ಸುಳ್ಯ

ಸುಳ್ಯ : ಪದೇ ಪದೆ ಕೈ ಕೊಡುತ್ತಿರುವ ನಗರ ಪಂಚಾಯತ್ ಶುದ್ಧ ನೀರಿನ ಘಟಕ, ಶುದ್ಧ ನೀರಿಗಾಗಿ ಜನರ ಪರದಾಟ

ನ್ಯೂಸ್ ನಾಟೌಟ್ : ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಜನತೆಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ಘಟಕದ ಯಂತ್ರ ಪದೇ ಪದೆ ಕೈಗೊಡುತ್ತಿದ್ದು, ಜನರು ಶುದ್ಧ ಕುಡಿಯುವ ನೀರಿಗಾಗಿ ಪರದಾಟ ನಡೆಸುವಂತಾಗಿದೆ.

ಸುಳ್ಯದ ನಗರ ಪಂಚಾಯತ್ ಎದುರಿನಲ್ಲಿ ಅಳವಡಿಸುವ ಐದು ನಾಣ್ಯ ಹಾಕಿ ನೀರು ಪಡೆಯುವ ಈ ಯಂತ್ರವನ್ನೇ ಹೆಚ್ಚಿನ ಜನರು ತಮ್ಮ ದಿನನಿತ್ಯದ ಬಳಕೆಗೆ ಅವಲಂಬಿಸಿದ್ದಾರೆ. ಆದರೆ ಕೆಲವು ದಿನಗಳಿಂದ ಈ ಯಂತ್ರ ಪದೇ ಪದೆ ಕೆಟ್ಟು ಹೋಗಿದ್ದು , ಜನರು ನೀರಿಗಾಗಿ ಬಂದು ವಾಪಸ್‌ ಬಂದು ಹೋಗುವಂತಾಗಿದೆ.

ಈ ಬಗ್ಗೆ ನಗರ ಪಂಚಾಯತ್‌ನ್ನು ಸಂಪರ್ಕಿಸಿದಾಗ ಶುದ್ಧ ನೀರಿನ ಘಟಕದ ಯಂತ್ರದ ನಿರ್ವಹಣೆಯನ್ನು ಮೈಸೂರಿನಲ್ಲಿರುವ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಆದ್ದರಿಂದ ಅಲ್ಲಿನ ಸಿಬ್ಬಂದಿ ಬಂದು ದುರಸ್ತಿ ಮಾಡಬೇಕಾಗಿದೆ. ಆದರೆ ಅಲ್ಲಿಯತನಕ ಸಾರ್ವಜನಿಕರು ಮಾತ್ರ ಖಾಸಗಿ ಸಂಸ್ಥೆಗೆ ಹೆಚ್ಚು ಹಣಕೊಟ್ಟು ನೀರು ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಬೇಗ ಶುದ್ಧ ನೀರಿನ ಘಟಕದ ಯಂತ್ರವನ್ನು ದುರಸ್ತಿಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Related posts

ಸುಳ್ಯದಲ್ಲಿ ‘ಕಂಡದ ಗೌಜಿ ಕೆಸರ್ದ ಪರ್ಬ’, ವಿಷ್ಣುಮೂರ್ತಿ ಒತ್ತೆಕೋಲ ಗದ್ದೆಯಲ್ಲಿ ಅದ್ದೂರಿ ಕೆಸರು ಗದ್ದೆ ಸ್ಪರ್ಧೆಗಳಿಗೆ ಆಹ್ವಾನ

ಸುಳ್ಯ: ಬಸ್‌ನಲ್ಲಿ ಕಳೆದು ಹೋಯ್ತು ಒಡವೆ ,ಪ್ರಾಮಾಣಿಕತೆಯಿಂದ ವಾರೀಸುದಾರರಿಗೆ ಒಪ್ಪಿಸಿದ ನಿರ್ವಾಹಕ

ಸೌಜನ್ಯ ಅತ್ಯಾಚಾರ,ಕೊಲೆ ಪ್ರಕರಣ(Dharmastala Soujanya Rape and Murder Case):ಆರೋಪಿಗಳನ್ನು ಮಂಜುನಾಥ ಸ್ವಾಮಿ ಕಣ್ಣೆದುರೇ ತೋರಿಸಲಿ,ಧರ್ಮಸ್ಥಳ ಕ್ಷೇತ್ರ ಹಾಗೂ ಖಾವಂದರ ಅಪಪ್ರಚಾರ ಮಾಡಿದ್ರೆ ಹೋರಾಟ -ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ಎಚ್ಚರಿಕೆ,ವಿಡಿಯೋ ವೀಕ್ಷಿಸಿ