ಕರಾವಳಿಸಾಧಕರ ವೇದಿಕೆಸುಳ್ಯ

ಖ್ಯಾತ ರಕ್ತದಾನಿ ಸುಳ್ಯದ ಸುಧಾಕರ್ ರೈ ಕಾರು ಅಪಘಾತ, ಭೀಕರ ಅಪಘಾತವಾಗಿದ್ದರೂ ಪವಾಡ ಸದೃಶ್ಯ ಪಾರು, ರಕ್ತಕೊಟ್ಟು ಸಾವಿರಾರು ಜನರ ಬದುಕಿಸಿದ್ದ ವ್ಯಕ್ತಿಯ ಜೀವ ಉಳಿಸಿದ ಭಗವಂತ..!

ನ್ಯೂಸ್ ನಾಟೌಟ್: ಇನ್ನೊಬ್ಬರ ಜೀವನದಲ್ಲಿ ಒಳ್ಳೆಯದಾಗುವಂತಹ ಪುಣ್ಯದ ಕಾರ್ಯ ಮಾಡಿದ್ದರೆ ದೇವರು ಯಾವುದಾದರೊಂದು ರೂಪದಲ್ಲಿ ಬಂದು ನಮ್ಮನ್ನು ಕಾಪಾಡುತ್ತಾನೆ ಅನ್ನುವ ಮಾತು ನಿಜವಾಗಿದೆ. ಖ್ಯಾತ ರಕ್ತದಾನಿ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಸುಳ್ಯದ ಸಭಾಪತಿ ಪಿ.ಬಿ. ಸುಧಾಕರ್ ರೈಯವರ ಕಾರು ಇಂದು (ಸೋಮವಾರ) ಅಪಘಾತಗೊಂಡಿದೆ. ಭೀಕರವಾಗಿ ಅಪಘಾತಗೊಂಡಿದ್ದರೂ ಪವಾಡ ಸದೃಶ್ಯ ರೀತಿಯಲ್ಲಿ ಯಾವುದೇ ಗಾಯಗಳಿಲ್ಲದೆ ಪಿ.ಬಿ. ಸುಧಾಕರ್ ರೈಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಮಾತ್ರ ಜಖಂಗೊಂಡಿದ್ದು ಸುಮಾರು 50 ಸಾವಿರ ರೂ. ರಿಪೇರಿ ಖರ್ಚು ಆಗಬಹುದು ಎಂದು ಅಂದಾಜಿಸಲಾಗಿದೆ.

ಪಿ.ಬಿ. ಸುಧಾಕರ್ ರೈಯವರು ತಮ್ಮ ಕುಟುಂಬದವರನ್ನು ಭೇಟಿಯಾಗುವುದಕ್ಕಾಗಿ ಮಣಿಪಾಲಕ್ಕೆ ಹೋಗಿದ್ದರು. ಇಂದು ಬೆಳಗ್ಗೆ ಮಣಿಪಾಲದಿಂದ ಹೊರಟು ಪುತ್ತೂರು ಮೂಲಕ ಸುಳ್ಯಕ್ಕೆ ಬರುತ್ತಿದ್ದರು. ಈ ವೇಳೆ ಪುತ್ತೂರಿನ ಕುಂಬ್ರದ ಬಳಿ ಗೋಣಿಕೊಪ್ಪದಿಂದ ಮಂಗಳೂರಿಗೆ ಹೋಗುತ್ತಿದ್ದ ಕಾರೊಂದಕ್ಕೆ ಶ್ವಾನ ಅಡ್ಡ ಬಂದಿದೆ. ಶ್ವಾನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಕಾರು ಎದುರಿಗೆ ಬರುತ್ತಿದ್ದ ಪಿ.ಬಿ. ಸುಧಾಕರ್ ರೈ ಅವರ ಕಾರಿಗೆ ಗುದ್ದಿದೆ.

ಗುದ್ದಿದ ರಭಸಕ್ಕೆ ಎರಡೂ ಕಾರುಗಳು ಕೂಡ ಜಖಂಗೊಂಡಿದೆ. ಈ ಬಗ್ಗೆ ನ್ಯೂಸ್ ನಾಟೌಟ್ ಜೊತೆಗೆ ಮಾತನಾಡಿದ ಪಿಬಿ ಸುಧಾಕರ್ ರೈಯವರು, ಅಪಘಾತ ಅನ್ನುವುದು ಆಕಸ್ಮಿಕ. ಎದುರಿದ್ದ ಕಾರಿನವನು ಒಂದು ಜೀವವನ್ನು ಉಳಿಸುವುದಕ್ಕೆ ಪ್ರಯತ್ನಿಸಿ ನನ್ನ ಕಾರಿಗೆ ಗುದ್ದಿದ. ಪ್ರಾಣಿಯಾಗಲಿ ಅಥವಾ ಮನುಷ್ಯನಾಗಲಿ ಎಲ್ಲರಿಗೂ ಜೀವ ಒಂದೆ ಅಲ್ವಾ..ನನಗೆ ದೇವರ ದಯೆಯಿಂದ ಯಾವುದೇ ತೊಂದರೆ ಆಗಿಲ್ಲ. ಒಂಚೂರು ಗಾಯಗಳೂ ಆಗಿಲ್ಲ. ಅಪಘಾತದ ಭೀಕರತೆ ನೋಡಿದ್ರೆ ಅಲ್ಲಿ ಏನಾದರೂ ಆಗಿರಬಹುದು ಎಂದು ಅನಿಸುವಷ್ಟರ ಮಟ್ಟಿಗಿನ ಪರಿಸ್ಥಿತಿ ಕಂಡು ಬರುತ್ತಿತ್ತು. ಇಷ್ಟು ವರ್ಷ ರಕ್ತದಾನ ಮಾಡಿ ಅನೇಕ ಜನರ ಜೀವ ಉಳಿಸಿದ್ದೇನೆ. ದೇವರು ನನ್ನ ಜೀವ ಉಳಿಸಿದ, ನಾವು ಮಾಡುವ ಒಳ್ಳೆಯ ಕೆಲಸಗಳನ್ನು ದೇವರು ನೋಡುತ್ತಿರುತ್ತಾನೆ. ಅವನಿಂದಲೇ ನಾನು ಬದುಕಿದ್ದೇನೆ ಎಂದು ತಿಳಿಸಿದ್ದಾರೆ.

Related posts

ಹಳದಿ ರೋಗದಿಂದ ಅಡಿಕೆ ಬೆಳೆಗಾರರಿಗೆ ಭವಿಷ್ಯವಿಲ್ಲದಂತಾಗಿದೆ : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ

ಯತೀಶ್ ಅನ್ನುವ ವ್ಯಕ್ತಿಯ ಬಂಧನವಾಗಿಲ್ಲ: ಎಸ್‌ಪಿ ಸ್ಪಷ್ಟನೆ

ಸುಳ್ಯ ಬಿಲ್ ಪಾವತಿ ವಿವಾದ: ಎಇ ಹಾಗೂ ಗ್ರಾಹಕನ ನಡುವಿನ ವಾಕ್ಸಮರ, ಕೊನೆಗೂ ರಾಜಿಯಲ್ಲಿ ಇತ್ಯರ್ಥ