ನ್ಯೂಸ್ ನಾಟೌಟ್ : ಕು. ಭಾಗೀರಥಿ ಮುರಳ್ಯ ಅವರಿಗೆ ಸುಳ್ಯ ತಾಲೂಕು ಆಡಳಿತ ಹಾಗೂ ನೌಕರರ ಸಂಘದಿಂದ ಇಂದು (ಮೇ 31) ಗೌರವಾರ್ಪಣೆ ಸಲ್ಲಿಸಲಾಯಿತು .
ತಾಲೂಕು ಪಂಚಾಯತ್‌ನಲ್ಲಿ ನಡೆದ ಅಧಿಕಾರಿಗಳ ಸಭೆಯ ಬಳಿಕ ತಾಲೂಕು ಆಡಳಿತ ಮಂಡಳಿಯ ಪರವಾಗಿ ತಹಶೀಲ್ದಾರ್ ಜಿ. ಮಂಜುನಾಥ್ , ತಾಲೂಕು ಪಂಚಾಯತ್ ಪರವಾಗಿ ಕಾರ್ಯನಿರ್ವಾಹಕ ಅಧಿಕಾರಿ ಎನ್. ಭವಾನಿ ಶಂಕರ್ , ಸರಕಾರಿ ನೌಕರರ ಸಂಘದಿಂದ ಸಂಘದ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ , ಪ್ರಧಾನಕಾರ್ಯದರ್ಶಿ ಧನಲಕ್ಷ್ಮೀ ಕುದ್ಪಾಜೆ , ರಾಜ್ಯ ಪರಿಷತ್ ಸದಸ್ಯ ಪೃಥ್ವೀ ಕುಮಾರ್ , ಹಾಗೂ ಪಧಾಧಿಕಾರಿಗಳು ಹೂ ಗುಚ್ಚ ನೀಡಿ ಗೌರವಿಸಿದರು.