ಸುಳ್ಯ

ಸುಳ್ಯ : ಶ್ರೀ ಚೆನ್ನಕೇಶವ ದೇವಸ್ಥಾನ ವರ್ಷಾವಧಿ ಜಾತ್ರೋತ್ಸವ; ಜೀರ್ಣೋದ್ಧಾರ ಸಮಿತಿಯ ಪೂರ್ವಭಾವಿ ಸಭೆ

ನ್ಯೂಸ್ ನಾಟೌಟ್ : ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಮುಂಬರುವ ಜನವರಿಯಲ್ಲಿ ನಡೆಯಲಿದ್ದು , ಜೀರ್ಣೋದ್ಧಾರ ಸಮಿತಿ ಸಭೆ ಸೋಮವಾರ (ನ.27) ದೇವಸ್ಥಾನದಲ್ಲಿ ನಡೆಯಿತು.

ಡಿಸೆಂಬರ್ 25ರ ನಂತರ ಜಾತ್ರೋತ್ಸವದ ಬಗ್ಗೆ ಭಕ್ತರ ಸಭೆ ಕರೆಯುವ ಬಗ್ಗೆ ನಿರ್ಣಯಿಸಲಾಯಿತು. ಜಾತ್ರೋತ್ಸವದಲ್ಲಿ ನಡೆಯುವ ವೈದಿಕ ಕಾರ್ಯಕ್ರಮಗಳ ಬಗ್ಗೆ, ಟೆಂಡ‌ರ್ ಪ್ರಕ್ರಿಯೆ ಬಗ್ಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಜಾತ್ರೋತ್ಸವ ಯಶಸ್ವಿಯಾಗಿ ನಡೆಸಲು ಕೈಗೊಳ್ಳದ ಬೇಕಾದ ಕ್ರಮದ ಬಗ್ಗೆ ಚರ್ಚಿಸಲಾಯಿತು. ಉಚಿತವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವವರು ದೇವಸ್ಥಾನವನ್ನು ಸಂಪರ್ಕಿಸಬೇಕಾಗಿ ವಿನಂತಿಸಲಾಯಿತು. ಸಭೆಯಲ್ಲಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತಸರ ಡಾ.ಹರಪ್ರಸಾದ್ ತುದಿಯಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ, ಸಮಿತಿ ಸದಸ್ಯರಾದ ಎಂ.ಮೀನಾಕ್ಷಿ ಗೌಡ, ಎನ್‌.ಜಯಪ್ರಕಾಶ್ ರೈ, ಲಿಂಗಪ್ಪ ಗೌಡ ಕೇರ್ಪಳ ಹಾಗೂ ಕೃಪಾಶಂಕರ ತುದಿಯಡ್ಕ ಉಪಸ್ಥಿತರಿದ್ದರು.

Related posts

ಸುಳ್ಯ : ಕೆವಿಜಿ ಅಮರಜ್ಯೋತಿ ಪಿಯು ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಸುಳ್ಯದ ಕಾವು ಬಳಿ ಟಿಟಿ ವ್ಯಾನ್ ಪಲ್ಟಿ..! ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು..!

‘ಅರೆಭಾಷಿಕರು ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಅರೆಭಾಷೆ ಕಲಿಸಿ’, ಪೋಷಕರಿಗೆ ಮಡಿಕೇರಿ ಗ್ರಾಮಾಂತರ ಆರಕ್ಷಕ ಠಾಣೆಯ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಕಿವಿಮಾತು