ನ್ಯೂಸ್ ನಾಟೌಟ್: ಸುಳ್ಯ ತಾಲೂಕು ಮೊಗೇರ ಯುವ ವೇದಿಕೆಯ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಭಾನುವಾರ (ಜು. 23ರಂದು) ಸುಳ್ಯದಲ್ಲಿ ನಡೆಯಿತು.
ಯುವ ವೇದಿಕೆ ಅಧ್ಯಕ್ಷ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಮೊಗೇರ ಸಂಘದ ಅಧ್ಯಕ್ಷ ಕರುಣಾಕರ ಪಲ್ಲತಡ್ಕ , ಗೌರವ ಸಲಹೆಗಾರರಾದ ಕೇಶವ ಮಾಸ್ತರ್, ದೇವಪ್ಪ ಹೈದಂಗೂರು, ಮಾಜಿ ಅಧ್ಯಕ್ಷ ಮಹೇಶ್ ಬಂಗ್ಲೆಗುಡ್ಡೆ, ಪ್ರಕಾಶ್ ಬಂಗ್ಲೆಗುಡ್ಡೆ ವೇದಿಕೆಯಲ್ಲಿದ್ದರು. ಸಭೆಯಲ್ಲಿ ನೂತನ ಯುವ ವೇದಿಕೆ ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಪ್ರಕಾಶ್ ಪಿ.ಎಸ್., ಅಧ್ಯಕ್ಷರಾಗಿ ಲಕ್ಷ್ಮಣ ಪಾರೆ, ಉಪಕಾರ್ಯದರ್ಶಿ ಮನೋಜ್ ಪೈಲಾರು, ಪ್ರ.ಕಾರ್ಯದರ್ಶಿ ಪ್ರಶಾಂತ ಬಂಗ್ಲೆಗುಡ್ಡೆ, ಜತೆ ಕಾರ್ಯದರ್ಶಿ ಕಿರಣ್ ಮಾಡದಕಾನ, ಕೋಶಾಧಿಕಾರಿ ಸುಧಾಕರ ಮೇನಾಲ, ಸಂಘಟನಾ ಕಾರ್ಯದರ್ಶಿ ಗ್ರಾಮವಾರು- ಅರಂತೋಡು ಕುಸುಮಾಧರ ಬಾಜಿನಡ್ಕ, ಸಂಪಾಜೆ ಸತೀಶ ಕಡೆಪಾಲ, ಸುಳ್ಯ ನಗರ ಮಧುಸೂದನ ಬೂಡು, ಅ.ಮುಡ್ನೂರು ಸುನಿಲ್ ಕುಮಾರ್, ಉಬರಡ್ಕ ಗೌತಮ ಕಾಡುತೋಟ, ಅಜ್ಜಾವರ-ಮೇನಾಲ ಚಂದ್ರಶೇಖರ್ ಪಿ.ಆರ್, ಗುತ್ತಿಗಾರು – ಅಭಿಷೇಕ್, ಬೆಳ್ಳಾರೆ- ವಿಜಯ್ ಪಾಟಜೆ, ಕೃತಿನ್, ಕ್ರೀಡಾ ಕಾರ್ಯದರ್ಶಿ- ಚೆನ್ನಕೇಶವ ಬಂಗ್ಲೆಗುಡ್ಡೆ, ತಿಲಕ್ ಬಂಗ್ಲೆಗುಡ್ಡೆ, ಮಾಧ್ಯಮ -ಅಭಿಷೇಕ್ ಗುತ್ತಿಗಾರು, ಸಾಂಸ್ಕೃತಿಕ ಕಾರ್ಯದರ್ಶಿ -ಚಿದಾನಂದ ಕೆ., ಪುರುಷೋತ್ತಮ ಅರಂತೋಡು, ಗೌರವ ಸಲಹೆಗಾರು ಕೇಶವ ಮಾಸ್ತರ್ ಹೊಸಗದ್ದೆ, ಕರುಣಾಕರ ಪಲ್ಲತಡ್ಕ, ಲೋಕೇಶ ಪಲ್ಲತಡ್ಕ, ಪ್ರಕಾಶ್ ಬಂಗ್ಲೆಗುಡ್ಡೆ, ದೇವಪ್ಪ ಹೈದಂಗೂರು, ಮನೋಹರ ಪಲ್ಲತಡ್ಕ ಅವರನ್ನು ಆಯ್ಕೆ ಮಾಡಲಾಯಿತು.
ಸದಸ್ಯರಾಗಿ ಚಂದ್ರಶೇಖರ ಬಿ., ಸುರೇಶ ಬಿ, ಮಹೇಶ್ ಬಿ, ತಿಲಕ್ ರಾಜ್, ಚೋಮ ಮರ್ಕಂಜ, ಪದ್ಮನಾಭ ಬಂಗೇರ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಮೊಗೇರ ಜಾತಿ ಪ್ರಮಾಣ ಕೆಸರುಗದ್ದೆ ಕ್ರೀಡಾಕೂಟ ಮತ್ತಿತರ ವಿಚಾರಗಳ ಕುರಿತು ಚರ್ಚಿಸಲಾಯಿತು. ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಪಾರೆ ಕಾರ್ಯಕ್ರಮ ನಿರ್ವಹಿಸಿದರು.