ಸುಳ್ಯ

ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜಿನ ಎನ್‌ಸಿಸಿ ಘಟಕದಿಂದ ವಿಶೇಷ ಕಾಲ್ನಡಿಗೆ ಜಾಥಾ

ನ್ಯೂಸ್ ನಾಟೌಟ್: ದೇಶದೆಲ್ಲೆಡೆ ಆಗಸ್ಟ್ 15 ರಂದು 78ನೇ ವರ್ಷದ ಸ್ವಾತಂತ್ರ್ಯ ದಿನವನ್ನು ಆಚರಿಸಲು ವಿವಿಧ ಸಿದ್ಧತೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಬುಧವಾರ (ಆ. 14) ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಎನ್ ಸಿ ಸಿ ಘಟಕದ ವತಿಯಿಂದ ವಿಶೇಷ ಜಾಥಾ ಹಾಗೂ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಪರ್ತಕರ್ತ ಹರೀಶ್ ಬಂಟ್ವಾಳ್‌ ನಶಾ ಮುಕ್ತ ಭಾರತ ಅಭಿಯಾನದ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ.ಎಂ. ಪ್ರತಿಜ್ಞಾವಿಧಿ ಬೋಧಿಸಿದರು.

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಲೆಫ್ಟಿನೆಂಟ್ ಸೀತಾರಾಮ್ ಮಾರ್ಗದರ್ಶನದೊಂದಿಗೆ ಎನ್.ಸಿ.ಸಿ ಕೆಡೆಟ್ಸ್ ಕಾಲೇಜಿನಿಂದ ಪ್ರಾರಂಭಗೊಂಡು ಚೆನ್ನಕೇಶವ ದೇವಸ್ಥಾನದವೆರೆಗೆ ಜಾಥಾ ನಡೆಸಿಕೊಟ್ಟರು. IQAC ನಿರ್ದೇಶಕಿ ಡಾ. ಮಮತಾ ಕೆ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಭೋದಕ ಭೋದಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

Related posts

ಮಂಗಳೂರು:ಪ್ರೀತಿಸುತ್ತಿದ್ದ ಹುಡುಗಿ ಸುತ್ತಾಡಲು ಬಂದಿಲ್ಲವೆಂದು ಸಿಟ್ಟಿಗೆದ್ದ ಸುಳ್ಯ ಮೂಲದ ಯುವಕ..!,ಯುವತಿಯಿದ್ದ ಹಾಸ್ಟೆಲ್‌ಗೆ ಕಲ್ಲು ತೂರಿ ಕಿಟಕಿ ಗಾಜು ಒಡೆದು ದಾಂಧಲೆಗೆ ಯತ್ನ;ಸ್ಥಳೀಯರಿಂದ ಯುವಕನಿಗೆ ಥಳಿತ..! ಮುಂದೇನಾಯ್ತು?

ಭೀಕರ ರೈಲು ದುರಂತದ ಬೆನ್ನಲ್ಲೇ ಮುನ್ನೆಲೆಗೆ ಬಂತು ಅಂದು ಸುಬ್ರಹ್ಮಣ್ಯದಲ್ಲಿ ಸಂಭವಿಸಿದ್ದ ಘನಘೋರ ಬಸ್ಸು ದುರಂತ..! ಅಂದು ಶವಗಳನ್ನೆತ್ತಿ ನೆರವಾಗಿದ್ದ ಸುಳ್ಯದ ಉದ್ಯಮಿ ಹೇಳಿದ್ದೇನು?

ವೃದ್ಧ ಅತ್ತೆಯನ್ನು ಮೆನೆಯೊಳಗೆ ಕೂಡಿ ಹಾಕಿ ನಾಪತ್ತೆಯಾದ ಕಟುಕ ಅಳಿಯ ಸುಳ್ಯದಲ್ಲೊಂದು ಅಮಾನವೀಯ ಘಟನೆ