ಕರಾವಳಿಸುಳ್ಯ

ಸುಳ್ಯ: ಕೊರಂಬಡ್ಕ ಕೊರಗಜ್ಜ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ, ಆಡಳಿತ ಸಮಿತಿ ನೇತೃತ್ವದಲ್ಲಿ ಉತ್ಸವ ಸಮಿತಿ ರಚನೆ

ನ್ಯೂಸ್‌ ನಾಟೌಟ್‌ :ಸುಳ್ಯದ ಜಯನಗರದಲ್ಲಿರುವ ಕೊರಂಬಡ್ಕ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನ,ಗುಳಿಗ ದೈವ, ಸ್ವಾಮಿ ಕೊರಗಜ್ಜ ದೈವಸ್ಥಾನ ವ್ಯವಸ್ಥಾಪನ ಆಡಳಿತ ಕಾರ್ಯ ಸೇವಾ ಸಮಿತಿ ಟ್ರಸ್ಟ್ (ರಿ ) ಇದರ 2024-25ನೇ ಸಾಲಿನ ಆಡಳಿತ ಸಮಿತಿ ಹಾಗೂ ಕಾಲಾವಧಿ ನೇಮೋತ್ಸವ ಸಮಿತಿ ರಚನೆ ಸಭೆ ಇಂದು ನಡೆಯಿತು. ಈ ಹಿನ್ನಲೆಯಲ್ಲಿ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಕೇಶವ ಸಿ.ಎ ಅವರು ಆಯ್ಕೆಯಾಗಿದ್ದು,ಉಪಾಧ್ಯಕ್ಷರಾಗಿ ಸುರೇಶ್ ನಾರಾಜೆಯವರು ಆಯ್ಕೆಯಾಗಿದ್ದಾರೆ.

ಇನ್ನು ಕಾರ್ಯದರ್ಶಿಯಾಗಿ ಸುಂದರ ಕುದ್ಪಾಜೆ ,ಸಂಚಾಲಕರಾಗಿ ಜಗನಾಥ. ಜಿ ಹಾಗೂ ಉಪಕಾರ್ಯದರ್ಶಿಯಾಗಿ ಶಶಿಕುಮಾರ್ ಕುದ್ಪಾಜೆ ಅವರು ಸಮಿತಿಯಲ್ಲಿ ಇರಲಿದ್ದಾರೆ.ಇತ್ತ 2024-25 ನೇ ಸಾಲಿನ ಕಾಲಾವಧಿ ನೇಮೋತ್ಸವ ಸಮಿತಿ ರಚನೆಯಾಗಿದ್ದು,ಅಧ್ಯಕ್ಷರಾಗಿ ರಮೇಶ್ ಇರಂತ ಮಜಲು ಆಯ್ಕೆಯಾಗಿದ್ದಾರೆ.ಕಾರ್ಯದರ್ಶಿಯಾಗಿ ಕೃಷ್ಣ ನಾಯ್ಕ ಕುದ್ಪಾಜೆ ,ಉಪಾಧ್ಯಕ್ಷರಾಗಿ ಮಮತಾ ಜಯನಗರ ಹಾಗೂ ಕೋಶಾಧಿಕಾರಿಯಾಗಿ ದಿನೇಶ್ ನಾರಾಜೆ ಆಯ್ಕೆಗೊಂಡಿದ್ದಾರೆ.

ಕಾಲಾವಧಿ ನೇಮೋತ್ಸವ ಪ್ರಯುಕ್ತ ಮಾರ್ಚ್ 30 ರಂದು ಬೆಳಗ್ಗೆ 7 ಗಂಟೆಗೆ ಶನಿವಾರ ಗೊನೆ ಕಡಿಯುವುವ ಕಾರ್ಯಕ್ರಮ ಇರಲಿದೆ.6-04-2024 ರಂದು ಗುಳಿಗ ದೈವ, ಮೊಗೇರ್ಕಳ ದೈವ, ತನ್ನಿ ಮಾಣಿಗ ದೈವದ ನೇಮೋತ್ಸವ ಮತ್ತು 7- 04-2024 ರಂದು ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ಹಾಗೂ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ಇರಲಿದೆ.

ಸಭೆಯಲ್ಲಿ ಆಡಳಿತ ಸಮಿತಿ ಹಾಗೂ ಕಾಲಾವಧಿ ನೇಮೋತ್ಸವ ಸಮಿತಿ ಅಧ್ಯಕ್ಷರು,ಉಪಾಧ್ಯಕ್ಷರು, ಕಾರ್ಯದರ್ಶಿಗಳು ಸೇರಿದಂತೆ ಸರ್ವ ಸದಸ್ಯರು ಉಪಸ್ಥಿತರಿದ್ದರು.ಇದೇ ಸಂದರ್ಭ ಏಪ್ರಿಲ್ 6 ಮತ್ತು 7 ರಂದು ನಡೆಯುವ ನೇಮೋತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೈವಗಳ ಕೃಪೆಗೆ ಪಾತ್ರರಾಗುವಂತೆ ಉತ್ಸವ ಸಮಿತಿ ಸದಸ್ಯರುಗಳು ವಿನಂತಿಸಿದ್ದಾರೆ.

Related posts

ಗೃಹಪ್ರವೇಶವಾಗಿ ಐದೇ ದಿನದಲ್ಲಿ ಹೊಸಮನೆಯಲ್ಲೇ ನೇಣಿಗೆ ಶರಣಾದ ಯುವತಿ..!, ಬ್ಯಾಂಕ್‌ ಸಾಲ ಪಡೆದು ಖರೀದಿಸಿದ ಮನೆಯಲ್ಲೇ ದುರಂತ ಅಂತ್ಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಗ್ರರ ತರಬೇತಿ ತಾಣ

ಬಂಟ್ವಾಳ: ಅನ್ನದ ಬಟ್ಟಲು ಬಡಿದು ರಸ್ತೆಗಿಳಿದ ಕಾಂಗ್ರೆಸ್ ನಾಯಕರು..! ಅಷ್ಟಕ್ಕೂ ‘ಕೈ’ ನಾಯಕರು ರಸ್ತೆಗಿಳಿದು ಪ್ರತಿಭಟಿಸಿದ್ದೇಕೆ?