Uncategorizedಸುಳ್ಯ

ಸುಳ್ಯ: NCC ತಲ್‌ ಸೇನಾ ಕ್ಯಾಂಪ್‌ನಲ್ಲಿ ಜಟ್ಟಿಪಳ್ಳದ ವಿದ್ಯಾರ್ಥಿನಿಯ ಸಾಧನೆ, ಭಾರತೀಯ ಸೇನೆ ಸೇರುವ ಕನಸು ಬಿಚ್ಚಿಟ್ಟ ಸುಳ್ಯದ ಮತ್ತೋರ್ವ ಕುವರಿ

ನ್ಯೂಸ್ ನಾಟೌಟ್: ಸುಳ್ಯದ ಜಟ್ಟಿಪಳ್ಳ ಬೊಳಿಯಮಜಲು ನಿವಾಸಿ ದೀಪಿಕಾ ಎಸ್‌. ನಾಯ್ಕ್ NCC 19 ಕರ್ನಾಟಕ ಬೆಟಾಲಿಯನ್ ಕೆಡೆಟ್ ಇಂಟರ್ ಗ್ರೂಪ್ ತಲ್ ಸೇನಾ ಕ್ಯಾಂಪ್ (ಟಿಎಸ್ ಸಿ)ನ ಫೈಯರಿಂಗ್ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮೆರೆದಿದ್ದಾರೆ.

ಕಾರ್ಕಳದ ಜ್ಞಾನಸುಧಾ ಪಿಯು ಕಾಲೇಜಿನಲ್ಲಿ ನಡೆದ ಟಿಎಸ್ ಸಿ 1, ಶಿವಮೊಗ್ಗದ ಸಹ್ಯಾದ್ರಿ ಆರ್ಟ್ಸ್ ಆ್ಯಂಡ್ ಕಾಮರ್ಸ್ ಕಾಲೇಜಿನಲ್ಲಿ ನಡೆದ ಟಿಎಸ್ ಸಿ 2 ಹಾಗೂ ಮಂಗಳೂರಿನ ಸುರತ್ಕಲ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕೇಂದ್ರದಲ್ಲಿ ನಡೆದ ಟಿಎಸ್ ಸಿ 3 ರಲ್ಲಿ ಪಾಲ್ಗೊಂಡಿದ್ದರು. ದೀಪಿಕಾ ಮೂರು ಕ್ಯಾಂಪ್ ಗಳ ತನಕ ತಲುಪಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅವರು ಫೈರಿಂಗ್ ವಿಭಾಗದಲ್ಲಿ ಒಟ್ಟು 50ರಲ್ಲಿ 40 ಅಂಕ ಪಡೆದುಕೊಂಡಿದ್ದಾರೆ.

ಭವಿಷ್ಯದಲ್ಲಿ ಅವರಿಗೆ ಭಾರತೀಯ ಸೇನೆ ಸೇರುವ ಕನಸು ಇದ್ದು ಅದರತ್ತ ಗಮನ ಹರಿಸಿದ್ದೇನೆ ಎಂದು ಅವರು ನ್ಯೂಸ್ ನಾಟೌಟ್‌ಗೆ ತಿಳಿಸಿದ್ದಾರೆ. ಸದ್ಯ ಈಕೆ ಪುತ್ತೂರಿನ ಸಂತ ಫಿಲೋಮಿನ ಕಾಲೇಜಿನ ಅಂತಿಮ ವರ್ಷದ ಬಿ.ಸಿ.ಎ ವಿದ್ಯಾರ್ಥಿನಿಯಾಗಿದ್ದಾರೆ. ದಿವಂಗತ ಶುಭಕರ ಎಸ್. ನಾಯ್ಕ್ ಹಾಗೂ ಕಲರ್ಸ್ ಟೈಲರ್ ಸುಳ್ಯ ಇದರ ಮಾಲೀಕಿ ರಾಜೇಶ್ವರಿ ಎಂ. ಅವರ ಪುತ್ರಿ ಹಾಗೂ ಧೀರಜ್ ಎಸ್ ಅವರ ಸಹೋದರಿಯಾಗಿದ್ದಾರೆ.

Related posts

ಭೂಮಿಯೊಳಗೆ ಬಚ್ಚಿಟ್ಟಿದ್ದ ಗಾಂಜಾ ಪತ್ತೆ ಹಚ್ಚಿದ ಶ್ವಾನ..! ಕೊಡಗು ಪೊಲೀಸ್ ಶ್ವಾನ ‘ಕಾಪರ್‌’ಗೆ ಭಾರಿ ಶ್ಲಾಘನೆ

ಆರ್‌ಎಸ್ಎಸ್‌ ಕಾರ್ಯಕರ್ತನಿಗೆ ಬೆದರಿಕೆ ಹಾಕಿದ್ದು ಇಬ್ಬರು ಅಪ್ರಾಪ್ತರು..!

ಶೀಲ ಶಂಕಿಸಿ ಪತ್ನಿಯ ಮೈ-ಕೈ, ತೊಡೆಯನ್ನು ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟ ಪತಿ..! ತಂದೆ-ಮಗನ ವಿರುದ್ಧ ದೂರು ದಾಖಲು..!