ಕರಾವಳಿಸುಳ್ಯ

ಸುಳ್ಯ:ರೋಟರಿ ಕ್ಲಬ್ ಸುಳ್ಯ ಸಿಟಿ 2023-24ನೇ ಸಾಲಿನ ಎಂಟನೇ ವರ್ಷದ ಪದಾಧಿಕಾರಿಗಳ ಪದಗ್ರಹಣ,ಜು.13 ರ ಸಮಾರಂಭದ ಕುರಿತು ರೋಟರಿ ಸಿಟಿ ಕ್ಲಬ್ ನೂತನ ಅಧ್ಯಕ್ಷರಿಂದ ಪತ್ರಿಕಾಗೋಷ್ಠಿ

ನ್ಯೂಸ್ ನಾಟೌಟ್ :ರೋಟರಿ ಕ್ಲಬ್ ಸುಳ್ಯ ಸಿಟಿ 2023-24ನೇ ಸಾಲಿನ ಎಂಟನೇ ವರ್ಷದ ಪದಾಧಿಕಾರಿಗಳ ಪದಗ್ರಹಣ ನಡೆಯಲಿದ್ದು,ಜು.13 ರಂದು ಸಮಾರಂಭ ಕಾರ್ಯಕ್ರಮ ನೆರವೇರಲಿದೆ ಎಂದು ರೋಟರಿ ಸಿಟಿ ಕ್ಲಬ್ ನ ನೂತನ ಅಧ್ಯಕ್ಷ ಗಿರೀಶ್ ನಾರ್ಕೋಡು ಹೇಳಿದರು.

ಅವರು ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಮಾತನಾಡುತ್ತಾ ಮಾಹಿತಿಯನ್ನು ನೀಡಿದರು.ಈ ವರ್ಷದ ಕಾರ್ಯಕ್ರಮ ತುಂಬಾ ವಿಶೇಷತೆಯಿಂದ ಕೂಡಿರಲಿದ್ದು, ಅಂತರಾಷ್ಟ್ರೀಯ ರೋಟರಿ ಅಧ್ಯಕ್ಷರ ‘ಕ್ರಿಯೇಟ್ ಹೋಪ್‌ ಇನ್‌ ದಿ ವರ್ಲ್ಡ್’ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯಾದ ರೋಟರಿ ಕ್ಲಬ್ ಸುಳ್ಯ ಸಿಟಿ 2016ರಲ್ಲಿ ಆರಂಭಗೊಂಡು ಕಳೆದ ಏಳು ವರ್ಷಗಳಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಂಡಿದೆ.ಇದೀಗ ರೋಟರಿ ಜಿಲ್ಲೆ ೩181 ನಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದೆ. ಯುವಕರಿಂದಲೇ ಕೂಡಿದ ಈ ಸಂಸ್ಥೆ ಜನಮನ್ನಣೆ ಗಳಿಸಿದೆ.ಈ ಬಾರಿ ಅಂಗನವಾಡಿಗಳ ಪುನಃಶ್ಚೇತನ ಮತ್ತು ನೀರಿನ ಸಂರಕ್ಷಣೆ ಬಗ್ಗೆ ಹೆಚ್ಚು ಒತ್ತು ನೀಡಲಾಗಿದ್ದು,ಈಗಾಗಲೇ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೆಟ್ಟಿ ನಾರ್ಕೋಡು ಇಲ್ಲಿಗೆ 4 ಲಕ್ಷ ವೆಚ್ಚದಲ್ಲಿ ಅಗತ್ಯವಿರುವ ಶೌಚಾಲಯ ನಿರ್ಮಾಣ ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ಅವರು ಹೇಳಿದರು.

13-07-2023ರಂದು ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು, ಇದೇ ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮ ತರಗತಿಗಳು ಕೂಡ ಆರಂಭಗೊಂಡಿವೆ.ಇದೀಗ ಇದರ ನಿರ್ವಹಣೆಗೆ ಕ್ಲಬ್ ವತಿಯಿಂದ ಹಾಗೂ ಕ್ಲಬ್‌ನ ಪೂರ್ವಾಧ್ಯಕ್ಷರಾದ ರೋ.ತೀರ್ಥಕುಮಾರ್ ಕುಂಚಡ್ಕರವರ ಸಹಕಾರದೊಂದಿಗೆ ಸುಮಾರು 1.10 ಲಕ್ಷ ದೇಣಿಗೆ ನೀಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಸುಳ್ಯದ ಹಿರಿಯ ವೈದ್ಯರಾದ, ಶ್ರೀ ಶಂಕರ್ ಭಟ್ ರವರನ್ನು ಹಾಗೂ ರಂಗಮಯೂರಿ ನಿರ್ದೇಶಕ ಲೋಕೇಶ್ ಊರುಬೈಲು ರವರನ್ನು ಗೌರವಿಸಲಾಗುವುದು ಎಂದವರು ಹೇಳಿದರು.

ನೂತನ ಅಧ್ಯಕ್ಷರಾಗಿ ರೋ| ಗಿರೀಶ್ ನಾರ್ಕೋಡು, ಕಾರ್ಯದರ್ಶಿಯಾಗಿ ರೊ|ಚೇತನ್ ಪಿ.ಯನ್, ಖಜಾಂಜಿಯಾಗಿ ಹೇಮಂತ್ ಕಾಮತ್ ಅಧಿಕಾರ ಸ್ವೀಕಾರ ಮಾಡಿಕೊಳ್ಳಲಿದ್ದಾರೆ. ರೋ| ಆನಂದ ಖಂಡಿಗ ರವರು ಪದಗ್ರಹಣ ನೇರವೇರಿಸಲಿದ್ದು ,ಮುಖ್ಯ ಅತಿಥಿಗಳಾಗಿ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರೊ| ರಾಜೇಂದ್ರ ಕಲ್‌ಬಾವಿ, ವಲಯ 5ರ ಅಸಿಸ್ಟೆಂಟ್ ಗವರ್ನರ್ ರೋ| ನರಸಿಂಹ ಪೈ, ವಲಯ 5 ರ ರೋನಲ್ ಲೆಫ್ಟಿನೆಂಟ್ ರೊ| ಸುಜಿತ್ ಪಿ.ಕೆ, ಗವರ್ನರ್ ವಿಶೇಷ ಪ್ರತಿನಿಧಿ ರೊ| ಕೇಶವ ಪಿ.ಕೆ. ಇವರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

Related posts

ಮಡಿಕೇರಿ: ಜಗತ್ತಿನಲ್ಲೇ ಅಪರೂಪ ಎನಿಸಿಕೊಂಡಿರುವ ಭಾರೀ ಗಾತ್ರದ ಉಡ ಪ್ರತ್ಯಕ್ಷ..!,ಉಡವನ್ನು ವೀಕ್ಷಿಸಿ ಅಚ್ಚರಿ ವ್ಯಕ್ತಪಡಿಸಿದ ಜನ..!

ಗೇರು ಬೀಜ ಮರಕ್ಕೆ ನೇಣು ಬಿಗಿದುಕೊಂಡು ವೃದ್ಧೆ ಆತ್ಮಹತ್ಯೆ

ನಂದರಾಜ್ ಸಂಕೇಶ್ ರವರಿಗೆ ಮಹಾತ್ಮ ಜ್ಯೋತಿ ಬಾ ಪುಲೆ ಪ್ರಶಸ್ತಿ