ನ್ಯೂಸ್ ನಾಟೌಟ್: ಕಳೆದ ಒಂದು ವಾರದಲ್ಲಿ ಹಲವಾರು ಕಳ್ಳತನ ಪ್ರಕರಣಗಳು ಸುಳ್ಯದಲ್ಲಿ ಬೆಳಕಿಗೆ ಬಂದಿದೆ. ಇದೀಗ ಬೈಕ್ ಕಳ್ಳರ ಹಾವಳಿಯೂ ಸುಳ್ಯದಲ್ಲಿ ಹೆಚ್ಚಾಗಿದ್ದು ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.
ಕೆಲವು ಬೈಕ್ ಸವಾರರು ಸುಳ್ಯ ಸರ್ಕಾರಿ ಬಸ್ ನಿಲ್ದಾಣದ ಬಳಿ ಬೈಕ್ ಪಾರ್ಕ್ ಮಾಡಿ ಕೆಲಸ ಹೋಗುತ್ತಾರೆ. ನೈಟ್ ಶಿಫ್ಟ್ ನಲ್ಲಿರುವ ಕೆಲಸಗಾರರು ಹೆಚ್ಚು ಪಾರ್ಕಿಂಗ್ ಮಾಡಿ ಬೇರೆ ಕಡೆಗೆ ಕೆಲಸಕ್ಕೆ ಹೋಗುತ್ತಿರುವುದು ತಿಳಿದು ಬಂದಿದೆ. ಇದೇ ಸಮಯವನ್ನು ಹೊಂಚು ಕಾಯುವ ಕಳ್ಳರು ಬೈಕ್ ಕದ್ದು ಪರಾರಿಯಾಗುತ್ತಿದ್ದಾರೆ. ಇಂತಹ ಘಟನೆ ಸುಳ್ಯದಲ್ಲಿ ನಡೆದ ಬೆನ್ನಲ್ಲೇ ಎಚ್ಚರಿಕೆಯಿಂದ ಇರಬೇಕಾಗಿದೆ. ತಮ್ಮ ವಾಹನಗಳಿಗೆ ತಾವೇ ಜವಾಬ್ದಾರರಾಗಿದ್ದು ಸಿಕ್ಕಸಿಕ್ಕಲ್ಲಿ ವಾಹನವನ್ನು ಪಾರ್ಕ್ ಮಾಡಿ ಹೋಗಬಾರದು ಅನ್ನುವುದು ನ್ಯೂಸ್ ನಾಟೌಟ್ ಕಳಕಳಿಯಾಗಿದೆ.