ಕರಾವಳಿ

ಸುಳ್ಯ: ಮೂವರ ಮೇಲೆ ಕತ್ತಿ ಬೀಸಿದ ತಾಯಿ-ಮಗ

ನ್ಯೂಸ್ ನಾಟೌಟ್: ಹಣ -ಆಸ್ತಿ ಅನ್ನುವುದು ಮನುಷ್ಯನಿಗೆ ಎಷ್ಟಿದ್ದರೂ ಸಾಲದು. ಇನ್ನೂ ಬೇಕು ಅನ್ನುವ ಅತಿ ಆಸೆಯಿಂದ ಸಂಬಂಧಗಳ ಬೆಲೆಯನ್ನೇ ನಾಶ ಮಾಡಿಕೊಂಡಿದ್ದಾನೆ. ಹುಟ್ಟು ಹುಟ್ಟುತ್ತ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಅನ್ನುವ ಮಾತಿನಂತೆ ಸುಳ್ಯದ ನಾಲ್ಕೂರಿನ ಕುಟುಂಬದೊಳಗೆ ಆಸ್ತಿ ವಿಚಾರವಾಗಿ ತೀವ್ರ ಜಗಳ ನಡೆದಿದೆ. ತಾಯಿ-ಮಗ ಸೇರಿಕೊಂಡು ಮೂವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದು ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಏನಿದು ಘಟನೆ?

ನಾಲ್ಕೂರಿನ ಹಾಲೆಮಜಲು ಅಂಬೆಕಲ್ಲು ಸುರೇಶ  ಎಂಬವರು ನೂತನ ಮನೆ ಕೆಲಸ ನಡೆಯುತ್ತಿದ್ದು  ಅಲ್ಲಿಗೆ ಆಗಮಿಸಿದ ಸುರೇಶ್ ಅವರ ಅಕ್ಕ ಮತ್ತು ಮಗ ಆಸ್ತಿ ವಿಚಾರದಲ್ಲಿ ತಗಾದೆ ತೆಗೆದಿದ್ದಾರೆ ಎನ್ನಲಾಗಿದೆ. ಮಾತಿನ ಚಕಮಕಿ ನಡೆದು ಇವರಿಬ್ಬರು  ಸುರೇಶ್ ಎಂಬವರ ಪತ್ನಿ ಮಂಜುಳಾ ಎಂಬವರಿಗೆ ಹಲ್ಲೆ ಮಾಡಿದಲ್ಲದೆ ಮನೆಕೆಲಸದ ಕಾರ್ಮಿಕರಾದ ಸುಬ್ರಹ್ಮಣ್ಯ ಮತ್ತು ಮಾಧವ ಅವರಿಗೆ ತಲವಾರಿನಿಂದ ಕಡಿದು, ರೀಪಿನಿಂದ ಹೊಡೆದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಏಟು ತಾಗಿದ್ದ ಮೂವರು ಸುಳ್ಯ ಸರಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Related posts

ಬ್ರಹ್ಮಾವರ: ಮೀನು ಹಿಡಿಯಲು ತೆರಳಿದ್ದ ನಾಲ್ವರು ನೀರುಪಾಲು

ಸುಳ್ಯ : ಅಡಿಕೆ ಮರ , ರಬ್ಬರ್ ಮರಗಳ ಖರೀದಿ ಹಾಗೂ ಮಾರಾಟಕ್ಕಾಗಿ ಸಂಪರ್ಕಿಸಿ, ಸುಳ್ಯದ ವಿವಿಧ ಭಾಗಗಳಿಗೆ ಸೌದೆ ಪೂರೈಸಲಾಗುವುದು

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಿರುದ್ಧ ವರದಿ, ಪತ್ರಿಕೆಗೆ ಚಾಟಿ