ಕರಾವಳಿ

ಸುಳ್ಯ: ತಾಲೂಕು ಸಾಹಿತ್ಯ ಸಮ್ಮೇಳನದ ಟೀ ಶರ್ಟ್ ಬಿಡುಗಡೆ

469

ನ್ಯೂಸ್ ನಾಟೌಟ್ : ಸುಳ್ಯ ತಾಲೂಕು ೨೬ ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದೆ. ಈ ನಡುವೆ ಸ್ವಾಗತ ಸಮಿತಿ ಅಧ್ಯಕ್ಷ ಉಮ್ಮರ್ ಬೀಜದಕಟ್ಟೆ ನೇತೃತ್ವದಲ್ಲಿ ಶನಿವಾರ ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಟೀ ಶರ್ಟ್ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಉಮ್ಮರ್‌, ಸಂಪಾಜೆ ,ಗೂನಡ್ಕ, ಸುಳ್ಯ ತಾಲೂಕಿನ ಹಲವು ಭಾಗಗಳು ಸರಣಿ ಭೂಕಂಪದಿಂದ ಭಯಭೀತರಾಗಿದ್ದಾರೆ. ಇಂತಹ ಸಂರ್ಭದಲ್ಲಿ ಕರುನಾಡ ಜನತೆಗೆ ಭೂಕಂಪ, ಜಲ, ನೆಲ , ನುಡಿಗಳನ್ನು ಜನರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಬೇಕಾಗಿದೆ. ಅಲ್ಲದೆ ಜನರಿಗೆ ಭಾಷೆ , ಸಂಸ್ಕೃತಿ , ಸಾಹಿತ್ಯದ ಮೂಲಕ ಕನ್ನಡದ ಅರಿವನ್ನು ಮೂಡಿಸಿ ಧೈರ್ಯ ತುಂಬಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು. ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು, ಪ್ರಧಾನ ಕಾರ್ಯದರ್ಶಿ ತೇಜಸ್ವಿ ಕಡಪಳ,

ದಾಮೋದರ ಮಾಸ್ಟರ್ , ಲತಾಶ್ರೀ, ದಯಾನಂದ , ಕೇಶವ ಮಾಸ್ಟರ್, ಚಂದ್ರಮತಿ , ಟಿಎಂ.ಶಹೀದ್‌, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ ಹಮೀದ್ ಉಪಸ್ಥಿತರಿದ್ದರು.

See also  ಆಲೆಟ್ಟಿ : ಸುಳ್ಯ ವಲಯದ ಅರಣ್ಯ ಇಲಾಖೆ ವತಿಯಿಂದ ಸರ್ಕಾರಿ ಶಾಲೆಯಲ್ಲಿ ವನ ಮಹೋತ್ಸವ, ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget