ಕ್ರೈಂವೈರಲ್ ನ್ಯೂಸ್

ಕೈಕಾಲು, ಬಾಯಿ ಕಟ್ಟಿದ ಸ್ಥಿತಿಯಲ್ಲಿ ನಿಗೂಢವಾಗಿ ಸ್ವಾಮೀಜಿ ಶವ ಪತ್ತೆ..! ಸಂಜೆ ಗ್ರಾಮಸ್ಥರೊಂದಿಗೆ ಮಾತನಾಡಿ ಮಲಗಲು ತೆರಳಿದ ಸ್ವಾಮೀಜಿಗೆ ಮುಂದೇನಾಯ್ತು? ಯಾರೀ ಸ್ವಾಮೀಜಿ..?

ನ್ಯೂಸ್ ನಾಟೌಟ್: ಸ್ವಾಮೀಜಿಯೊಬ್ಬರ ಮೃತದೇಹ ಕೈಕಾಲು ಮತ್ತು ಬಾಯಿ ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ರಾಜಸ್ಥಾನದ ಕುಚಾಮನ್ ಜಿಲ್ಲೆಯಲ್ಲಿ ನಡೆದಿದೆ.

ಮೃತ ಮುನಿಯನ್ನು ಮೋಹನ್ ದಾಸ್ (72) ಎಂದು ಗುರುತಿಸಲಾಗಿದ್ದು, ಕಳೆದ 15 ವರ್ಷಗಳಿಂದ ರಾಸಲ್ ಗ್ರಾಮದಲ್ಲಿ ವಾಸಿಸುತ್ತಿದ್ದರು. ಸೋಮವಾರ ಮುಂಜಾನೆ ಗ್ರಾಮಸ್ಥರಿಗೆ ಶವವಾಗಿ ಪತ್ತೆಯಾಗಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೃತ ಸ್ವಾಮೀಜಿ ಒಬ್ಬಂಟಿಯಾಗಿ ವಾಸಿಸುತ್ತಿದ್ದು, ಕೊ* ಲೆಯಾಗಿರಬಹುದು ಎಂದು ಶಂಕಿಸಲಾಗಿದೆ. ಕೊ* ಲೆ ಎಂದು ಪ್ರಕರಣ ದಾಖಲಿಸಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಕುಚಾಮನ್ ನಗರ ಎಸ್‌ಹೆಚ್‌ಒ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ಬಳಿಕ ಸ್ವಾಮೀಜಿಯ ಮೃತದೇಹವನ್ನು ಅದೇ ಗ್ರಾಮದಲ್ಲಿ ವಾಸಿಸುತ್ತಿರುವ ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ ಎಂದಿದ್ದಾರೆ. ಭಾನುವಾರ ಸಂಜೆ ಗ್ರಾಮಸ್ಥರೊಂದಿಗೆ ಮಾತನಾಡಿದ ಬಳಿಕ ಸ್ವಾಮೀಜಿ ಮಲಗಲು ತಮ್ಮ ಕೋಣೆಗೆ ತೆರಳಿದ್ದರು. ಸೋಮವಾರ ಮುಂಜಾನೆ ಸ್ವಾಮೀಜಿ ಮೃತದೇಹ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ನೆಲದ ಮೇಲೆ ಬಿದ್ದಿರುವುದನ್ನು ಕಂಡು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

Related posts

14 ವರ್ಷಗಳ ಬಳಿಕ ಜನಾರ್ಧನ ರೆಡ್ಡಿಗೆ ಬಳ್ಳಾರಿ ಪ್ರವೇಶಕ್ಕೆ ಅನುಮತಿ..! ಸುಪ್ರೀಂ ಕೋರ್ಟ್‌ ಆದೇಶ

ಹೆಲ್ಮೆಟ್ ಹಾಕದ ಪೊಲೀಸರಿಗೂ ದಂಡ ವಿಧಿಸಿದ ಎಸ್.ಪಿ..! ಕರ್ಕಶ ಸೈಲೆನ್ಸರ್ ಗಳನ್ನು ರೋಡ್ ರೋಲರ್ ನಿಂದ ಪುಡಿ ಮಾಡಿಸಿದ ಪೊಲೀಸರು..!

ಹಾಡಹಗಲೇ ಮಚ್ಚಿನಿಂದ ಯುವತಿಯನ್ನು ಕೊಂದ ಕಾಲ್ ​ಸೆಂಟರ್ ಉದ್ಯೋಗಿ..! ಪೊಲೀಸರು ಈ ಬಗ್ಗೆ ಹೇಳಿದ್ದೇನು..?