Uncategorized

ಪೆರಾಜೆ: ಚಲಿಸುತ್ತಿದ್ದ ವಾಹನದ ಮೇಲೆ ಬಿದ್ದ ಬೃಹತ್ ಮರ, ಭಾರೀ ಅವಘಡ, ತಪ್ಪಿದ ದುರಂತ, ವಿದ್ಯುತ್ ಕಂಬಗಳೆಲ್ಲ ಧರೆಗೆ

ನ್ಯೂಸ್ ನಾಟೌಟ್: ಪೆರಾಜೆಯ ಕಲ್ಚರ್ಪೆ ಬಳಿ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಲೈಲ್ಯಾಂಡ್ ದೋಸ್ತ್ ವಾಹನದ ಮೇಲೆ ಮರವೊಂದು ಬಿದ್ದಿದೆ. ಪರಿಣಾಮ ವಾಹನ ಜಖಂಗೊಂಡಿದೆ. ಒಳಗಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಾಹನದೊಳಗೆ ಚಾಲಕರು ಮಾತ್ರ ಇದ್ದರು, ತಮಿಳುನಾಡು ಮೂಲದ ವಾಹನ ಎಂದು ತಿಳಿದು ಬಂದಿದೆ. ಕರೆಂಟ್ ಕಂಬ ಕೂಡ ತುಂಡಾಗಿ ರಸ್ತೆಗೆ ಬಿದ್ದಿದೆ, ಭಾರಿ ಹಾನಿಯಾಗಿದೆ.

ಸದ್ಯ ಎರಡೂ ಕಡೆಯಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ ಎಂದು ತಿಳಿದು ಬಂದಿದೆ. ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದೆ. ಇದರಿಂದಾಗಿ ದೂರದ ಊರಿಗೆ ಹೋಗುವವರಿಗೆ ಅಡಚಣೆ ಆಗಿದೆ. ಸದ್ಯ ಹೊರಗೆ ಮಳೆ ಕೂಡ ಸುರಿಯುತ್ತಿದ್ದು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Related posts

ರಿಷಿ ಪ್ರಧಾನಿಯಾಗುತ್ತಿರುವ ನಡುವೆಯೇ ಬ್ರಿಟನ್‌ನಲ್ಲಿ ಸಾರ್ವತ್ರಿಕ ಚುನಾವಣೆಗೆ ಒತ್ತಾಯ

ನಾಲ್ಕನೇ ಮದುವೆಗೆ ಕಾಲಿಟ್ಟ ನರೇಶ್,ನಟಿ ಪವಿತ್ರಾ ಲೋಕೇಶ್ ಜತೆ ವಿವಾಹ,ಫೋಟೋ ವೈರಲ್

ಪ್ರಧಾನಿ ಮೋದಿ ಬಂದ ಬಳಿಕ ಡಬ್ಬಲ್ ಆಯ್ತು ಬಂಡೀಪುರದ ಆದಾಯ..!ಆದಾಯದಲ್ಲಿ ರಾಜ್ಯದಲ್ಲಿಯೇ ನಂಬರ್ ಓನ್..!