ಕರಾವಳಿ

ಸುಳ್ಯ: ಒಂದು ಸಿಗರೇಟಿಗೆ 3 ಲಕ್ಷ ರೂ. ಆಫರ್ ಕೊಟ್ಟ ಕುಡುಕ ಯುವಕ

ನ್ಯೂಸ್ ನಾಟೌಟ್ : ಕುಡಿದ ಮತ್ತಿನಲ್ಲಿ ತೇಲಾಡುತ್ತಿದ್ದ ಯುವಕನೊಬ್ಬ ಸಿಗರೇಟು ಕೊಟ್ಟರೆ ಮೂರು ಲಕ್ಷ ರು. ಕೊಡುವುದಾಗಿ ಅಂಗಡಿಯವನಿಗೆ ಆಫರ್ ಕೊಟ್ಟ ಅಪರೂಪದ ಘಟನೆ ಸುಳ್ಯದಿಂದ ವರದಿಯಾಗಿದೆ. ಸುಳ್ಯ ತಾಲೂಕಿನ ಮುರುಳ್ಯದ ಅಲೆಕ್ಕಾಡಿ ಎಂಬಲ್ಲಿ ಘಟನೆ ನಡೆದಿದೆ.

ಯುವಕನ ಹುಚ್ಚಾಟ ನೋಡಿ ಅಂಗಡಿಯವರು ನೆರೆದಿದ್ದವರು ಸುಸ್ತಾಗಿ ಹೋಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಯುವಕ ಕುಡಿದು ಅಂಗಡಿ ಮಾಲೀಕನ ಸಮೀಪ ಬಂದು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಲ್ಲದೆ ರಂಪಾಟ ಮಾಡಿದ್ದಾನೆ. ಸಂಕಪ್ಪ ನನಗೆ ಏನು  ಬೇಡ, ಒಂದು ಸಿಗರೇಟು ಕೊಡು, ನಾನು ಇಲ್ಲಿಂದ ಹೊರಟು ಹೋಗುತ್ತೇನೆ. ನಿನಗೆ ನಾನು ಮೂರು ಲಕ್ಷ ರೂ. ಕೊಡುತ್ತೇನೆ. ಕೊಡು ಸಿಗರೇಟು ಸಂಕಪ್ಪ ಎಂದು ಹೇಳುತ್ತಾನೆ. ಅಲ್ಲದೆ ತನ್ನ ವಿಡಿಯೋ ಮಾಡಿದವರ ಮೇಲೆಯೂ ನಿಂದನೆ ಮಾಡಿ ಹಲ್ಲೆಗೆ ಯತ್ನಿಸಿದ್ದಾನೆ ಎನ್ನುವ ಆರೋಪವೂ ಕೇಳಿ ಬಂದಿದೆ. ಒಟ್ಟಿನಲ್ಲಿ ಯುವಕನ ಪಿಡ್ಕ್ ಅವತಾರದ ವಿಡಿಯೋ ಮಾತ್ರ ಎಲ್ಲರ ಮೊಬೈಲ್ ನಲ್ಲಿಯೂ ಹರಿದಾಡುತ್ತಿದೆ.  

Related posts

ಅಪರಾಧ ಪ್ರಕರಣ ಭೇದಿಸಿದ ಸುಳ್ಯದ ಸರ್ಕಲ್ ಇನ್ಸ್‌ಪೆಕ್ಟರ್‌ , ಎಸ್‌ಐಗೆ ಗೃಹ ಸಚಿವರಿಂದ ಬೆಳ್ಳಿ ಪದಕ

ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗನಿಗೆ ವಿಶೇಷ ಪೂಜೆ,ಭಕ್ತಿ ಪರವಶರಾದ ಸಾವಿರಾರು ಭಕ್ತರು..!

Tiger claw: ನಿಮ್ಮ ಮನೆಯಲ್ಲೂ ವನ್ಯಜೀವಿ ವಸ್ತುಗಳಿವೆಯೇ..? ಮರಳಿಸಲು 2 ತಿಂಗಳ ಕಾಲಾವಕಾಶ ಕೊಟ್ಟ ಅರಣ್ಯ ಇಲಾಖೆ! ಷರತ್ತುಗಳೇನು..? ರಾಜ್ಯ ಸರ್ಕಾರ ಹೇಳಿದ್ದೇನು?