ಕ್ರೈಂ

ಪೈಚಾರು: ದೊಡ್ಡೇರಿ ನದಿಯಲ್ಲಿ ಮುಳುಗಿ ಬಾಲಕ ಸಾವು

ಸುಳ್ಯ ಪೈಚಾರು ದೊಡ್ಡೇರಿ ಬಳಿ ನದಿಯಲ್ಲಿ ಮುಳುಗಿ ಆರು ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಇದೀಗ ವರದಿಯಾಗಿದೆ.

ಆಂಧ್ರ ಮೂಲದ ಕುಟುಂಬಸ್ಥರು ಪೈಚಾರು ಬಳಿ ಬುಟ್ಟಿ ಹೆಣೆಯುವ ಕೆಲಸ ಮಾಡುತ್ತಿದ್ದು ಅಲ್ಲೇ ಪರಿಸರದಲ್ಲಿ ಟೆಂಟ್ ನಿರ್ಮಿಸಿ ವಾಸಿಸುತ್ತಿದ್ದರು.ಇಂದು ನದಿಗೆ ಸ್ನಾನ ಮಾಡಲೆಂದು ಕುಟುಂಬದ ಹಿರಿಯರು ಮತ್ತು ಮಕ್ಕಳು ಹೋಗಿರುತ್ತಾರೆ. ಸ್ನಾನ ಮಾಡುತ್ತಿದ್ದ ಸಂದರ್ಭ ಆರು ವರ್ಷದ ಮಗು ಕುಪ್ಪರಾ ಕಾಣೆಯಾಗಿದ್ದು, ಆತ ನೀರಿನಲ್ಲಿ ಮುಳುಗಿರುವ ಅನುಮಾನದಿಂದ ಹುಡುಕಾಡಿದಾಗ ಅಲ್ಲೇ ಪಕ್ಕದಲ್ಲಿ ಆತನ ಮೃತದೇಹ ಲಭಿಸಿದೆ ಎಂದು ತಿಳಿದುಬಂದಿದೆ. ನದಿ ಬದಿಯಲ್ಲಿ ಕಿರುಚಾಟ ಕೇಳಿದ ಸ್ಥಳೀಯರು ಹೋಗಿ ವಿಚಾರಿಸಿದಾಗ ನಡೆದ ಘಟನೆ ತಿಳಿದು ಬಂದಿದೆ

Related posts

ಅಮೆಜಾನ್, ಫ್ಲಿಪ್‌ಕಾರ್ಟ್ ಆನ್ ಲೈನ್ ಮಾರಾಟ ಸಂಸ್ಥೆಗಳ ವಿರುದ್ಧ ಕೇಂದ್ರದಿಂದ ಕ್ರಮ! ನೀವು ಈ ವಸ್ತುಗಳನ್ನು ಖರೀದಿಸಿದ್ದರೆ ಎಚ್ಚರ!

ವಿದೇಶದಲ್ಲಿ ಕುಳಿತುಕೊಂಡೇ ಸುಳ್ಯದ ವಿವಾಹಿತ ಮಹಿಳೆಗೆ “ತ್ರಿವಳಿ ತಲಾಖ್” ಕೊಟ್ಟ ಗಂಡ..! ವಾಟ್ಸಾಪ್ ನಲ್ಲಿ ಬಂದ ಆ ಸಂದೇಶ ಓದಿ ಬೆಚ್ಚಿ ಬಿದ್ದ ಮಹಿಳೆ..!

ಮಂಗಳೂರಲ್ಲಿ ಕಾರು-ಸ್ಕೂಟರ್‌ ಭೀಕರ ಅಪಘಾತ