Uncategorized

ರಿಷಿ ಪ್ರಧಾನಿಯಾಗುತ್ತಿರುವ ನಡುವೆಯೇ ಬ್ರಿಟನ್‌ನಲ್ಲಿ ಸಾರ್ವತ್ರಿಕ ಚುನಾವಣೆಗೆ ಒತ್ತಾಯ

ನ್ಯೂಸ್ ನಾಟೌಟ್:  ಭಾರತ ಮೂಲದ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲು ತಯಾರಿ ನಡೆಸಿರುವ ನಡುವೆಯೇ ಸಾರ್ವತ್ರಿಕ ಚುನಾವಣೆಯ ಕೂಗು ಬ್ರಿಟನ್‌ನಲ್ಲಿ ಪ್ರಬಲವಾಗುತ್ತಿದೆ. ಅಲ್ಲಿನ, ಸುಮಾರು ಮೂರನೇ ಒಂದು ಭಾಗದಷ್ಟು ಮತದಾರರು ವರ್ಷಾಂತ್ಯಕ್ಕೆ ಮೊದಲೇ ಚುನಾವಣೆಗಳು ನಡೆಯಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

2022ರ ಒಳಗೆ ಸಾರ್ವತ್ರಿಕ ಚುನಾವಣೆ ನಡೆಯಲಿ ಎಂದು ಬಯಸುತ್ತಿರುವುದಾಗಿ ಶೇಕಡ 62ರಷ್ಟು ಜನ ಹೇಳಿದ್ದಾರೆ ಎಂದು ಚುನಾವಣಾ ಸಮೀಕ್ಷಾ ಸಂಸ್ಥೆ ‘ಇಪ್ಸೋಸ್’ ಹೇಳಿದೆ. ಆಗಸ್ಟ್ ಆರಂಭದಲ್ಲಿ, ಶೇ 51ರಷ್ಟು ಜನರು ಈ ವರ್ಷ ಸಾರ್ವತ್ರಿಕ ಚುನಾವಣೆಗೆ ಹೋಗಲು ಬಯಸಿದ್ದರು ಎಂದು ‘ಇಪ್ಸೋಸ್’ ಹೇಳಿದೆ. ಅಕ್ಟೋಬರ್‌ 20 –21ರ ನಡುವೆ, 1,000 ಜನರನ್ನು ಸಂಪರ್ಕಿಸಿ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಗೊತ್ತಾಗಿದೆ ಎಂದು ‘ಇಪ್ಸೋಸ್‌’ ತಿಳಿಸಿದೆ.

Related posts

ಇಬ್ಬರು ಮಹಿಳಾ ಅಧಿಕಾರಿಗಳ ವಾರ್,ಡಿಕೆ ರವಿ ಪತ್ನಿ ಕುಸುಮಾ ಅವರಿಂದ ಟ್ವೀಟ್

ಇಟಲಿಯ ಜಲಪಾತದಿಂದ ಜಾರಿಬಿದ್ದು ಮೈಸೂರು ಮೂಲದ ಫುಟ್ಬಾಲಿಗ ಸಾವು

ಇನ್‌ಸ್ಟಾಗ್ರಾಮ್‌ ರೀಲ್ಸ್‌ ಯುವಕನ ಆತ್ಮಹತ್ಯೆಗೆ ಕಾರಣವಾಯಿತೇ? ಏನಿದು ದ್ವೇಷದ ಕಾಮೆಂಟ್‌? 16 ವರ್ಷದ ಕಲಾವಿದನ ಈ ನಿರ್ಧಾರಕ್ಕೆ ಕಾರಣವೇನು?