ಸುಳ್ಯ

ಸುಳ್ಯ: 10ನೇ ವರ್ಷದ ಮೊಸರುಕುಡಿಕೆ ಉತ್ಸವಕ್ಕೆ ಚೆನ್ನಕೇಶವ ದೇವಸ್ಥಾನದ ಬಳಿ ಅದ್ಧೂರಿ ಚಾಲನೆ, ಶೋಭಾಯಾತ್ರೆಯಲ್ಲಿ ಗಮನ ಸೆಳೆದ ಗೊಂಬೆ ಕುಣಿತ, ನಾಸಿಕ್‌ ಬ್ಯಾಂಡ್‌

ನ್ಯೂಸ್‌ ನಾಟೌಟ್‌: ಸುಳ್ಯ ವಿಶ್ವ ಹಿಂದೂ ಪರಿಷದ್ ಬಜರಂಗದಳ ಮತ್ತು ಮೊಸರುಕುಡಿಕೆ ಉತ್ಸವ ಸಮಿತಿಯಿಂದ ಸುಳ್ಯ ಪ್ರಖಂಡ ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನಾಚರಣೆಯ ಅಂಗವಾಗಿ 10ನೇ ವರ್ಷದ ಮೊಸರುಕುಡಿಕೆ ಉತ್ಸವಕ್ಕೆ ಸುಳ್ಯ ಚೆನ್ನಕೇಶವ ದೇವಸ್ಥಾನದ ಬಳಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ ಅದ್ಧೂರಿಯಾಗಿ ಚಾಲನೆ ನೀಡಿದರು.

ಶೋಭಾಯಾತ್ರೆಯು ಸುಳ್ಯದ ಚೆನ್ನಕೇಶವ ದೇವಸ್ಥಾನದ ಬಳಿಯಿಂದ ಮೊದಲ್ಗೊಂಡು ಪ್ರಮುಖ ರಸ್ತೆಗಳಲ್ಲಿ ಸಾಗಿತು. ಭವ್ಯವಾದ ಮೆರವಣಿಗೆಯಲ್ಲಿ ಯುವಕರಿಂದ ಸಾಹಸಮಯ ಅಟ್ಟಿ ಮಡಿಕೆ ಒಡೆಯುವುದು, ಗೊಂಬೆ ಕುಣಿತ, ನಾಸಿಕ್‌ ಬ್ಯಾಂಡ್‌ ಗಮನ ಸೆಳೆಯಿತು.

ಎ.ಪಿ.ಎಂ.ಸಿ. ಕುರುಂಜಿಭಾಗ್ ವಿವೇಕಾನಂದ ಸರ್ಕಲ್, ಜೂನಿಯರ್ ಕಾಲೇಜು ರಸ್ತೆ, ಮುಳಿಯ ಮೈದಾನ, ಶಾಸ್ತ್ರಿ ವೃತ್ತ, ವಿಶ್ವ ಸೆಂಟ್ರಲ್ ಶ್ರೀ ರಾಮಪೇಟೆ ಸುಳ್ಯ, ಶ್ರೀಹರಿ ಕಾಂಪ್ಲೆಕ್ಸ್, ರಾಜಶ್ರೀ, ಕಾಂಪ್ಲೆಕ್ಸ್‌, ಪಂಚಾಯತ್ ಬಸ್‌ ನಿಲ್ದಾಣ, ಗಾಂಧಿನಗರ, ಬಳಿಕ ಚೆನ್ನಕೇಶವ ದೇವಸ್ಥಾನದ ಮೈದಾನದ ಬಳಿ ವಿಶೇಷ ಆಕರ್ಷಣೆ ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆಯೊಂದಿಗೆ ಸಮಾಪ್ತಿಯಾಗಲಿದೆ. ಕಾರ್ಯಕ್ರಮದಲ್ಲಿ ಭಾರಿ ಸಂಖ್ಯೆಯಲ್ಲಿ ಹಿಂಧೂ ಬಾಂಧವರು ಪಾಲ್ಗೊಂಡಿದ್ದರು.

ಶೋಭಾಯಾತ್ರೆಯಲ್ಲಿ ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡ ಅಧ್ಯಕ್ಷ ಸೋಮಶೇಖರ್ ಪೈಕ, ಉಪಾಧ್ಯಕ್ಷ ರಜತ್ ಅಡ್ಕಾರ್‌, ಪ್ರಕಾಶ್ ಯಾದವ್, ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಅತ್ಯಾಡಿ, ಕಾರ್ಯದರ್ಶಿ ಸಂದೀಪ್ ಒಲಳಂಬೆ , ಕೋಶಾಧಿಕಾರಿ ನವೀನ್ , ಪ್ರಮುಖರಾದ ಭಾನುಪ್ರಕಾಶ್ ಪೆಲ್ತಡ್ಕ, ಬಜರಂಗದಳ ಸಂಯೋಜಕ ಹರಿಪ್ರಸಾದ್ ಸುಳ್ಯ, ವರ್ಷಿತ್ ಚೊಕ್ಕಾಡಿ , ಭಾನುಪ್ರಕಾಶ್ ಪೆರ್ಮುoಡ ಮತ್ತಿತರರು ಪಾಲ್ಗೊಂಡಿದ್ದರು.

Related posts

ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘದಿಂದ ಬಿಎಂಎಸ್ ಸ್ಥಾಪನಾ ದಿನಾಚಾರಣೆ, ಹಲವಾರು ಮುಖಂಡರು ಭಾಗಿ

ಸುಳ್ಯ: ಬಿರು ಬಿಸಿಲಿನ ಝಳಕ್ಕೆ ಪ್ರಜ್ಞೆ ತಪ್ಪಿ ಬಿದ್ದ ವ್ಯಕ್ತಿ, ಈ ಅಪರಿಚಿತ ವ್ಯಕ್ತಿಯ ಸಂಬಂಧಿಗಳಿಗೆ ತಿಳಿಸುವಿರಾ..?

ಸುಳ್ಯ: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವು, ಕೊನೆಗೂ ಫಲಿಸಲಿಲ್ಲ ಚಿಕಿತ್ಸೆ