ಸುಳ್ಯ

ಪರಿವಾರಕಾನ ಬಳಿ ರಾಷ್ಟ್ರೀಯ ಹೆದ್ದಾರಿ ಸಮೀಪಕ್ಕೆ ಬಂದ ಕಾಡಾನೆ, ಒಂಟಿ ಆನೆ ಕಂಡು ಹೆದರಿದ ಸ್ಥಳೀಯರು

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಕೃಷಿಕರಿಗೆ ಕಾಡಾನೆಗಳದ್ದು ದೊಡ್ಡ ಸವಾಲಾಗಿದೆ. ಎಲ್ಲೂ ಒಂದು ಹಳ್ಳಿ ಮೂಲೆಗೆ ಬರುತ್ತಿದ್ದ ಕಾಡಾನೆಗಳು ಇದೀಗ ನೇರವಾಗಿ ನಗರಕ್ಕೂ ಕಾಲಿಡುತ್ತಿವೆ.

ಭಾನುವಾರ ಸುಳ್ಯದ ಪರಿವಾರಕಾನ ರಾಷ್ಟ್ರೀಯ ಹೆದ್ದಾರಿ ಬಳಿ ಅಮರಶ್ರೀ ಹಾಲ್ ಮುಂಭಾಗದ ಮನೆ ಹಿಂದಿನ ತೋಟಕ್ಕೆ ಒಂಟಿ ಕಾಡಾನೆ ದಾಳಿ ಇಟ್ಟಿದೆ. ತಡರಾತ್ರಿ ಆನೆಯನ್ನು ಕೆಲವರು ನೋಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಶರೀಫ್ ಎನ್ನುವವರ ತೋಟದಲ್ಲಿ ಕಾಡಾನೆ ನಡೆದಾಡಿರುವ ಹೆಜ್ಜೆ ಗುರುತು ಕೂಡ ಕಂಡು ಬಂದಿದೆ ಎನ್ನಲಾಗಿದೆ. ಈ ವಿಚಾರ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಇಂದು ಹೋಗಿ ಪರಿಶೀಲನೆ ನಡೆಸಿದ್ದಾರೆ.

Related posts

ಸುಳ್ಯ: ಗಣಿತ ಅಧ್ಯಯನ ಕೇಂದ್ರ ಉದ್ಘಾಟನೆ

ಜಾಲ್ಸೂರು: ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ..! ವಾಹನಗಳು ಜಖಂ

ಸುಳ್ಯ: ತಲವಾರು ಹಿಡಿದು ಬೈಕ್‌ನಲ್ಲಿ ಬಂದ ಅಪರಿಚಿತರು..! ಗಾಂಧಿನಗರದಲ್ಲಿ ರಾಜಾರೋಷದಿಂದ ಭಯದ ವಾತಾವರಣ ನಿರ್ಮಿಸಿದವರು ಯಾರು..?