ನ್ಯೂಸ್ ನಾಟೌಟ್: ತಾಲೂಕು ಮೊಗೇರ ಯುವ ವೇದಿಕೆ (ರಿ) ಸುಳ್ಯ 2023 ನೇ ಸಾಲಿನ 2 ನೇ ವರ್ಷದ ಕೆಸರು ಗದ್ದೆ ಕ್ರೀಡಾಕೂಟವು ಅಜ್ಜಾವರ ಗ್ರಾಮದ ಬೆಳಂತಿಮಾರ್ ಮೇನಾಲದಲ್ಲಿ ಬಾನುವಾರ ನಡೆಯಿತು. ಕ್ರೀಡಾಕೂಟವನ್ನು ಸುಶೀಲ ರೈ ಮೇನಾಲ ಉದ್ಘಾಟಿಸಿದರು. ವಿವಿಧ ಆಟೋಟ ಸ್ಪರ್ಧೆ ಮಹಿಳೆಯರು , ಪುರುಷರು ಹಾಗೂ ಮಕ್ಕಳಿಗೆ ನಡೆಯಿತು .
ಅತ್ಯುತ್ತಮ ಸಮಾಜ ಸೇವೆಗೆ ಖ್ಯಾತ ಕಾನ್ಸರ್ ತಜ್ಞರಾಗಿರುವ ಡಾ ರಘು ಬೆಳ್ಳಿಪಾಡಿ MBBS-DMRT ಇವರನ್ನು ಮತ್ತು ಮಾಸ್ಟರ್ ಮಂಜುನಾಥ್ ಬಂಗ್ಲೆ ಗುಡ್ಡೆಯನ್ನು ಅತ್ಯುತ್ತಮ ಕಲಾ ಸೇವೆಗೆ ಮತ್ತು 2022-23ನೇ ಸಾಲಿನ ದ. ಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರರಾದ ಶ್ರೀ ಮತಿ ದೇವಕಿ ಮತ್ತು ಶ್ರೀ ರಾಮ ಪಲ್ಲತಡ್ಕ ರವರು ಸನ್ಮಾನಿಸಿ ಗೌರವಿಸಲಾಯಿತು. ಸುಳ್ಯ ವಿಧಾನ ಸಭಾಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯರನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯ ಕ್ರಮದಲ್ಲಿ ಶಾಸಕಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಭಾಗವಹಿಸಿ ಕ್ರೀಡಾ ಪಟುಗಳಿಗೆ ಶುಭ ಹಾರೈಸಿದರು.
2023 ನೇ ಸಾಲಿನ ಆಟೋಟ ಸ್ಪರ್ಧೆ ಯಲ್ಲಿ, ವಾಲಿಬಾಲ್ ಪ್ರಥಮ ಪುರುಷರ ವಿಭಾಗ ಬೆಂಡಾಡಿ ಕಡಬ ವಾಲಿಬಾಲ್ ಪುರುಷರ ವಿಭಾಗ ದ್ವಿತೀಯ ತುಳುನಾಡ್ ಜವನೆರ್ ಕುಕ್ಕುಜಡ್ಕ, ಮಹಿಳೆಯರ ವಿಭಾಗ ತ್ರೋಬಲ್ ಪ್ರಥಮ ನಾಗ ಶ್ರೀ ದಾಸನ ಕಜೆ , ಮಹಿಳೆಯರ ವಿಭಾಗ ತ್ರೋಬಲ್ ದ್ವಿತೀಯ ಸ್ವಾಮಿ ಕೊರಗಜ್ಜ ಕೋಡಂಕೇರಿ ಬಾಲಿಲ , ಹಗ್ಗ ಜಗ್ಗಾಟ ಪುರುಷರ ವಿಭಾಗ ಪ್ರಥಮ ಮೈರಾಳ A ತಂಡ , ಹಗ್ಗ ಜಗ್ಗಾಟ ಪುರುಷರ ವಿಭಾಗ ದ್ವಿತೀಯ ಮೈರಾಳ B ತಂಡ, ಮಹಿಳೆಯರ ಹಗ್ಗ ಜಗ್ಗಾಟ ಪ್ರಥಮ ಕೊಡಿಯಾಲ, ದ್ವಿತೀಯ ಮಹಿಳೆಯರ ಹಗ್ಗ ಜಗ್ಗಾಟ ಬಂಗ್ಲೆ ಗುಡ್ಡೆ ತಂಡ, ಹಾಗೂ ಮಹಿಳೆಯರಿಗೆ , ಮಕ್ಕಳಿಗೆ ಆಟೋಟ ಸ್ಪರ್ಧೆ ಗಳಲ್ಲಿ ಭಾಗವಹಿಸಿ ಬಹುಮಾನ ತಮ್ಮದಾಗಿಸಿಕೊಂಡರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಜ್ಜಾವರದ ಸದಸ್ಯರಾದ ಪ್ರಸಾದ್ ರೈ ಮೇನಾಲ ,ಮಂಡೆಕೋಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಶಲ ಉದ್ದಂತಡ್ಕ,ತಾಲೂಕು ಮೋಗೆರ ಯುವ ವೇದಿಕೆ(ರಿ)ಸುಳ್ಯದ ಅಧ್ಯಕ್ಷರು ಲಕ್ಷ್ಮಣ ಪಾರೆ , ರಂಜಿತ್ ರೈ ಮೇನಾಲ, ಶಂಕರ ಪೆರಾಜೆ ,ಮಹೇಶ್ ರೈ ಮೇನಾಲ, ರಾಮಪ್ಪ ನಿವೃತ್ತ ಅರಣ್ಯ ರಕ್ಷಕರು, ಮೊಗೇರ ಸಂಘ ಸುಳ್ಯದ ಅಧ್ಯಕ್ಷರು ಕರುಣಾಕರ ಪಳ್ಳತ್ತಡ್ಕ , ಖ್ಯಾತ ಕಾನ್ಸರ್ ತಜ್ಞ ಡಾ ರಘು , ಮಂಜುನಾಥ್ ಬಂಗ್ಲೆ ಗುಡ್ಡೆ, ಸೋಮಶೇಖರ ಹಾಸನಡ್ಕ , ಶಂಕರ್ ಪೆರಾಜೆ, ಅಚ್ಚುತ್ತ ಮಲ್ಕಜೆ, ಕರ್ನಾಟಕ ಮೊಗೇರ ಸಂಘ( ರಿ ) ಬೆಂಗಳೂರು ಇದರ ಸಂಚಾಲಕರು ನಂದ ರಾಜ್ ಸಂಕೇಶ್ , ವಿಟ್ಲ ಉಪ ತಾಹಶಿಲ್ದಾರ್ ವಿಜಯ ವಿಕ್ರಂ ಜಿ ರಾಮಕುಂಜ , ತಾಲೂಕು ಮೊಗೇರ ಯುವ ವೇದಿಕೆ ಸ್ಥಾಪಕ ಲೋಕೇಶ್ ಪಿ , ಕೇಶವ ಮಾಸ್ತರ್ ಬಂಗ್ಲೆ ಗುಡ್ಡೆ, ಕರ್ನಾಟಕ ರಾಜ್ಯ ತುಳು ಅಕಾಡಮಿಯ ಮಾಜಿ ಸದಸ್ಯರು ರವಿ ಮಡಿಕೇರಿ , ರಾಜ್ಯ ಮೊಗೇರ ಸಂಘ (ರಿ ) ಬೆಂಗಳೂರು ಇದರ ಪ್ರಧಾನ ಕೋಶಾಧಿಕಾರ ಸೋಮಶೇಖರ ಹಾಸನಡ್ಕ ಮತ್ತು ಮೊಗೇರ ಸಂಘದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.