ಕರಾವಳಿಸುಳ್ಯ

ಸುಳ್ಯ:ಅವಾಚ್ಯ ಶಬ್ದಗಳಿಂದ ಬೈದು ವ್ಯಕ್ತಿಗೆ ನಾಲ್ವರಿಂದ ಹಲ್ಲೆ ಆರೋಪ,’ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ’ವೆಂದು ಜೀವ ಬೆದರಿಕೆ

ನ್ಯೂಸ್ ನಾಟೌಟ್ : ವ್ಯಕ್ತಿಯೊಬ್ಬರನ್ನು ಮನೆಗೆ ಕರೆದು ತಂಡದಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಆರೋಪದ ಮೇಲೆ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆಯಲ್ಲಿ ಕೊಲ್ಲಮೊಗ್ರು ಗ್ರಾಮದ ಮಾಯಿಲ ಮನೆಯ ಕುಮಾರ್‌ (46) ಗಾಯಗೊಂಡು ಸುಳ್ಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮೇ 21ರಂದು ಕುಮಾರ್‌ ಅವರ ಮನೆಗೆ ಕೊಲ್ಲಮೊಗ್ರು ಗ್ರಾಮದ ಕಟ್ಟ ನಿವಾಸಿಯಾಗಿರುವ ಮಣಿಕಂಠ ಬಂದಿದ್ದಾರೆ.ಈ ವೇಳೆ  ಆ ವ್ಯಕ್ತಿಗೆ  ಕುಮಾರ್ ಅವರು  “ಮನೆಯಲ್ಲಿ ಯಾರೂ ಇಲ್ಲ, ಈ ಸಮಯದಲ್ಲಿ ಮನೆಗೆ ಬಂದಿರುವುದು ಯಾಕೆ’ ಎಂದು ಕೇಳಿದ್ದಾರೆ.ಹೀಗೆ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಅದೇ ಸಂದರ್ಭದಲ್ಲಿ ಮೇ. 27ರಂದು ಮಣಿಕಂಠ, ಕುಮಾರ್‌ ಎಂಬುವವರನ್ನು ಮೊನ್ನೆಯ ವಿಷಯವನ್ನು ಮಾತುಕತೆಯಲ್ಲಿ ಮುಗಿಸುವ ಎಂದು ಹೇಳಿ ಮನೆಗೆ ಕರೆದಿದ್ದಾರೆ ಎನ್ನಲಾಗಿದೆ.ಈ ಹಿನ್ನಲೆಯಲ್ಲಿ ಬೆಳಗ್ಗಿನ ವೇಳೆ ಕುಮಾರ್ ಎಂಬುವವರು  ಮಣಿಕಂಠ ಮನೆಗೆ ತೆರಳಿದಾಗ ಮಣಿಕಂಠ ಸೇರಿದಂತೆ ಸುಂದರ, ದುರ್ಗಾದಾಸ್‌ ಬಂಬಿಲ ಎಂಬ ಮೂವರು ಸೇರಿ ಕುಮಾರ್ ಎಂಬುವವರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು, ಕೈಯಿಂದಲೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.ವ್ಯಕ್ತಿ ದೊಣ್ಣೆ ಹಿಡಿದುಕೊಂಡು ಕುಮಾರ್‌ ಅವರ ಎಡ ಕಿವಿಯ ಭಾಗಕ್ಕೆ ಹೊಡೆದಿದ್ದಾರೆಂದು ಹಾಗೂ ಮುಂದಕ್ಕೆ ನನ್ನ ತಂಟೆಗೆ ಬಂದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Related posts

ಕಾರ್ಕಳ ಯಕ್ಷ ರಂಗಾಯಣ ನಿರ್ದೇಶಕ ನೇಮಕಾತಿ ರದ್ದುಗೊಳಿಸಿ ಆದೇಶ,ತಮ್ಮ ಸ್ಥಾನವನ್ನು ಕಳೆದುಕೊಳ್ಳಲಿರುವ ಜೀವನ್ ರಾಂ ಸುಳ್ಯ

ಸುಳ್ಯ: ಕೆವಿಜಿ ಆಸ್ಪತ್ರೆಗೆ ದ.ಕ. ಸಂಸದ ಬ್ರಿಜೇಶ್‌ ಚೌಟ ಭೇಟಿ, ವಿಶಿಷ್ಟ ಕಾಯಿಲೆಯಿಂದ ಬಳಲುತ್ತಿರುವ ಚಾಂದಿನಿಯ ಆರೋಗ್ಯ ವಿಚಾರಣೆ

7 ಕೋಟಿ ಮೌಲ್ಯದ ಚಿನ್ನ ಸಾಗಿಸುತ್ತಿದ್ದ ದಾಖಲೆಯಿಲ್ಲದ ಟೆಂಪೋ ಪೊಲೀಸರ ವಶಕ್ಕೆ , ಶಿವಮೊಗ್ಗದಲ್ಲಿ 1.69 ಕೋಟಿ ನಗದು ಜಪ್ತಿ