಮುಂಜಾನೆಯವರೆಗೆ ಇಪ್ಪತ್ತಕ್ಕೂ ಹೆಚ್ಚು ಭಾರಿ ಭೂಕಂಪನಡಾ ಅನುಭವವಾಗಿದೆ ಎಂದು ಹೇಳಲಾಗಿದೆ.

ಪೂರ್ವ ಹುವಾಲಿಯನ್‌ನಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಕೇಂದ್ರ ಹವಾಮಾನ ಆಡಳಿತ ತಿಳಿಸಿದೆ. ಭೂಕಂಪದಿಂದ ಯಾವುದೇ ಸಾ* ವು ನೋ* ವು ಸಂಭವಿಸಿದ ಬಗ್ಗೆ ನಿಖರ ಮಾಹಿತಿ ಲಭಿಸಿಲ್ಲ. ಕೇಂದ್ರ ಹವಾಮಾನ ಇಲಾಖೆಯ ಪ್ರಕಾರ, ಮೊದಲ ತೀವ್ರ ಭೂಕಂಪವು ಸೋಮವಾರ ಸಂಜೆ 5:08ಕ್ಕೆ ರಾಜಧಾನಿ ತೈಪೆಯಲ್ಲಿ 5.5 ರ ತೀವ್ರತೆಯಾ ಭೂಕಂಪ ಸಂಭವಿಸಿದೆ ಎಂದು ಹೇಳಲಾಗಿದೆ.

ಸೋಮವಾರ ಸಂಜೆಯಿಂದ ಮೊದಲ ಭೂಕಂಪ ಸಂಭವಿಸಿದ ಬೆನ್ನಲ್ಲೇ ಮಂಗಳವಾರ ಮುಂಜಾನೆ ವರೆಗೆ ಇಪ್ಪತ್ತಕ್ಕೂ ಹೆಚ್ಚು ಭೂಕಂಪಗಳು ಸಂಭವಿಸಿದೆ ಎಂದು ಅಲ್ಲಿನ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಅಲ್ಲದೆ ಭೂಕಂಪ ಸಂಭವಿಸಿದ ಕೂಡಲೇ ಮನೆಮಂದಿ ಮನೆಯಿಂದ ಹೊರಗೆ ಓಡೋಡಿ ಬಂದಿದ್ದು ಮತ್ತೆ ಮನೆಯೊಳಗೇ ಹೋಗುವ ಧೈರ್ಯ ನಮ್ಮಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ.

Related posts

ಪ್ರಧಾನಿ ಮೋದಿ ಹುಟ್ಟು ಹಬ್ಬದ ಪ್ರಯುಕ್ತ ತುಳುನಾಡಿನ ದೈವ ಚಾವಡಿಯಲ್ಲಿ ದೀಪಾರಾಧನೆ, ಶ್ರೀ ಮಹಾವಿಷ್ಣುವಿನ ಸನ್ನಿಧಿಯಲ್ಲಿ ಯುವಕರ ತಂಡ ಪ್ರಾರ್ಥಿಸಿದ್ದೇನು..?

ದೇಶಕ್ಕೆ ಮಹಿಳಾ ಪ್ರಧಾನಿ..! ಲೋಕಸಭೆ ಚುನಾವಣೆಯಲ್ಲಿ ಮೋದಿ ಗೆಲ್ಲೋದಿಲ್ವಾ..? ನೊಣವಿನಕೆರೆ ಗುರೂಜಿ ಹೇಳಿದ ಭವಿಷ್ಯ ನಿಜವಾಗುತ್ತಾ..?

ಅನ್ಯಕೋಮಿನ ಯುವತಿಯೊಂದಿಗೆ ಯುವಕನ ಲವ್ ಮ್ಯಾರೇಜ್..! ಹಿಂದೂ ಕಾರ್ಯಕರ್ತರು, ಪೊಲೀಸರ ನಡುವೆ ಜಟಾಪಟಿ, ಲಾಠಿ ಚಾರ್ಜ್..!